3 ವರ್ಷಗಳ ನಂತರ ಈ ಜೋಡಿ ಡಿವೋರ್ಸ್ ಪಡೆದು ಎಲ್ಲರಿಗೂ ಶಾಕ್ ನೀಡಿದರು. 2021ರಲ್ಲಿ ಇಬ್ಬರೂ ಬೇರೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿದರು. ಸದ್ಯ ಅವರು ತಮ್ಮ ತಮ್ಮ ದಾರಿಯಲ್ಲಿ ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗಷ್ಟೇ ನಾಗ ಚೈತನ್ಯ ಕಸ್ಟಡಿ ಸಿನಿಮಾ ಪ್ರಚಾರದ ವೇಳೆ ಸಮಂತಾ ಬಗ್ಗೆ ಮೊದಲ ಸಲ ಮಾತನಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಳ್ಳೆಯ ನಿರೀಕ್ಷೆಗಳ ನಡುವೆ ಸುಮಾರು 60 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಬಿಡುಗಡೆಯಾದ ಮೊದಲ ದಿನವೇ ನೆಗೆಟಿವ್ ಟಾಕ್ ಬಂದಿದ್ದು ನಿರ್ಮಾಪಕರಿಗೆ ಭಾರೀ ನಷ್ಟವನ್ನುಂಟು ಮಾಡಿದೆ. ಈಗ ಚಿತ್ರ ಜನಪ್ರಿಯ OTT ನಲ್ಲಿ ಮನರಂಜನೆ ನೀಡಲು ಸಿದ್ಧವಾಗಿದೆ. ಶಾಕುಂತಲಂ ಚಿತ್ರ ಇದೇ ತಿಂಗಳ 12 ರಂದು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಾಗಲಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.