ಇದೀಗ ಎನ್‌ಟಿಆರ್ 30 ಶೂಟಿಂಗ್ ಶುರುವಾಗಿದೆ. ಈ ಪೂಜಾ ಕಾರ್ಯಕ್ರಮದಲ್ಲಿ ಕೊರಟಾಲ ಶಿವ, ಎನ್‌ಟಿಆರ್, ಜಾನ್ವಿ ಕಪೂರ್, ಪ್ರಕಾಶ್ ರಾಜ್, ಶ್ರೀಕಾಂತ್, ನಿರ್ದೇಶಕ ರಾಜಮೌಳಿ, ಪ್ರಶಾಂತ್ ನೀಲ್, ಸಂಕಲನಕಾರ ಶ್ರೀಕರ್ ಪ್ರಸಾದ್, ನಿರ್ಮಾಪಕ ದಿಲ್ ರಾಜು, ಕಲ್ಯಾಣ್ ರಾಮ್, ಸಂಗೀತ ನಿರ್ದೇಶಕ ಅನಿರುದ್ಧ್ ಮತ್ತಿತರರು ಉಪಸ್ಥಿತರಿದ್ದರು. ರಾಜಮೌಳಿ ಕ್ಲಾಪ್ ಮಾಡಿದರೆ, ಪ್ರಶಾಂತ್ ನೀಲ್ ಕ್ಯಾಮೆರಾ ಸ್ವಿಚ್ ಮಾಡಿದರು.
ಪೂಜಾ ಕಾರ್ಯಕ್ರಮಗಳು ಕೂಡ ಮುಗಿದಿದ್ದು, ಶೀಘ್ರದಲ್ಲೇ ಚಿತ್ರತಂಡ ಈ ಚಿತ್ರದ ಚಿತ್ರೀಕರಣಕ್ಕೆ ತೆರಳಲಿದೆ ಎನ್ನಲಾಗಿದೆ. ಈಗಾಗಲೇ ಈ ಚಿತ್ರದ ಸೆಟ್‌ಗಳ ಕೆಲಸ ಕೂಡ ಮುಗಿದಿದೆ. ಚಿತ್ರೀಕರಣವನ್ನು ಚಿತ್ರತಂಡ ಶೀಘ್ರವೇ ಆಯೋಜಿಸಲಿದೆ. ಈ ಚಿತ್ರದಲ್ಲಿ ಜಾನ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಬರ್ತ್ಡೇ ದಿನ ಅವರ ಫಸ್ಟ್ ಲುಕ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.