ಕಾಲಿವುಡ್ ಜೋಡಿ ಪೋಷಕರಾದ ಖುಷಿಯನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ಅಟ್ಲೀ, ಪ್ರಿಯಾ ದಂಪತಿ ಪೋಷಕರಾದ ಸಂಭ್ರಮದಲ್ಲಿದ್ದಾರೆ. ನಟಿ ಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿಯಾದ ಸುದ್ದಿಯನ್ನು ನಟಿ ಪ್ರಿಯಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 'ಇಟ್ಸ್ ಎ ಬಾಯ್' ಎಂದು ಬರೆದು, ಮಗುವಿನ ಶೂ ತೋರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಟ್ಲೀ, ಪ್ರಿಯಾ ದಂಪತಿ ಡಿಸೆಂಬರ್ 2022ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ರು. ಅಟ್ಲೀ, ಪ್ರಿಯಾ ದಂಪತಿ ಡಿಸೆಂಬರ್ 2022ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ರು. ಜನವರಿ 31ರಂದು ಮೊದಲ ಮಗುವನ್ನು ದಂಪತಿ ವೆಲ್ ಕಂ ಮಾಡಿದ್ದಾರೆ. ಅಭಿಮಾನಿಗಳೊಂದಿಗೆ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅನೇಕ ನಟ-ನಟಿಯರು ಸಹ ದಂಪತಿ ಶುಭಕೋರಿದ್ದಾರೆ. ನಿರ್ದೇಶಕ ಅಟ್ಲೀ ಮತ್ತು ತಮಿಳು ನಟಿ ಪ್ರಿಯಾ 2014 ರಲ್ಲಿ ಮದುವೆಯಾದ್ರು, ಅದಕ್ಕೂ ಮೊದಲು ಅನೇಕ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಎರಡು ತಿಂಗಳ ಹಿಂದೆ ಅಟ್ಲೀ ಮತ್ತು ಪ್ರಿಯಾ ಮದುವೆಯಾಗಿ 8 ವರ್ಷಗಳನ್ನು ಪೂರೈಸಿದ್ದು, ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಟ್ಲೀ ಕುಮಾರ್ ಹಾಗೂ ಪ್ರಿಯಾ ದಂಪತಿ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.