ಜಾನ್ವಿ ಪೋಸ್ಟ್ ಗೆ ಅಭಿಮಾನಿಗಳು ಮತ್ತು ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಹ ಕಾಮೆಂಟ್ ಮಾಡುತ್ತಿದ್ದಾರೆ. ಆಪ್ತ ಸ್ನೇಹಿತ ಓರ್ಹಾನ್ ಅವತ್ರಮಣಿ ಕಾಮೆಂಟ್ ಮಾಡಿದ್ದು, ತುಂಬಾ ಸುಂದರ ಹುಡುಗಿಯರು ಎಂದು ಬರೆದಿದ್ದಾರೆ. ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಪಿಂಕ್ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ ಮತ್ತು ನಟ ಸಂಜಯ್ ಕಪೂರ್ ಮತ್ತು ಅವರ ಪತ್ನಿ ಮಹೀಪ್ ಕಪೂರ್ ಸಹ ಹಾರ್ಟ್ ಎಮೋಜಿಗಳೊಂದಿಗೆ ಜಾನ್ವಿ ಅವರ ಫೋಟೋಗಳನ್ನು ಲೈಕ್ ಮಾಡಿದ್ದಾರೆ.
ಖುಷಿ ಕೂಡ ಬಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ. 2023 ರಲ್ಲಿ ನೆಟ್ಫ್ಲಿಕ್ಸ್ ಚಿತ್ರ 'ದಿ ಆರ್ಚೀಸ್' ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಶ್ವೇತಾ ಬಚ್ಚನ್ ಅವರ ಮಗ ಅಗಸ್ತ್ಯ ನಂದಾ ಕೂಡ ಈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ ಇತ್ತೀಚೆಗಷ್ಟೇ ಖುಷಿ, ಸುಹಾನಾ ಮತ್ತು ಅಗಸ್ತ್ಯ ‘ದಿ ಆರ್ಚೀಸ್’ ಚಿತ್ರದ ಶೂಟಿಂಗ್ ಮುಗಿದ ಸಂಭ್ರಮದಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು