ಜೂನಿಯರ್ ಎನ್ ಟಿಆರ್ ಚಿಕ್ಕ ವಯಸ್ಸಿನಲ್ಲೇ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಅತಿ ಕಡಿಮೆ ಅವಧಿಯಲ್ಲಿ ಮಾಸ್ ಫಾಲೋಯಿಂಗ್ ಪಡೆದ ನಾಯಕ NTR, ಅವರು ಟಾಲಿವುಡ್ನ ಯಂಗ್ ಟೈಗರ್ ಆಗಿ ಹೊರಹೊಮ್ಮುತ್ತಿದ್ದಾರೆ. ನಂದಮೂರಿ ಹೀರೋಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಮತ್ತು ಮಾರ್ಕೆಟ್ ಹೊಂದಿರುವ ನಾಯಕ ಜೂನಿಯರ್ NTR, ಈಗಾಗಲೇ 30 ಸಿನಿಮಾಗಳಲ್ಲಿ ನಾಯಕನಾಗಿ ಮಾಡಿದ್ದಾರೆ.
ಜೂನಿಯರ್ NTR ಜನಿಸಿದ್ದು ಮೇ 20-1983ರಲ್ಲಿ, ಇವರ ತಂದೆ ನಂದಮೂರಿ ಹರಿಕೃಷ್ಣ ಮತ್ತು ತಾಯಿ ಶಾಲಿನಿ ಮುದ್ದಿನ ಮಗ, ಜೂನಿಯರ್ NTR ಚಿಕ್ಕ ವಯಸ್ಸಿನಿಂದಲೇ ಕೂಚಿಪುಡಿ ನೃತ್ಯವನ್ನು ಕಲಿತರು. 1991 ರಲ್ಲಿ, ಅಜ್ಜ ಎನ್ಟಿಆರ್ ಅವರು ತಮ್ಮ ನಿರ್ದೇಶನದಲ್ಲಿ ಬಾಬಾಯಿ ಬಾಲಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ 'ಬ್ರಹ್ಮರ್ಷಿ ವಿಶ್ವಾಮಿತ್ರ' ಹಿಂದಿ ಚಲನಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು.
ತಮ್ಮ ಮೊದಲ ಚಿತ್ರದಲ್ಲಿ ತಾತ ಎನ್ ಟಿಆರ್ ಮತ್ತು ಬಾಬಾಯಿ ಬಾಲಯ್ಯ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಆದರೆ ಈ ಸಿನಿಮಾ ಬಿಡುಗಡೆಯಾಗದಿರುವುದು ಬೇಸರದ ಸಂಗತಿ. ಆ ನಂತರ ನಿರ್ದೇಶಕ ಗುಣಶೇಖರ್ ನಿರ್ದೇಶನದ ಬಾಲ ರಾಮಾಯಣದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಬಲರಾಮನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದ್ರು. ‘ನಿನ್ನು ಛಡಾನಿ’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಆ ಸಿನಿಮಾದ ಜತೆಗೆ ಈಗಾಗಲೇ 30 ಸಿನಿಮಾ ಮಾಡಿದ್ದು, ಎನ್ಟಿಆರ್ 31 ಚಿತ್ರಗಳಲ್ಲಿ ನಟಿಸಿದ್ದಾರೆ.