ಬಾಲಿವುಡ್ ನಟಿ, ಮಾಡೆಲ್ ರೆಜಿನಾ ಕಸ್ಸಂದ್ರ ಅವರು 1990 ಡಿಸೆಂಬರ್ 13 ರಂದು ಜನಿಸಿದ್ದಾರೆ, ಇವರು ಮೊದಲು ತಮಿಳು, ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
2/ 8
2005 ರಲ್ಲಿ ತಮಿಳು ಚಲನಚಿತ್ರ ಕಂಡ ನಾಲ್ ಮುಧಲ್ನೊಂದಿಗೆ ರೆಜಿನಾ ಕಸ್ಸಂದ್ರ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಶಿವ ಮನಸುಲೋ ಶ್ರುತಿ ಯೊಂದಿಗೆ ತೆಲುಗು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.
3/ 8
2010ರಲ್ಲಿ ಸೂರ್ಯಕಾಂತಿ ಮತ್ತು ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದ್ರು. ನಟಿಯ ನಟನೆಗೆ ಅದೆಷ್ಟೋ ಅಭಿಮಾನಿಗಳ ಬಳಗವೇ ಇದೆ.
4/ 8
ಶಿವ ಮನಸುಲೋ ಶ್ರುತಿ, ಕೇಡಿ ಬಿಲ್ಲ ಕಿಲ್ಲಾಡಿ ರಂಗ, ಕೋತ ಜೋಡಿ, ಪವರ್, ರಾಜತಂಧಿರಂ, ಸುಬ್ರಮಣ್ಯಂ ಫಾರ್ ಸೇಲ್, ವಿಸ್ಮಯ, ಸಿಲುಕ್ಕುವರುಪಟ್ಟಿ ಸಿಂಗಂ, 7 ಮತ್ತು ಮುಗಿಜ್ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಕಸ್ಸಂದ್ರ ನಾಯಕಿಯಾಗಿ ನಟಿಸಿದ್ದಾರೆ.
5/ 8
ಶಾಸ್ತ್ರೀಯ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಪಾತ್ರದಲ್ಲಿ 2022 ರ ರಾಕೆಟ್ ಬಾಯ್ಸ್ ಸರಣಿಯೊಂದಿಗೆ ಕಸ್ಸಂದ್ರ ತನ್ನ ವೆಬ್ಗೆ ಪಾದಾರ್ಪಣೆ ಮಾಡಿದರು.
6/ 8
ಕಸ್ಸಂದ್ರ ಅವರು ಒಂಬತ್ತು ವರ್ಷದವಳಿದ್ದಾಗ ಮಕ್ಕಳ ವಾಹಿನಿಯಾದ ಸ್ಪ್ಲಾಶ್ಗೆ ನಿರೂಪಕಿಯಾಗಿದ್ದರು. ನಂತರ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ.
7/ 8
ಸಾಮಾನ್ಯವಾಗಿ, ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಡಬಲ್ ಮೀನಿಂಗ್ ಜೋಕ್ಗಳನ್ನು ಹೇಳುವುದಿಲ್ಲ. ಆದರೆ ನಟಿ ರೆಜಿನಾ ಕಸ್ಸಂದ್ರ ಸ್ವಲ್ಪ ಭಿನ್ನ. ಇತ್ತೀಚಿನ ಸಂದರ್ಶನದಲ್ಲಿ ಡಬಲ್ ಮೀನಿಂಗ್ ಜೋಕ್ ಮಾಡಿ, ಟ್ರೋಲ್ ಗೆ ಒಳಗಾಗಿದ್ದರು.
8/ 8
ಹುಡುಗರ ಲೈಂಗಿಕ ಸಾಮಥ್ರ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ ಎಂದು ರೆಜಿನಾ ಕಸ್ಸಂದ್ರ ಅವರು ಹೇಳಿದ್ದರು. ಇದು ಹಲವು ಟೀಕೆಗೆ ಒಳಗಾಗಿತ್ತು.