Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

Janhvi Kapoor: ಶ್ರೀದೇವಿಯ ಮಗಳು ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿ ಹಲವು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾದರು. NTR 30 ಚಿತ್ರದ ಮೂಲಕ ಜಾನ್ವಿ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ಬಾಲಿವುಡ್ ಬ್ಯೂಟಿಗೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ.

First published:

  • 18

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    ಜಾನ್ವಿ ತೆಲುಗಿನಲ್ಲಿ NTR 30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಪೂಜಾ ಕಾರ್ಯಕ್ರಮ ಕೂಡ ನೆರವೇರಿದೆ. ಶೂಟಿಂಗ್​ಗಾಗಿ ಎಲ್ಲಾ ತಯಾರಿ ಕೂಡ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಮಾತಾಡಿದ್ದ ಜಾನ್ವಿ  ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ರು. ಇದರ ಬೆನ್ನಲ್ಲೇ ಜಾನ್ವಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಫೋಟೋ: ಟ್ವಿಟರ್.

    MORE
    GALLERIES

  • 28

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    ಅಖಿಲ್ ಏಜೆಂಟ್ ನಂತರ ವಂಶಿ ಯುವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡಲಿದ್ದಾರಂತೆ. ಹೊಸ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದ ನಾಯಕಿಯಾಗಿ ಜಾನ್ವಿ ಕಪೂರ್ ಅವರನ್ನು ಆಯ್ಕೆ ಮಾಡಿದ್ದಾರಂತೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಫೋಟೋ: ಟ್ವಿಟರ್.

    MORE
    GALLERIES

  • 38

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    ಇಷ್ಟೇ ಅಲ್ಲದೇ ಜಾನ್ವಿಗೆ ತೆಲುಗಿನಲ್ಲಿ ಮತ್ತೊಂದು ಆಫರ್ ಕೂಡ ಬಂದಿದೆಯಂತೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಹಾಗೂ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಕಪೂರ್ ಹೆಸರನ್ನು ಅಂತಿಮಗೊಳಿಸಲಾಗಿದೆಯಂತೆ. ಫೋಟೋ: ಟ್ವಿಟರ್

    MORE
    GALLERIES

  • 48

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    ರಾಮ್ ಚರಣ್ ಸಿನಿಮಾ ಕಬಡ್ಡಿ ಹಿನ್ನೆಲೆಯುಳ್ಳ ಕಥೆ ಒಳಗೊಂಡಿದೆ. ಚಿತ್ರವು ಪ್ರಸ್ತುತ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಲಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಾಯಕಿಯಾಗಿ ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಆಯ್ಕೆ ಮಾಡಿದ್ದಾರಂತೆ. ಫೋಟೋ : ಟ್ವಿಟರ್

    MORE
    GALLERIES

  • 58

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    ಜಾನ್ವಿ ಕುರಿತಾದ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ. ಇದೀಗ ತೆಲುಗಿನಲ್ಲಿ ನಟಿಸಲು ನಟಿ 5 ಕೋಟಿಗೆ ಬೇಡಿಕೆ ಇಟ್ಟಿದ್ದಾರಂತೆ. ಫೋಟೋ: ಟ್ವಿಟರ್.

    MORE
    GALLERIES

  • 68

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    NTR 30 ಜಾನ್ವಿ ಮೊದಲ ಸೌತ್ ಸಿನಿಮಾ ಆಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇದರ ಜೊತೆಗೆ RRR ಚಿತ್ರದ ಮೂಲಕ ಜಾಗತಿಕ ಮನ್ನಣೆ ಗಳಿಸಿರುವ ನಟ ಎನ್​ಟಿಆರ್ ಜೊತೆ ನಟಿಸಲು ನಟಿ ಕೂಡ ಕಾಯುತ್ತಿದ್ದಾರೆ.

    MORE
    GALLERIES

  • 78

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    ಜಾನ್ವಿಯ ಆದಾಯದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2022ರ ವೇಳೆಗೆ ಆಕೆಯ ಸಂಪತ್ತು $ 10 ಮಿಲಿಯನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ನಿವ್ವಳ ಮೌಲ್ಯ ರೂ. 82 ಕೋಟಿಯಂತೆ. ಜಾನ್ವಿಯ ತಿಂಗಳ ಆದಾಯ 0.5 ಕೋಟಿ ಮತ್ತು ವಾರ್ಷಿಕ ಆದಾಯ 6 ರಿಂದ 8 ಕೋಟಿ ಎಂದು ಹೇಳಲಾಗಿದೆ. ಫೋಟೋ: Instagram

    MORE
    GALLERIES

  • 88

    Janhvi Kapoor: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಮ್ಮನಂತೆ ಮಿಂಚುತ್ತಾರಾ ಜಾನ್ವಿ? ಶ್ರೀದೇವಿ ಮಗಳಿಗೆ ಬಂಪರ್ ಆಫರ್​!

    ಇತ್ತೀಚೆಗಷ್ಟೇ ಜಾನ್ವಿ ಅಭಿನಯದ ‘ಮಿಲಿ’ ಸಿನಿಮಾ ತೆರೆಕಂಡಿತ್ತು. ಮಲಯಾಳಂನ ಹೆಲೆನ್ ಚಿತ್ರದ ರಿಮೇಕ್ ಆಗಿ ಮಿಲಿ ತೆರೆಕಂಡಿತ್ತು. ಇದೀಗ ಜಾನ್ವಿಗೆ ತೆಲುಗಿನಲ್ಲಿ ಡಿಮ್ಯಾಂಡ್ ಜೋರಾಗಿದ್ದು, ಅಮ್ಮನಂತೆ ಜಾನ್ವಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಫೋಟೋ : Instagram.

    MORE
    GALLERIES