Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

Monica Bedi Abu Salem Love Story: ಪ್ರೀತಿ ಕರುಡು ಎನ್ನುವ ಮಾತು ಈ ನಟಿ ಬಾಳಲ್ಲಿ ನಿಜವಾಗಿದೆ. ಭೂಗತ ಲೋಕದ ಡಾನ್ ಜೊತೆ ಮೋನಿಕಾ ಬೇಡಿ ಪ್ರೀತಿಯಲ್ಲಿ ಬಿದ್ದಿದ್ರು. ಬಳಿಕ ತನ್ನ ಬಾಲಿವುಡ್ ಗೋಲ್ಡನ್ ಕೆರಿಯರ್​ನನ್ನೇ ಹಾಳು ಮಾಡಿಕೊಂಡ್ರು. ಈ ಡಾನ್ ಜೊತೆ ಲವ್ ಆಫೇರ್​ನಿಂದ ನಟಿ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.

First published:

 • 19

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಆ ಭೂಗತ ಪಾತಕಿ ಬೇರೆ ಯಾರೂ ಅಲ್ಲ, 1993ರ ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಅಬು ಸಲೇಂ, ಈತ ಜೊತೆಗಿನ ಲವ್ ಆಫೇರ್​ನಿಂದ ನಟಿ ಮೋನಿಕಾ ಬೇಡಿ ಜೈಲಿಗೆ ಹೋಗಬೇಕಾದ ಸ್ಥಿತಿ ಬಂದಿತ್ತು.

  MORE
  GALLERIES

 • 29

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಸಂಜಯ್ ದತ್, ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ ಮತ್ತು ಗೋವಿಂದ ಅವರಂತಹ ಸ್ಟಾರ್ ನಟರ ಜೊತೆ ನಟಿ ಮೋನಿಕಾ ಬೇಡಿ ಸಿನಿಮಾ. 'ಜೋಡಿ ನಂ. 1', 'ಖಿಲೋನಾ' ಮತ್ತು 'ಸುರಕ್ಷಾ' ಮುಂತಾದ ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಕನ್ನಡದಲ್ಲೂ ಕೆಲ ಸಿನಿಮಾಗಳನ್ನು ಮಾಡಿದ್ದಾರೆ. ನಟ ಜಗ್ಗೇಶ್ ಜೊತೆಗಿನ ದ್ರೋಣ ಸಿನಿಮಾ ಕೂಡ ಹಿಟ್ ಆಗಿತ್ತು.

  MORE
  GALLERIES

 • 39

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಕುಖ್ಯಾತ ದರೋಡೆಕೋರನ ಪ್ರೀತಿಯಲ್ಲಿ ಬಿದ್ದ ಮೋನಿಕಾ. ಅಬು ಸಲೇಂನ ಪ್ರೀತಿಗಾಗಿ ಭಾರತದಲ್ಲಿದ್ದ ಸಂಬಂಧಿಕರು, ಸಿನಿ ಕೆರಿಯರ್ ಎಲ್ಲವನ್ನೂ ಬಿಟ್ಟು ಆತನ ಜೊತೆ ಹೊರಟೆ ಬಿಟ್ಟರು. ಸಂದರ್ಶನವೊಂದರಲ್ಲಿ ಮಾತಾಡಿದ್ದ ಮೋನಿಕಾ ಬೇಡಿ, ನೀವು ಪ್ರೀತಿಸುತ್ತಿರುವಾಗ, ನೀವು ಹಿಂದೆ -ಮುಂದೆ ಯೋಚಿಸೋದಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಮೋನಿಕಾ ಬೇಡಿಗೆ ಅಬು ಸಲೇಂನ ಕೃತ್ಯಗಳ ಬಗ್ಗೆ ತಿಳಿದಿರಲಿಲ್ಲವಂತೆ.

  MORE
  GALLERIES

 • 49

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಬಾಯ್ ಫ್ರೆಂಡ್ ನಿಜ ಬಣ್ಣ ನಟಿಗೆ ಗೊತ್ತಿರಲಿಲ್ಲ. ಪೋರ್ಚುಗಲ್​ನಲ್ಲಿ ಆತನನ್ನು ಬಂಧಿಸಿದ ನಂತರ, ಅಬು ಸಲೇಂ ಎಂಥಾ ಕೆಲಸಗಳನ್ನು ಮಾಡಿದ್ದಾನೆಂಬುದು ಮೋನಿಕಾ ಬೇಡಿಗೆ ತಿಳಿದಿದೆ. ಅವರ ವಿರುದ್ಧ ಪೋರ್ಚುಗಲ್​ನಲ್ಲಿ ದಾಖಲಾಗಿರುವ ಚಾರ್ಜ್ ಶೀಟ್ ಓದಿ ಶಾಕ್ ಆಗಿತ್ತು. ಅವರು ಅಧಿಕಾರಿಗಳಿಂದ ತಪ್ಪಿಸಿಕೊಂಡು ಓಡಾಡ್ತಿದ್ದಾರೆ ಎನ್ನುವ ವಿಚಾರ ಕೂಡ ನನಗೆ ಗೊತ್ತಿರಲಿಲ್ಲ ಎಂದು ನಟಿ ಮೋನಿಕಾ ಬೇಡಿ ಹೇಳಿಕೊಂಡಿದ್ದಾರೆ. (ಫೋಟೋ ಕ್ರೆಡಿಟ್ಗಳು: Instagram @monica_bedi_crazy_fan_)

  MORE
  GALLERIES

 • 59

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಭಯೋತ್ಪಾದಕ ಜೊತೆ ಹಣದ ಹೊಳೆಯ ನಡುವೆ ಮೋನಿಕಾ ಬದುಕುತ್ತಿದ್ದಾರೆ ಎಂದು ಜನರು ತಪ್ಪಾಗಿ ಭಾವಿಸಿದ್ರು. ಆದ್ರೆ ನಾನು ಆ ದಿನಗಳಲ್ಲಿ ಕಷ್ಟದ ಸಮಯವನ್ನು ಮಾತ್ರ ನೋಡಿದೆ ಎಂದಿದ್ದಾರೆ. ಅವರಿಂದಲೇ ಅಡುಗೆ ಕಲಿತೆ. ನಾನು ಎಂದಾದರೂ ಒಳ್ಳೆಯ ಜೀವನವನ್ನು ಕಂಡಿದ್ದರೆ ಅದು ನನ್ನ ಹೆತ್ತವರ ಮನೆಯಲ್ಲಿ ಅಥವಾ ನಾನು ಕಷ್ಟಪಟ್ಟು ದುಡಿದ ಹಣದಿಂದ ಮಾತ್ರ ಎಂದು ನಟಿ ಭಾವುಕರಾಗಿದ್ರು,(ಫೋಟೋ ಕ್ರೆಡಿಟ್ಗಳು: Instagram@kailash.more.3192)

  MORE
  GALLERIES

 • 69

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  1988 ರಲ್ಲಿ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಆಫರ್ ನೀಡಿದ ವ್ಯಕ್ತಿಯಿಂದ ತನಗೆ ಕರೆ ಬಂದಿತ್ತು ಎಂದು ಮೋನಿಕಾ ಬೇಡಿ ಶೋ ಟೈಮ್ ಮ್ಯಾಗಜೀನ್​ಗೆ ತಿಳಿಸಿದ್ದರು. ಕೆಲವು ಫೋನ್ ಕರೆಗಳ ನಂತರ ಅವನೊಂದಿಗೆ ಮಾತನಾಡಲು ಪ್ರಾರಂಭಿಸಿದ್ದರಂತೆ. ಆತ ತನ್ನನ್ನು ಅರ್ಸ್ಲಾನ್ ಅಲಿ ಎಂದು ಹೇಳಿಕೊಂಡಿದ್ದ, ನಾನು ಭೂಗತ ಪಾತಕಿ ಅಬು ಸಲೇಂನೊಂದಿಗೆ ಮಾತನಾಡುತ್ತಿದೆ ಅನ್ನೋದೆ ನನಗೆ ತಿಳಿದಿರಲಿಲ್ಲ ಎಂದು ನಟಿ ಹೇಳಿದ್ದಾರೆ.

  MORE
  GALLERIES

 • 79

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಮೋನಿಕಾ ಮತ್ತು ಅಬು ನಡುವೆ ಸ್ನೇಹ ಹೆಚ್ಚಾಯಿತು. 9 ತಿಂಗಳ ಸ್ನೇಹದ ನಂತರ ಮತ್ತೊಮ್ಮೆ ಭೇಟಿಯಾದರು. ಅವರು ಆಗಾಗ್ಗೆ ಸುಳ್ಳು ಗುರುತನ್ನು ಬಳಸುತ್ತಿದ್ದರು ಎಂದು ನಟಿ ಹೇಳಿದ್ದರು. ಈ ಗುರುತಿನಿಂದಾಗಿ ಅವರು ಪೋರ್ಚುಗಲ್​ನಲ್ಲಿ ಸಿಕ್ಕಿಬಿದ್ದರು. ಅವನು ತನ್ನ ನಿಜವಾದ ಹೆಸರನ್ನು ಬಳಸಿದ್ದರೆ ಅವನು ಬಹಳ ಹಿಂದೆಯೇ ಸಿಕ್ಕಿಬೀಳುತ್ತಿದ್ದ ಎಂದು ನಟಿ ಹೇಳಿದ್ರು. (ಫೋಟೋ ಕ್ರೆಡಿಟ್​ಗಳು: Instagram@globalstarsblog)

  MORE
  GALLERIES

 • 89

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಮೋನಿಕಾ ಮೂರನೇ ಬಾರಿಗೆ ದುಬೈಗೆ ಹೋದಾಗ ದರೋಡೆಕೋರ ತನ್ನ ನಿಜವಾದ ಹೆಸರನ್ನು ಅವಳಿಗೆ ಹೇಳಿದ್ದ. ತನ್ನ ಜೀವನದ ಬಗ್ಗೆ ಹೇಳಿ ಬದಲಾಗೋದಾಗಿ ಭರವಸೆ ನೀಡಿದ್ದನಂತೆ. ಅಬು ಮತ್ತು ಮೋನಿಕಾ ಅವರನ್ನು 2002 ರಲ್ಲಿ ಪೋರ್ಚುಗಲ್​ನಲ್ಲಿ ನಕಲಿ ಪಾಸ್ಪೋರ್ಟ್ ಬಳಸಿದ ಆರೋಪದ ಹಿನ್ನೆಲೆ ಬಂಧಿಸಲಾಯಿತು. ಅವರನ್ನು 2005 ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಎರಡು ವರ್ಷಗಳ ಜೈಲಿನಲ್ಲಿ ಕಳೆದ ನಂತರ, ಮೋನಿಕಾ ಬೇಡಿಯನ್ನು 2007 ರಲ್ಲಿ ಬಿಡುಗಡೆ ಮಾಡಲಾಯಿತು.

  MORE
  GALLERIES

 • 99

  Monica Bedi: ಭಯೋತ್ಪಾದಕನ ಜೊತೆ ಪ್ರೀತಿಯಲ್ಲಿ ಬಿದ್ದ ಮೋನಿಕಾ ಬೇಡಿ! ಆರೋಪಿ ಜೊತೆ ಜೈಲು ಹಕ್ಕಿಯಾದ ನಟಿಯ ಕಣ್ಣೀರ ಕಥೆ

  ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅಬು ಸಲೇಮ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1993 ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರರಲ್ಲಿ ಅಬು ಸಲೇಂ ಒಬ್ಬರು, ಇದರಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. (ಫೋಟೋ ಕ್ರೆಡಿಟ್ಗಳು: Instagram @monica_bedi_crazy_fan_)

  MORE
  GALLERIES