ಈ ಸಿನಿಮಾ ಬಿಡುಗಡೆಗೆ ಒಂದು ದಿನ ಮೊದಲು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಈ ಸಿನಿಮಾದ ಪೈರಸಿ ರಿಲೀಸ್‌ಗೆ ಒಂದು ದಿನ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ಸಿನಿ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಈ ಸಿನಿಮಾ ಟೆಲಿಗ್ರಾಂ ಆಪ್‌ನಲ್ಲಿ ಸದ್ದು ಮಾಡುತ್ತಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಅವತಾರ್ 2 ಚಿತ್ರ ಪೈರಸಿಗೆ ತುತ್ತಾಗಿರುವ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದರು.
ಅದ್ಧೂರಿ ಸೆಟ್ಟಿಂಗ್ಸ್, ಫೈಟ್ಸ್, ಆ್ಯಕ್ಷನ್ ಮೂಲಕ ಸಿನಿಮಾ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಅವತಾರ್ 1 ಕ್ಕೆ ಸಂಬಂಧಿಸಿದಂತೆ, 1994 ರಲ್ಲಿ ಈ ಚಿತ್ರದ ಬರವಣಿಗೆಯಿಂದ ತೊಡಗಿ ಶೂಟಿಂಗ್ ಪೂರ್ಣಗೊಳ್ಳಲು 15 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಸುಮಾರು 237 ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಚಿತ್ರವು ಆ ಸಮಯದಲ್ಲಿ ವಿಶ್ವದಾದ್ಯಂತ 3 ಬಿಲಿಯನ್ ಯುಎಸ್ ಡಾಲರ್‌ಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
ಅವತಾರ್ 3 ಕೂಡ 20 ಡಿಸೆಂಬರ್ 2024 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. 'ಅವತಾರ್ 4' ಚಿತ್ರವು ಡಿಸೆಂಬರ್ 18, 2026 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. 'ಅವತಾರ್ 5' ಚಿತ್ರವು 22 ಡಿಸೆಂಬರ್ 2028 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಒಟ್ಟು ಐದು ಸೀಕ್ವೆಲ್ ಗಳನ್ನು ಪ್ರಕಟಿಸಲಾಗಿದೆ. ಅವುಗಳ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಲಾಗಿದೆ.