Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

ಪ್ರಭಾಸ್ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ 'ಸಲಾರ್' ಸಿನಿಮಾದಲ್ಲಿ ಸೌತ್ ಸೂಪರ್ ಸ್ಟಾರ್​ಗಳು ಕಾಣಿಸಿಕೊಳ್ಳಲಿದ್ದಾರಂತೆ. ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್, ಸಲಾರ್​ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರಂತೆ, ಜೊತೆಗೆ ಜೂನಿಯರ್ NTR ಕೂಡ ಸಿನಿಮಾದ ಭಾಗವಾಗಲಿದ್ದಾರೆ.

First published:

 • 18

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  ಕೆಜಿಎಫ್ ಸಿನಿಮಾ ಡೈರೆಕ್ಟರ್ ಪ್ರಶಾಂತ್ ನೀಲ್​ ಟಾಲಿವುಡ್​ನಲ್ಲಿ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವನ್ನು ಮತ್ತಷ್ಟು ಅದ್ಧೂರಿಯಾಗಿಸಲು ಸ್ಟಾರ್ ನಟರನ್ನು ಸಿನಿಮಾದ ಭಾಗವಾಗಿಸಲು ನಿರ್ದೇಶಕರು ಸಖತ್ ಪ್ಲಾನ್ ಮಾಡಿದ್ದಾರೆ.

  MORE
  GALLERIES

 • 28

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  ಸಲಾರ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಮತ್ತು ಯಶ್ ಇಬ್ಬರನ್ನು ಒಂದೇ ಫ್ರೇಮ್ ನಲ್ಲಿ ಸೆರೆ ಹಿಡಿಯುವ ಪ್ಲಾನ್ ಮಾಡಿದ್ದಾರೆ. ಸ್ಟಾರ್ ನಟ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಬಿಗ್ ಸ್ಟಾರ್​ಗಳು ಕಾಣಿಸಿಕೊಳ್ಳೋದನ್ನು ಹೆಚ್ಚಾಗಿ ಬಾಲಿವುಡ್​ನಲ್ಲಿ ನೋಡಿದ್ದೇವೆ. ಇದೀಗ ಪ್ರಶಾಂತ್ ನೀಲ್ ಟಾಲಿವುಡ್​ನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

  MORE
  GALLERIES

 • 38

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  RRR ಸಿನಿಮಾ ಮೂಲಕ ವಿಶ್ವದಾದ್ಯಂತ ಕ್ರೇಜ್ ಹುಟ್ಟು ಹಾಕಿರುವ ಜೂನಿಯರ್ NTR ಅವರನ್ನು ಕೂಡ ಸಲಾರ್ ಸಿನಿಮಾದಲ್ಲಿ ಒಂದು ಭಾಗವಾಗಿಸಲು ಪ್ರಶಾಂತ್ ನೀಲ್ ಪ್ಲಾನ್ ಮಾಡಿದ್ದಾರೆ. ತೆರೆ ಮೇಲೆ ಜೂನಿಯರ್ NTR ಕಾಣಿಸಿಕೊಳ್ಳದಿದ್ರು ಸಿನಿಮಾಗೆ ಧ್ವನಿಯಾಗಲಿದ್ದಾರೆ.

  MORE
  GALLERIES

 • 48

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  'ಸಲಾರ್' ಸಿನಿಮಾದಲ್ಲಿ ನಟ ಯಶ್ ಕ್ಲೈಮ್ಯಾಕ್ಸ್ನಲ್ಲಿ ಎಂಟ್ರಿ ಕೊಡಲಿದ್ದಾರಂತೆ. ಜೊತೆಗೆ ಪ್ರಭಾಸ್ ಜೊತೆ ರಾಕಿ ಭಾಯ್ ತೆರೆ ಹಂಚಿಕೊಂಡ್ರೆ ಜೂನಿಯರ್ NTR ಕೂಡ ಸಿನಿಮಾದ ಭಾಗವಾಗಲಿದ್ದಾರೆ. ಜೂನಿಯರ್ ಎನ್ಟಿಆರ್ ಧ್ವನಿಯಲ್ಲೇ ಸಲಾರ್ ಸಿನಿಮಾ ಎಂಡ್ ಆಗಲಿದೆ.

  MORE
  GALLERIES

 • 58

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  'ಸಲಾರ್' ನಲ್ಲಿ ಯಶ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೂ ತೆರೆ ಮೇಲೆ ಇಬ್ಬರು ಸ್ಟಾರ್ ಗಳನ್ನು ಒಟ್ಟಿಗೆ ನೋಡಲು ಕಾಯ್ತಿದ್ದಾರೆ.

  MORE
  GALLERIES

 • 68

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  'ಕೆಜಿಎಫ್' ಸಿನಿಮಾಗೆ ಕೆಲಸ ಮಾಡಿದ ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್, 'ಸಲಾರ್' ಸಿನಿಮಾಕ್ಕೂ ಕೆಲಸ ಮಾಡಲಿದ್ದಾರೆ. ಶೂಟಿಂಗ್ ಕೂಡ ಭರದಿಂದ ಸಾಗಿದ್ದು, ಸೆಪ್ಟೆಂಬರ್ 28 ರಂದು ಸಿನಿಮಾ ತೆರೆ ಮೇಲೆ ಬರಲಿದೆ.

  MORE
  GALLERIES

 • 78

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  ಸದ್ಯ 'ಸಲಾರ್' ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆಯಾದರೂ, ಈ ಬಗ್ಗೆ ಯಾವುದೇ ಮಾಹಿತಿ ಅಧಿಕೃತ ಹೊರಬಿದ್ದಿಲ್ಲ. ಸಲಾರ್ ಸಿನಿಮಾ ಕ್ರೇಜ್ ಹೆಚ್ಚಿಸಲು ಪ್ರಶಾಂತ್ ನೀಲ್ ಹಲವು ಪ್ರಯತ್ನ ಮಾಡ್ತಿದ್ದು, ಈ ಬಗ್ಗೆ ಸಿನಿಮಾ ತಂಡ ಶೀಘ್ರವೇ ಅಧಿಕೃತ ಘೋಷಣೆ ಮಾಡಲಿದೆ.

  MORE
  GALLERIES

 • 88

  Salaar-Yash-NTR: ಪ್ರಭಾಸ್ ಸಲಾರ್‌ನಲ್ಲಿ ಸೂಪರ್​ ಸ್ಟಾರ್ಸ್! ಕ್ಲೈಮ್ಯಾಕ್ಸ್‌ನಲ್ಲಿ ಬರ್ತಾರಂತೆ ಯಶ್, ಜೂನಿಯರ್ ಎನ್‌ಟಿಆರ್!

  ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಲಾರ್ ಸಿನಿಮಾ ತಯಾರಾಗುತ್ತಿದ್ದು, ವಿಜಯ್ ಕಿರಗಂದೂರು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ.

  MORE
  GALLERIES