ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಹೆಂಡತಿ ಜಯಾ ಬಚ್ಚನ್ ನೇರ ನುಡಿಯ ಸ್ವಭಾವದವರು. ಏನೇ ಇದ್ದರು ಅದನ್ನು ಹಿಂದು ಮುಂದು ನೋಡದೆ ನೇರವಾಗಿ ಹೇಳುತ್ತಾರೆ. ಮಾಧ್ಯಮಗಳ ಮುಂದಾಗಲಿ ಅಥವಾ ಬೇರೆಯವರೆದುರಾಗಿ ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ಸ್ವಭಾವ ಅವರದ್ದು.
2/ 8
ಹಿಂದೊಮ್ಮೆ ನಟ ಶಾರುಖ್ ಖಾನ್ ಅವರ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ಜಯಾ ಬಚ್ಚನ್ ಮಾಧ್ಯಮದವರ ಮುಂದೆ ನೇರವಾಗಿ ಹೇಳಿದ್ದರು.
3/ 8
ಹಲವು ವರ್ಷಗಳ ಹಿಂದೆ ಜಯಾ ಬಚ್ಚನ್ ಅವರು ಪೀಪಲ್ಸ್ ಮ್ಯಾಗಜಿನ್ ಗೆ ಸಂದರ್ಶನ ನೀಡುವ ವೇಳೆ ಈ ವಿಚಾರವನ್ನು ಬಹಿರಂಗ ಪಡಿಸಿದ್ದರು.
4/ 8
2008ರಲ್ಲಿ ಕತ್ರಿನಾ ಕೈಫ್ ಅವರ ಹುಟ್ಟು ಹಬ್ಬದ ಸಮಯದಲ್ಲಿ ಶಾರುಖ್ ಖಾನ್ ಅವರು ಐಶ್ವರ್ಯಾ ರೈ ಬಗ್ಗೆ ಅಸಹ್ಯಕರ ಮಾತು ಮಾತನಾಡಿದ್ದರು. ಈ ವಿಚಾರ ತಿಳಿದು ಸಿಟ್ಟಾಗಿದ್ದ ಜಯಾ ಬಚ್ಚನ್ ಆತ ನನ್ನ ಮನೆಯಲ್ಲಿ ಇರುತ್ತಿದ್ದರೆ ನನ್ನ ಮಗನಂತೆ ಆತನ ಕೆನ್ನಗೆ ಬಾರಿಸುತ್ತಿದ್ದೆ ಎಂದು ಹೇಳಿದ್ದರು.
5/ 8
ಆದರೆ ನಿಜವಾಗಿ ಶಾರುಖ್ ಖಾನ್ ಐಶ್ವರ್ಯಾ ರೈ ಬಗ್ಗೆ ಏನನ್ನೂ ಮಾತನಾಡಿರಲಿಲ್ಲ ಎಂದು ನಂತರ ದಿನಗಳಲ್ಲಿ ಸ್ಪಷ್ಟವಾಗಿತು.
6/ 8
ಇನ್ನು ಜಯಾ ಬಚ್ಚನ್ ಮತ್ತು ಶಾರುಖ್ ಖಾನ್ ಮಧ್ಯೆ ಇರುವ ಆತ್ಮೀಯತೆ ಅಮ್ಮ-ಮಗನ ಸಂಬಂಧಂತೆ. ಜಯಾ ಬಚ್ಚನ್ ಯಾವಾಗಲೂ ಶಾರುಖ್ ಖಾನ್ ನನ್ನ ವೀಕ್ನೆಸ್ ಎಂದು ಹೇಳಿತ್ತಿರುತ್ತಾರೆ. ಶಾರುಖ್ ಖಾನ್ ಅವರನ್ನು ತಮ್ಮ ಮಗನಷ್ಟೇ ಪ್ರೀತಿಸುತ್ತಾರೆ.
7/ 8
ಸಲ್ಮಾನ್ ಖಾನ್ ಜೋಡಿಯಾಗಿ ಐಶ್ವರ್ಯಾ ರೈ ನಟಿಸುತ್ತಿದ್ದ ಚಿತ್ರವೊಂದರ ಶೂಟಿಂಗ್ ವೇಳೆ 'ಸಲ್ಮಾನ್ ಖಾನ್ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು' ಎಂದು ಐಶ್ವರ್ಯಾ ರೈ ಆರೋಪಿಸಿದ್ದರು. ಐಶ್ಯರ್ಯಾ ರೈ ತಮ್ಮ ಮೇಲಾದ ಹಲ್ಲೆ ಪ್ರಕರಣವನ್ನು ಧೈರ್ಯವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
8/ 8
ಈ ಕಾರಣಕ್ಕೆ ಶಾರುಖ್ ಖಾನ್ ಜತೆ ಐಶ್ಯರ್ಯಾ ರೈ ನಟಿಸಬೇಕಿದ್ದ 'ಚಲ್ತೆ ಚಲ್ತೆ' ಚಿತ್ರದಿಂದ ಐಶ್ವರ್ಯಾ ರೈ ಅವರನ್ನು ಹೊರಹಾಕಿ ನಟಿ ರಾಣಿ ಮುಖರ್ಜಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.