Pushpa 2 | Samantha Ruth Prabhu | ಪುಷ್ಪ 2 ಸಿನಿಮಾದಲ್ಲಿ ಸಮಂತಾ ಬದಲು ಬಾಲಿವುಡ್ ನಟಿಯ ಆಗಮನ
Sukumar Pushpa 2 Item Song: ಪುಷ್ಪಾ-2 ಚಿತ್ರದ ಚಿತ್ರೀಕರಣದ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಸಮಂತಾ ಕಾಣಿಸಿಕೊಂಡಿದ್ದ ವಿಶೇಷ ಅತಿಥಿ ಪಾತ್ರಕ್ಕೆ ಬಾಲಿವುಡ್ ನಟಿಯನ್ನು ಕರೆ ತರಲಾಗುತ್ತಿದೆ.
ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬೋದಲ್ಲಿ ಪುಷ್ಪ-2 ಸಿದ್ಧವಾಗುತ್ತಿದೆ. ಚಿತ್ರದ ಮುಂದುವರಿದ ಭಾಗವನ್ನು ಅಷ್ಟೇ ಅದ್ಧೂರಿತನದೊಂದಿಗೆ ತೆರೆಗೆ ತರಲು ಪ್ಲಾನ್ ಮಾಡಲಾಗುತ್ತಿದೆ.
2/ 8
ಪುಷ್ಪ ಚಿತ್ರ ಬಿಟೌನ್ ಸೇರಿದಂತೆ ಎಲ್ಲಾ ವರ್ಗದ ಜನರನ್ನು ತಲುಪಿತ್ತು. ಇದರ ಜೊತೆಗೆ ಕಲೆಕ್ಷನ್ ಲೆಕ್ಕದಲ್ಲಿಯೂ ದಾಖಲೆ ಬರೆದಿತ್ತು. ಇನ್ನು ಅಲ್ಲು ಅರ್ಜುನ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
3/ 8
ಇನ್ನು ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಶ್ರೀವಲ್ಲಿಗೂ ವೀಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ ಹಾಡುಗಳು. ಸಾಮಿ, ಸಾಮಿ ಮತ್ತು ಉ ಅಂಟವಾ ಹಾಡು ಸಖತ್ ಹಿಟ್ ಆಗಿತ್ತು.
4/ 8
ಪುಷ್ಪ ಚಿತ್ರದ ಸೀಕ್ವೆಲ್ ಪ್ಲಾನ್ ಮಾಡಿರುವ ಚಿತ್ರತಂಡ ಪ್ರತಿ ಪಾತ್ರದ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ತೆರೆ ಮೇಲೆ ತರಲು ಪ್ಲಾನ್ ಮಾಡುತ್ತಿದೆ. ಅದರಲ್ಲಿ ಉ ಅಂಟಾವ ಹಾಡು ಪಡ್ಡೆ ಹೈಕಳ ಎದೆಗೆ ಕಿಚ್ಚು ಹಚ್ಚಿತ್ತು.
5/ 8
ಈ ಬಾರಿ ಸಮಂತಾ ಬದಲಿಗೆ ಬಾಲಿವುಡ್ ನಟಿಯನ್ನು ಕರೆತರಲಾಗುತ್ತಿದೆ. ವಿಶೇಷ ಹಾಡಿಗೆ ಹೆಜ್ಜೆ ಹಾಕಲು ದಢಕ್ ಗರ್ಲ್ ಜಾಹ್ನವಿ ಕಪೂರ್ ಬರುತ್ತಿದ್ದಾರಂತೆ.
6/ 8
ಈಗಾಗಲೇ ಚಿತ್ರತಂಡ ನಟಿ ಜಾಹ್ನವಿ ಕಪೂರ್ ಅವರನ್ನು ಸಂಪರ್ಕ ಮಾಡಿದೆ. ನಟಿ ಸಹ ಚಿತ್ರದ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಅತಿಥಿ ಪಾತ್ರದಲ್ಲಿ ನಟಿಸಲು ಜಾಹ್ನವಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
7/ 8
ಪುಷ್ಪ 2 ಚಿತ್ರದಲ್ಲಿ ಬ್ಯುಸಿಯಾಗಿರುವ ಸುಕುಮಾರ್, ಈ ಚಿತ್ರದ ನಿರ್ಮಾಣ ಮತ್ತು ಔಟ್ಪುಟ್ನಲ್ಲಿ ಸಣ್ಣ ಮಿಸ್ಟೇಕ್ಗೆ ಅವಕಾಶ ನೀಡುತ್ತಿಲ್ಲವಂತೆ. ಚಿತ್ರದ ಯಾವುದೇ ಫೋಟೋ, ವಿಡಿಯೋ ಹೊರ ಬರದಂತೆ ಚಿತ್ರತಂಡಕ್ಕೆ ಸುಕುಮಾರ್ ಖಡಕ್ ಸಂದೇಶ ನೀಡಿದ್ದಾರೆ.
8/ 8
ಪುಷ್ಪ-2ರಲ್ಲಿ ಅನಸೂಯಾ ಪಾತ್ರ ಇನ್ನಷ್ಟು ಪವರ್ ಫುಲ್ ಆಗಲಿದೆಯಂತೆ. ಈ ಪಾತ್ರ ಅನಸೂಯಾ ಅವರ ರೇಂಜ್ ಹೆಚ್ಚಿಸಲಿದೆ ಎನ್ನಲಾಗಿದೆ. ಪುಷ್ಪ ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದಲ್ಲಿ ಅನಸೂಯಾ ನಟಿಸಿದ್ದರು.