ಕನ್ನಡದ ಇತ್ತೀಚಿನ ಹಿಟ್ ಚಿತ್ರ ಕಾಂತಾರದ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಕನ್ನಡ ಸಿನಿಮಾವಾದರೂ ತೆಲುಗು, ಹಿಂದಿ ಸೇರಿ ಇತರ ಭಾಷೆಯಲ್ಲಿ ಕಾಂತಾರ ಸಿನಿಮಾವನ್ನು ಜನರು ತುಂಬಾ ಇಷ್ಟಪಟ್ಟಿದ್ದರು. ದಕ್ಷಿಣ ಭಾರತದ ಚಿತ್ರರಂಗ ಸೇರಿದಂತೆ ಪ್ಯಾನ್ ಇಂಡಿಯಾ ಚಿತ್ರರಂಗದಲ್ಲಿ ಭಾರಿ ಬಾಕ್ಸ್ ಆಫೀಸ್ ಹಿಟ್ ಆದ "ಕಾಂತಾರ" ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಂತಾರ ಚಿತ್ರವನ್ನು ಈಗಾಗಲೇ ಹಲವು ಸಿನಿ ಗಣ್ಯರು ಹೊಗಳಿದ್ದಾರೆ. ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನ ನಟರು ಮತ್ತು ನಿರ್ದೇಶಕರು ಕಾಂತಾರ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ, ಇತ್ತೀಚೆಗೆ ರಾಜಮೌಳಿ ಕೂಡ ಕಾಂತಾರ ಚಿತ್ರದ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಮುಂತಾದ ಸೆಲೆಬ್ರಿಟಿಗಳು ರಿಷಬ್ ಶೆಟ್ಟಿಯನ್ನು ಹೊಗಳಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ನ ಯುವ ನಾಯಕಿ ಜಾನ್ವೊ ಕಪೂರ್ ಕಾಂತಾರ ಚಿತ್ರವನ್ನು ನೋಡಿರುವುದಾಗಿ ಟ್ವೀಟ್ ಮಾಡಿದ್ದರು.