ಸಂತೋಷ್ ಆನಂದ್ ರಾಮ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ರಾವೇಂದ್ರ ಸ್ಟೋರ್ಸ್. ಈ ಸಿನಿಮಾದಲ್ಲಿ ಜಗ್ಗೇಶ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡ ನಂತರ ಸಂತೋಷ್ ಆನಂದ್ ರಾಮ್ ಅವರು ಮತ್ತೆ ಪುನೀತ್ ಅವರ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರಂತೆ. ಅದಕ್ಕೆ ಈ ಭೇಟಿಗೆ ಮಹತ್ವ ಇದೆ ಎಂದೂ ಹೇಳಲಾಗುತ್ತಿದೆ.
ಹೊಂಬಾಳೆ ಫಿಲಂಸ್ ಅವರು ಕೆಜಿಎಫ್ ಚಾಪ್ಟರ್ 2 ಅಲ್ಲದೆ ಇನ್ನು ಸಾಕಷ್ಟು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಹೊಂಬಾಳೆ ನಿರ್ಮಾಣದ 7ನೇ ಸಿನಿಮಾ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಸಲಾರ್, 8ನೇ ಸಿನಿಮಾ ಶ್ರೀಮುರಳಿ ಅಭಿನಯದ 'ಬಘೀರಾ'. 9ನೇ ಚಿತ್ರ ಪುನೀತ್ ರಾಜ್ ಕುಮಾರ್ ಮತ್ತು ಲೂಸಿಯಾ ಪವನ್ ಕುಮಾರ್ ಕಾಂಬಿನೇಶನ್ನ 'ದ್ವಿತ್ವ'. ಹತ್ತನೇ ಚಿತ್ರ ರಕ್ಷಿತ್ ಶೆಟ್ಟಿ ನಿರ್ದೇಶನದ 'ರಿಚರ್ಡ್ ಆಂಟೋನಿ' ಹಾಗೂ 11ನೇ ಸಿನಿಮಾ ಚಿತ್ರ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸುತ್ತಿರುವ 'ಕಾಂತಾರ'. ಇನ್ನು 12ನೇ ಸಿನಿಮಾ ಸಂತೋಷ್ ಆನಂದ್ ರಾಮ್ ಹಾಗೂ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್.