ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ವೇದ ಸಿನಿಮಾ ಡಿಸೆಂಬರ್ 23ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ರಿಲೀಸ್ಗೆ ಮುನ್ನವೇ ಭಾರೀ ಹವಾ ಸೃಷ್ಟಿಸಿದ್ದು ಈ ಸಿನಿಮಾ ಕುರಿತು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.
2/ 9
ಮಹಿಳಾ ಪ್ರಧಾನ ಸಿನಿಮಾ ಇದು ಎನ್ನುವ ಮಾತು ಕೇಳಿ ಬಂದಿದೆ. ವೇದ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವೇ ಎಂದು ಬಹಳಷ್ಟು ಜನರು ಚರ್ಚಿಸುತ್ತಿದ್ದಾರೆ. ಶಿವರಾಜ್ಕುಮಾರ್ ಅವರು ನಾಲ್ವರು ಮಹಿಳೆಯರು ಪ್ರಧಾನ ಪಾತ್ರ ಮಾಡುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.
3/ 9
ಉಮಾಶ್ರೀ, ಅದಿತಿ ಸಾಗರ್, ಗಾನವಿ, ಶ್ವೇತಾ ಚಂಗಪ್ಪ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಪಾತ್ರಗಳ ಜೊತೆ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಇದರ ಕೆಲವೊಂದು ಪೋಸ್ಟರ್ನಲ್ಲಿ ಶಿವರಾಜ್ಕುಮಾರ್ ಹೆಣ್ಮಕ್ಕಳ ಹಿಂದೆ ನಿಂತಿರುವುದು ಗಮನಾರ್ಹವಾಗಿ ಕಂಡಿದೆ.
4/ 9
ಲಾಂಗು, ಮಚ್ಚು ಹಿಡಿದು ಈಗಾಗಲೇ ಶಿವರಾಜ್ಕುಮಾರ್ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಹೊಸದೇನಲ್ಲ. ಆದರೂ ವೇದ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಲುಕ್ ಗಮನ ಸೆಳೆದಿದೆ.
5/ 9
ವೇದ ಸಿನಿಮಾ ಶಿವರಾಜ್ಕುಮಾರ್ ಅವರ 125ನೇ ಸಿನಿಮಾ ಎನ್ನುವುದು ದೊಡ್ಡ ವಿಶೇಷ. ಇದೊಂದು ಮೈಲಿಗಲ್ಲು. ಹಾಗಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
6/ 9
ಮಗಳು ಜಾನಕಿ ಧಾರವಾಹಿಯ ಮೂಲಕ ಕನ್ನಡಿಗರ ಮನಗೆದ್ದ ನಟಿ ಗಾನವಿ ಅವರು ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರಿಗೆ ನಾಯಕಿಯಾಗಿರುವುದು ಇನ್ನೊಂದು ಕುತೂಹಲಕಾರಿ ಸಂಗತಿ. ಈಗಾಗಲೇ ಸೂಪರ್ಸ್ಟಾರ್ ಆದ ನಟಿಯನ್ನು ಇಲ್ಲಿ ಹೀರೋಯಿನ್ ಆಗಿ ಆಯ್ಕೆ ಮಾಡಿಲ್ಲ.
7/ 9
ಇದು ಗೀತಾ ಪಿಕ್ಚರ್ ಮೂಲಕ ಗೀತಾ ಶಿವರಾಜ್ಕುಮಾರ್ ನಿರ್ಮಾಣದ ಮೊದಲ ಚಿತ್ರ ಎನ್ನುವುದು ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ. ಜೀ ಸ್ಟುಡಿಯೋಸ್ ನಿರ್ಮಾಣಕ್ಕೆ ಸಾಥ್ ನೀಡಿದೆ.
8/ 9
ವೇದ ಸಿನಿಮಾದ ಜುಂಜಪ್ಪ ಹಾಡನ್ನು ಜಾನಪದ ಹಾಡುಗಾರ ಮೋಹನ್ ಕುಮಾರ್ ಅವರಿಂದ ಹಾಡಿಸಲಾಗಿದೆ. ಇದು ಈ ಸಿನಿಮಾದ ಹಾಡುಗಳಲ್ಲಿ ಒಂದು ವಿಶೇಷ.
9/ 9
ಶಿವರಾಜ್ಕುಮಾರ್ ಅವರ ಮೊದಲ ಸಿನಿಮಾವನ್ನು ಅವರ ತಾಯಿ ನಿರ್ಮಿಸಿದ್ದರು ಹಾಗೂ ಈಗ 125ನೇ ಸಿನಿಮಾವನ್ನು ಪತ್ನಿ ನಿರ್ಮಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.