ಈ ಪಟ್ಟಿಯಲ್ಲಿ ನಟಿ ದಿವ್ಯಾ ಭಾರ್ತಿ ಹೆಸರು ಮೊದಲ ಸ್ಥಾನದಲ್ಲಿದೆ. ದಿವ್ಯಾ ಭಾರತಿ ಸಾವು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕೇವಲ 19ನೇ ವಯಸ್ಸಿನಲ್ಲಿ ನಟಿಯೊಬ್ಬಳ ಸಾವಿನಿಂದ ಬಾಲಿವುಡ್ ಬೆಚ್ಚಿಬಿದ್ದಿತ್ತು. ದಿವ್ಯಾ ಭಾರತಿ ತನ್ನ ಮನೆಯ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಆಕೆಯ ಸಾವು ಇಂದಿಗೂ ನಿಗೂಢವಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಪ್ರಶ್ನೆಗಳು ಇಂದಿಗೂ ಕಾಡ್ತಿದೆ.
1997ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದ ನಟಿ ನಫೀಸಾ ಜೋಸೆಫ್ ಸಾವು ಇಂದಿಗೂ ನಿಗೂಢವಾಗಿದೆ. ನಫೀಸಾ ತನ್ನ 25ನೇ ವಯಸ್ಸಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಫೀಸಾ ‘ತಾಳ್’ ಚಿತ್ರದಲ್ಲಿ ನಟಿಸಿದ್ದರು ಮತ್ತು ಎಂಟಿವಿಯಲ್ಲಿ ನಿರೂಪಕಿಯೂ ಆಗಿದ್ದರು. ನಟಿಯ ಸಾವಿಗೆ ಮದುವೆ ಮುರಿದು ಬಿದ್ದಿರುವುದೇ ಕಾರಣ ಎಂದು ನಫೀಸಾ ಕುಟುಂಬಸ್ಥರು ಹೇಳಿದ್ದರು.