ಇದೇ ವೇಳೆ ಮಾತನಾಡಿದ ಬೋನಿ ಕಪೂರ್, ''ನಮಗೆ ದಕ್ಷಿಣ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನ. ಶ್ರೀದೇವಿ ಇಲ್ಲಿ ಸಿನಿಮಾಗಳಲ್ಲಿ ನಟಿಸುವಾಗ ಆಲ್ ಇಂಡಿಯಾ ಲೇಡಿ ಸ್ಟಾರ್ ಎಂದು ಹಲವಾರು ಸಂದರ್ಭಗಳಲ್ಲಿ ಉಲ್ಲೇಖಿಸಲಾಗಿದೆ. ಒಳ್ಳೆಯ ಕಥೆ ಸಿಕ್ಕರೆ.. ಜಾನ್ಹವಿ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ನಟಿಸುವುದು ಖಚಿತ ಎಂದು ಹೇಳಿದ್ದಾರೆ. ಜಾನ್ಹವಿ ಕಪೂರ್ ಸೌತ್ ಇಂಡಸ್ಟ್ರಿ ಎಂಟ್ರಿ ಬಗ್ಗೆ ಇದ್ದ ಎಲ್ಲಾ ಅನುಮಾನಗಳನ್ನು ಬೋನಿ ಕಪೂರ್ ದೂರ ಮಾಡಿದ್ದಾರೆ.