Junior NTR: ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಜೂ.ಎನ್ಟಿಆರ್ ಕೈ ಬೆರಳ ಮೂಳೆ ಮುರಿತ
Junior NTR: ದೀಪಾವಳಿ ಹಬ್ಬಕ್ಕೆ ಜೂ.ಎನ್ಟಿಆರ್ ತಮ್ಮ ಮಕ್ಕಳೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಜೂ.ಎನ್ಟಿಆರ್ ಕೈಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದನ್ನು ಅಭಿಮಾನಿಗಳು ಗಮನಿಸಿ, ಪ್ರಶ್ನಿಸಿದ್ದರು.
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂ.ಎನ್ಟಿಆರ್ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಬೆರಳ ಮೂಳೆ ಮುರಿದಿದ್ದರಿಂದ, ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಂಡಿದ್ದಾರೆ.
2/ 7
ಜೂ.ಎನ್ಟಿಆರ್ ಹೈದರಾಬಾದ್ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ.
3/ 7
ದೀಪಾವಳಿ ಹಬ್ಬಕ್ಕೆ ಜೂ.ಎನ್ಟಿಆರ್ ತಮ್ಮ ಮಕ್ಕಳೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಜೂ.ಎನ್ಟಿಆರ್ ಕೈಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದನ್ನು ಅಭಿಮಾನಿಗಳು ಗಮನಿಸಿ, ಪ್ರಶ್ನಿಸಿದ್ದರು.
4/ 7
ಜೂ.ಎನ್ಟಿಆರ್ ಹೀಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಕೆಲವು ದಿನಗಳ ಮುಂಚೆಯಷ್ಟೆ ಜೂ.ಎನ್ಟಿಆರ್ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
5/ 7
ಜೂ. ಎನ್ಟಿಆರ್ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಜನವರಿ 07ಕ್ಕೆ ಬಿಡುಗಡೆ ಆಗಲಿದೆ. ಆ ಸಿನಿಮಾದದ ಬಿಡುಗಡೆ ಬಳಿಕವಷ್ಟೆ ಹೊಸ ಸಿನಿಮಾದಲ್ಲಿ ಜೂ.ಎನ್ಟಿಆರ್ ತೊಡಗಿಸಿಕೊಳ್ಳಲಿದ್ದಾರೆ.
6/ 7
ಇದರ ನಡುವೆ ಪ್ರಸ್ತುತ 'ಯವರು ಮೀಲೊ ಕೋಟಿಶ್ವರುಲು' ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಿದ್ದಾರೆ. ಜೂ.ಎನ್ಟಿಆರ್ಗೆ ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೆಲ ದಿನಗಳ ಬಳಿಕ ಮತ್ತೆ ಜೋಶ್ನೊಂದಿಗೆ ಸಿನಿಮಾ ಮಾಡಿದ್ದರು.
7/ 7
ಜೂ.ಎನ್ಟಿಆರ್, 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಮಾಡುವ ಮುನ್ನ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.