ಭಾರತೀಯ ಮಹಿಳೆ ಮತ್ತೊಮ್ಮೆ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ವಿಜಯದ ನಗೆ ಬೀರಿಸಿದ್ದು ಎಲ್ಲೆಡೆ ಸಂಭ್ರಮಾಚರಣೆಗಳು ನಡೆದಿವೆ.
2/ 10
ಲಾಸ್ ವೇಗಾಸ್ನಲ್ಲಿ ನಡೆದ ಗಾಲಾ ಸಮಾರಂಭದಲ್ಲಿ ಭಾರತದ ಸರ್ಗಮ್ ಕೌಶಲ್ ವಿಶ್ವ ಸುಂದರಿ ಕಿರೀಟವನ್ನು ಪಡೆದರು. ಅವರು 21 ವರ್ಷಗಳ ನಂತರ ಅತ್ಯಂತ ವೈಭವದಿಂದ ಭಾರತಕ್ಕೆ ಮಿಸಸ್ ವರ್ಲ್ಡ್ ಕಿರೀಟವನ್ನು ಮರಳಿ ತಂದಿದ್ದಾರೆ ಎನ್ನುವುದು ಗಮನಾರ್ಹ.
3/ 10
63 ಕ್ಕೂ ಹೆಚ್ಚು ದೇಶಗಳು ಈ ಅಂತಾರಾಷ್ಟ್ರೀಯ ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಹಾಗಾಗಿ ಕೌಶಲ್ ಅವರ ಈ ಗೆಲುವು ನಿಜಕ್ಕೂ ಪ್ರತಿಷ್ಠಿತವಾಗಿದೆ.
4/ 10
ಕೌಶಲ್ ಅವರು ಮಿಸೆಸ್ ಪಾಲಿನೇಷಿಯಾವನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಬ್ಯೂಟಿ ಕ್ವೀನ್ ಮೂಲತಃ ಜಮ್ಮು ಕಾಶ್ಮೀರದವರು.
5/ 10
ವೈಜಾಗ್ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಕೌಶಲ್. ಅವರ ಪತಿ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
6/ 10
ಮಿಸೆಸ್ ಇಂಡಿಯಾ ಸ್ಪರ್ಧೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ತನ್ನ ಐತಿಹಾಸಿಕ ಗೆಲುವಿನ ನಂತರ ಸಂತೋಷದಲ್ಲಿರುವ ಕೌಶಲ್ ಅವರ ಫೋಟೋಗಳನ್ನು ಹಂಚಿಕೊಂಡಿದೆ.
7/ 10
ದೀರ್ಘ ಕಾಯುವಿಕೆ ಮುಗಿದಿದೆ, 21 ವರ್ಷಗಳ ನಂತರ ನಾವು ಕಿರೀಟವನ್ನು ಹೊಂದಿದ್ದೇವೆ ಎಂದು ಪೋಸ್ಟ್ಗೆ ಕ್ಯಾಪ್ಶನ್ ನೀಡಲಾಗಿದೆ.
8/ 10
ಕೌಶಲ್ ಗ್ರ್ಯಾಂಡ್ ಫಿನಾಲೆಗಾಗಿ ಮಿನುಗುಗಳಿಂದ ಕೂಡಿದ ನಯವಾದ ಮತ್ತು ಸೊಗಸಾದ ಗುಲಾಬಿ ಬಣ್ಣದ ಶೋಲ್ಡರ್ಲೆಸ್ ಗೌನ್ ಧರಿಸಿದ್ದರು. ಇದನ್ನು ಭಾವನಾ ರಾವ್ ವಿನ್ಯಾಸಗೊಳಿಸಿದ್ದಾರೆ.
9/ 10
ಈ ಗೌನ್ ಕೌಶಲ್ ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಮಿಸೆಸ್ ಇಂಡಿಯಾ ಪೇಜ್ ಸರ್ಗಾಮ್ ಕೌಶಲ್ ಅವರ ಅಮೂಲ್ಯವಾದ ಗೆಲುವಿನ ಮತ್ತು ಕಿರೀಟ ಧರಿಸುವ ಕ್ಷಣವನ್ನು ಹಂಚಿಕೊಂಡಿದೆ.
10/ 10
ಭಾರತೀಯರೊಬ್ಬರು 2001 ರಲ್ಲಿ ಕೊನೆಯ ಬಾರಿಗೆ ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದರು. ಡಾ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಕಿರೀಟವನ್ನು ಪಡೆದರು. ಅವರು ಮಿಸೆಸ್ ಇಂಡಿಯಾ ಇಂಕ್ 2022-23 ಗೆ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.