ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕಂತು ಸೆನ್ಸೇಷನ್ ಕ್ರಿಯೇಟ್ ಮಾಡಿರುವುದು ಹಿಡ್ಕ ಹಿಡ್ಕ ಸಾಂಗು. ನೀನಾಸಂ ಸತೀಶ್ - ಅದಿತಿ ಪ್ರಭುದೇವ ಅಭಿನಯದ ಬ್ರಹ್ಮಚಾರಿ ಚಿತ್ರದ ಈ ಗೀತೆ ಸೂಪರ್ ಡೂಪರ್ ಹಿಟ್ ಆಗಿದೆ.
2/ 27
ಅದರಲ್ಲೂ ಈ ರೋಮ್ಯಾಂಟಿಂಕ್ ಹಾಡಿನ ಮೇಕಿಂಗ್ ವಿಡಿಯೋ ಪಡ್ಡೆಗಳ ಕಣ್ಣು ಕುಕ್ಕಿಸಿದೆ. ಸಾಂಗ್ನ ಸಾಹಿತ್ಯ ಹೇಳುವಂತೆ ಈ ಹಾಡಿಗೆ ಒಂದು ವಿಶೇಷತೆ ಕೂಡ ಇದೆ. ಅದೇನೆಂದರೆ...
3/ 27
ಹಿಡ್ಕ ಹಿಡ್ಕ ಅಂತ ಎಷ್ಟೇ ಹೇಳಿದರೂ ನಾಯಕ ಒಂದು ಬಾರಿ ಕೂಡ ನಾಯಕಿಯನ್ನು ತಬ್ಬಿಕೊಳ್ಳುವುದಿಲ್ಲವಂತೆ. ಅದು ಹೇಗೆ?
4/ 27
ಹೌದು, ನಾಯಕನ ಸಮಸ್ಯೆಯನ್ನು ತಿಳಿಸಲು ಈ ಹಾಡು ರೂಪಿಸಲಾಗಿದ್ದು, ಅದರ ಸನ್ನಿವೇಶಕ್ಕೆ ತಕ್ಕಂತೆ ಚಿತ್ರೀಕರಿಸಲಾಗಿದೆ.
5/ 27
ಹೀಗಾಗಿ ಸಾಂಗ್ ರೋಮ್ಯಾಂಟಿಕ್ ಆಗಿದ್ದರೂ, ಒಂದು ಬಾರಿ ಕೂಡ ಹೀರೋ ಹೀರೋಯಿನ್ನನ್ನು ಅಪ್ಪುವ ದೃಶ್ಯ ಇರುವುದಿಲ್ಲ. ಅದುವೇ ಈ ಹಾಡಿನ ವಿಶೇಷತೆ ಎಂದು ಅದಿತಿ ಪ್ರಭುದೇವ ತಿಳಿಸಿದ್ದಾರೆ.
6/ 27
ಬ್ರಹ್ಮಚಾರಿ ಸಿನಿಮಾ ಕಾಮಿಡಿ ಜಾನರ್ನಿಂದ ಕೂಡಿದ್ದು, ಆದರೆ ಅಶ್ಲೀಲ ಎನಿಸುವಂತಹ ಹಾಸ್ಯ ಈ ಚಿತ್ರದಲ್ಲಿಲ್ಲ ಎಂದು ಸಿಂಗ ಬೆಡಗಿ ತಿಳಿಸಿದ್ದಾಳೆ.
7/ 27
ಇನ್ನು ಚಿತ್ರದಲ್ಲಿನ ಕೆಲ ದೃಶ್ಯ ಹಾಗೂ ನೀನಾಸಂ ಸತೀಶ್ ಅವರ ಕಷ್ಟವನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಅಷ್ಟರಮಟ್ಟಿಗೆ ಪಾತ್ರ ರೂಪಿಸುವಲ್ಲಿ ನಿರ್ದೇಶಕ ಚಂದ್ರ ಮೋಹನ್ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ಅದಿತಿ.
8/ 27
ಉದಯ್ ಕುಮಾರ್ ನಿರ್ಮಾಣದ ಬ್ರಹ್ಮಚಾರಿ ಚಿತ್ರವು ಇದೇ ವಾರ ರಿಲೀಸ್ ಆಗಲಿದ್ದು, ಅದತಿ ಪ್ರಭುದೇವ-ನೀನಾಸಂ ಸತೀಶ್ ಅವರ ಹಿಡ್ಕ ಹಾಡು ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹುಚ್ಚೆಬ್ಬಿಸಿ ಕುಣಿಸಿದರೂ ಅಚ್ಚರಿ ಪಡಬೇಕಿಲ್ಲ.