Arjun Kapoor-Janhvi Kapoor: ಫೋಟೋಶೂಟ್ನಲ್ಲಿ ಜಾಹ್ನವಿ-ಅರ್ಜುನ್ ಕಪೂರ್: ಕ್ರೇಜಿ ಪೋಸ್ ಕೊಟ್ಟ ಸ್ಟಾರ್ ಅಣ್ಣ-ತಂಗಿ
ನಟಿ ಶ್ರೀದೇವಿ ಅವರ ಅಗಲಿಕೆಯ ನಂತರ ಬೋನಿ ಕಪೂರ್ ಅವರ ಮೊಲದ ಪತ್ನಿಯ ಮಕ್ಕಳಾದ ಅರ್ಜುನ್ ಕಪೂರ್ ಹಾಗೂ ಅನ್ಶುಲಾ ಕಪೂರ್ ಜತೆ ಜಾಹ್ನವಿ ಹಾಗೂ ಖುಷಿ ಅವರಿಗೆ ಯಾವುದೇ ರೀತಿಯ ಸಂಪರ್ಕ ಇರಲಿಲ್ಲ. ಶ್ರೀದೇವಿ ಅವರು ಮರಣ ಹೊಂದಿದಾಗ ಅರ್ಜುನ್ ಹಾಗೂ ಅನ್ಶುಲಾ ನಡೆದುಕೊಂಡ ರೀತಿಯಿಂದಾಗಿ ಅಣ್ಣ ತಂಗಿಯರು ಒಂದಾಗಿದ್ದಾರೆ. ಈಗ ಜಾಹ್ನವಿ ಹಾಗೂ ಅರ್ಜುನ್ ಕಪೂರ್ ನಡುವೆ ಹೊಸ ಬಾಂಧವ್ಯ ಬೆಳೆದಿದೆ. ಅದಕ್ಕೆ ಸಾಕ್ಷಿ ಇವರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು. ಈಗ ಇದೇ ಸ್ಟಾರ್ ಅಣ್ಣ-ತಂಗಿ ಫೋಟೋಶೂಟ್ ಒಂದಕ್ಕೆ ಒಟ್ಟಿಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್ ಇನ್ಸ್ಟಾಗ್ರಾಂ ಖಾತೆ)