Jeremy Renner: ಅವೆಂಜರ್ಸ್ ಖ್ಯಾತಿಯ ಹಾಲಿವುಡ್ ನಟನಿಗೆ ಅಪಘಾತ, ಜರ್ಮಿ ರೆನ್ನರ್ ಸ್ಥಿತಿ ಗಂಭೀರ
ಹೊಸ ವರ್ಷಕ್ಕೆಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅವೆಂಜರ್ಸ್ ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಜರ್ಮಿ ರೆನ್ನರ್ಗೆ ಅಪಘಾತ ಸಂಭವಿಸಿದ್ದು, ನಟ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆ ದಾಖಲಿಸಲಾಗಿದೆ.
ಹೊಸ ವರ್ಷದ ಪ್ರಯುಕ್ತ ನವೆಡಾದಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ಹೋಗುತ್ತಿದ್ದಾಗ ಹಿಮದಿಂದ ಕೂಡಿದ ರಸ್ತೆಯಲ್ಲಿ ಅಪಘಾತ ನಡೆದಿದ್ದು, ನಟ ಜರ್ಮಿ ರೆನ್ನರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
2/ 7
ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಜರ್ಮಿ ರೆನ್ನರ್ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.
3/ 7
ಆಸ್ಪತ್ರೆಯಲ್ಲಿ ಜರ್ಮಿ ರೆನ್ನರ್ ಜೀವಕ್ಕೆ ಅಪಾಯ ಇಲ್ಲವೆಂದು ವೈದ್ಯರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
4/ 7
ಮಾರ್ವೆಲ್ ಅವೆಂಜರ್ಸ್ ಸರಣಿಯ ಸಿನಿಮಾಗಳಲ್ಲಿ ಜರ್ಮಿ ಅವರ Hawkeye ಪಾತ್ರ ಜನಪ್ರಿಯವಾಗಿತ್ತು. ಕ್ಯಾಪ್ಟನ್ ಅಮೆರಿಕ ಮುಂತಾದ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಜರ್ಮಿ ರೆನ್ನರ್ ನಟಿಸಿದ್ದಾರೆ
5/ 7
ಅಲ್ಲದೇ ಹರ್ಟ್ ಲಾಕರ್ ಸಿನಿಮಾದ ಅಭಿನಯಕ್ಕಾಗಿ ಜರ್ಮಿ ರೆನ್ನರ್ ಆಸ್ಕರ್ ಅವಾರ್ಡ್ ಪಡೆದಿದ್ದಾರೆ.
6/ 7
ಅಮೆರಿಕದಲ್ಲಿ ಹಿಮಗಾಳಿಗೆ ಜನರು ತತ್ತರಿಸಿದ್ದು, ಈಗಾಗಲೇ 70ಕ್ಕೂ ಹೆಚ್ಚು ಮಂದಿ ಚಳಿಗೆ ಬಲಿಯಾಗಿದ್ದಾರೆ.
7/ 7
ವಿದ್ಯುತ್ ಸಂಪರ್ಕ ಕಡಿತದಿಂದ ಲಕ್ಷಾಂತರ ಜನರು ತತ್ತರಿಸುತ್ತಿದ್ದಾರೆ. ರಸ್ತೆಗಳು ಹಿಮದಿಂದ ಆವರಿಸಿಕೊಂಡಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.