Shah Rukh Khan: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ 50 ಸಾವಿರ ಪಿಪಿಇ ಕಿಟ್ ಕೊಡುವುದಾಗಿ ತಿಳಿಸಿದ್ದ ಶಾರುಖ್, ಅದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್ಗಳಿಗಾಗಿ 25 ಸಾವಿರ ಪಿಪಿಇ ಕಿಟ್ಗಳನ್ನು ತಲುಪಿಸಿದ್ದರು.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜೀವನಾಧಾರಿತ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕಳೆದೊಂದು ವಾರದಿಂದ ಬಾಲಿವುಡ್ನಿಂದ ಕೇಳಿ ಬರುತ್ತಿದೆ.
2/ 13
ಟಿಪ್ಪು ಸುಲ್ತಾನ್ ಚಿತ್ರದ ಫಸ್ಟ್ ಝಲಕ್ ಲೀಕ್ ಆಗಿದ್ದು, ಟಿಪ್ಪು ವೇಷಧಾರಿಯಾಗಿ ಕಿಂಗ್ ಖಾನ್ ಶಾರುಖ್ ಅವರ ಪೋಸ್ಟರ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
3/ 13
ಈ ಫೋಟೋದಲ್ಲಿ ರಾಜನ ಪೋಷಾಕು ತೊಟ್ಟಿರುವ ಶಾರುಖ್ ಐತಿಹಾಸಿಕ ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಇಂತಹದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಪರ ವಿರೋಧ ಚರ್ಚೆಗಳು ಸಹ ಶುರುವಾಗಿದೆ.
4/ 13
ಅದರೊಂದಿಗೆ ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿತ್ತು. ಈ ಸುದ್ದಿಯ ಜಾಡು ಹಿಡಿದು ಹೊರಟರೆ ಸಿಗುವ ಉತ್ತರವೇ ಬೇರೆ.
5/ 13
ಏಕೆಂದರೆ ಬಾಲಿವುಡ್ನಲ್ಲಿ ಅಂತಹದೊಂದು ಸಿನಿಮಾ ಬಗ್ಗೆ ಚರ್ಚೆಗಳೇ ನಡೆದಿಲ್ಲ. ಟಿಪ್ಪು ಸುಲ್ತಾನ್ ಹೆಸರಿನ ಸಿನಿಮಾ ಕೂಡ ಸೆಟ್ಟೇರಿಲ್ಲ. ಯಾರೋ ಕಿಡಿಗೇಡಿಗಳು ಶಾರುಖ್ ಖಾನ್ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
6/ 13
ಈ ನಕಲಿ ಸುದ್ದಿಯನ್ನು ನಂಬಿದ್ದ ಒಂದಷ್ಟು ಮಂದಿ ಬ್ಯಾನ್ ಟಿಪ್ಪು ಸುಲ್ತಾನ್ ಮೂವಿ ಅಭಿಯಾನ ಆರಂಭಿಸಿದ್ದರು. ಅಲ್ಲದೆ ಇದರೊಂದಿಗೆ ಶಾರುಖ್ ಖಾನ್ ಹೆಸರಿನಲ್ಲಿ ಮತ್ತಷ್ಟು ಸುಳ್ಳು ಸುದ್ದಿಗಳೂ ಕೂಡ ಇದೇ ಚಿತ್ರದ ಹೆಸರಿನಲ್ಲಿ ಹರಿದಾಡುತ್ತಿದೆ.
7/ 13
ಈ ಹಿಂದೆ ಟಿಪ್ಪು ಸುಲ್ತಾನ್ ಇತಿಹಾಸವನ್ನು ತಿಳಿಸುವ ಸಿನಿಮಾವನ್ನು ನಿರ್ಮಿಸುವುದಾಗಿ ಅಶೋಕ್ ಖೇಣಿ ಮುಂದಾಗಿದ್ದರು. ಈ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದರು. ಆ ಬಳಿಕ ಚಿತ್ರವನ್ನು ಕೈ ಬಿಡಲಾಗಿತ್ತು.
8/ 13
ಇದೀಗ ಮತ್ತೆ ಶಾರುಖ್ ಖಾನ್ ಹೆಸರಿನೊಂದಿಗೆ ಟಿಪ್ಪು ಸುಲ್ತಾನ್ ಸಿನಿಮಾದ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಆದರೆ ಕಿಂಗ್ ಖಾನ್ ಇನ್ನೂ ಕೂಡ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
9/ 13
ಬಾಲಿವುಡ್ ಮೂಲಗಳ ಪ್ರಕಾರ ಶಾರುಖ್ ಖಾನ್ ಮುಂದಿನ ಚಿತ್ರಕ್ಕೆ ಕರಣ್ ಜೋಹರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ತಮಿಳು ನಿರ್ದೇಶಕ ಅಟ್ಲಿ ಕೂಡ ಬಾಲಿವುಡ್ ಬಾದ್ಷಾನಿಗೆ ಕಥೆ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.
10/ 13
ಸದ್ಯ ಕೊರೋನಾ ಹೋರಾಟದಲ್ಲಿ ಬ್ಯುಸಿಯಾಗಿರುವ ಶಾರುಖ್, ತಮ್ಮ ಒಡೆತನದ ರೆಡ್ ಚಿಲ್ಲೀಸ್, ಮೀರ್ ಫೌಂಡೇಶನ್, ಕೊಲ್ಕತ್ತಾ ನೈಟ್ ರೈಡರ್ಸ್ ಮುಂತಾದ ಕಂಪನಿಗಳು ಜೊತೆಯಾಗಿ ಹಲವು ಕಾರ್ಯಗಳನ್ನು ಮಾಡುತ್ತಿವೆ.
11/ 13
ಈ ಹೋರಾಟದ ಭಾಗವಾಗಿ ಒಂದು ತಿಂಗಳ ಕಾಲ ಪ್ರತಿ ದಿನ 3 ಲಕ್ಷ ಆಹಾರದ ಕಿಟ್ಗಳನ್ನು ನೀಡಲಾಗುವುದು. 5,500 ಕುಟುಂಬಗಳಿಗೆ ಹಾಗೂ 2500 ದಿನಗೂಲಿ ನೌಕರರ ಕುಟುಂಬಗಳಿಗೆ ಅಡುಗೆ ಸಾಮಾಗ್ರಿ, 2000 ಬಿಸಿಯೂಟದ ವ್ಯವಸ್ಥೆ ಮಾಡುವುದಾಗಿ ಎಂದು ಈ ಹಿಂದೆ ಶಾರುಖ್ ಖಾನ್ ಘೋಷಿಸಿದ್ದರು.
12/ 13
ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ 50 ಸಾವಿರ ಪಿಪಿಇ ಕಿಟ್ ಕೊಡುವುದಾಗಿ ತಿಳಿಸಿದ್ದ ಶಾರುಖ್, ಅದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್ಗಳಿಗಾಗಿ 25 ಸಾವಿರ ಪಿಪಿಇ ಕಿಟ್ಗಳನ್ನು ತಲುಪಿಸಿದ್ದರು.
13/ 13
ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ 50 ಸಾವಿರ ಪಿಪಿಇ ಕಿಟ್ ಕೊಡುವುದಾಗಿ ತಿಳಿಸಿದ್ದ ಶಾರುಖ್, ಅದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್ಗಳಿಗಾಗಿ 25 ಸಾವಿರ ಪಿಪಿಇ ಕಿಟ್ಗಳನ್ನು ತಲುಪಿಸಿದ್ದರು.