ಥೇಟ್ ಅವರ ಅಮ್ಮ ಶ್ರೀದೇವಿಯಂತೆ ಜಾಹ್ನವಿ ಕಪೂರ್ ಬಟ್ಟೆ ಧರಿಸಿ ತಾಯಿಯಂತೆ ಕಾಣುತ್ತಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋ ಕಂಡ ನೆಟ್ಟಿಗರು ಸೇಮ್ ಅಮ್ಮನ ಹಾಗೇ ಮಗಳು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್(Janhvi Kapoor) ಅವರ ಪ್ರತಿಯೊಂದು ಪೋಸ್ಟ್ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ಅವರ ಪ್ರತಿಯೊಂದು ಪೋಸ್ಟ್ ಗಾಗಿ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿರುತ್ತಾರೆ.
2/ 8
ಥೇಟ್ ಅವರ ಅಮ್ಮ ಶ್ರೀದೇವಿಯಂತೆ ಜಾಹ್ನವಿ ಕಪೂರ್ ಬಟ್ಟೆ ಧರಿಸಿ ತಾಯಿಯಂತೆ ಕಾಣುತ್ತಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋ ಕಂಡ ನೆಟ್ಟಿಗರು ಸೇಮ್ ಅಮ್ಮನ ಹಾಗೇ ಮಗಳು ಎಂದು ಕಮೆಂಟ್ ಮಾಡುತ್ತಿದ್ದಾರೆ.
3/ 8
ಅಮ್ಮ ಶ್ರೀದೇವಿ ಅವರು ಧರಿಸಿರುವ ಮ್ಯಾಚಿಂಗ್ ಡ್ರೆಸ್ಗಳನ್ನು ಜಾಹ್ನವಿ ತೊಟ್ಟಿದ್ದಾರೆ. ಈ ಫೋಟೋಗಳನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
4/ 8
ಜಾಹ್ನವಿ ಕಪೂರ್(Janhvi Kapoor) ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದರೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜಾಹ್ನವಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ, ಆದರೆ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಬೇಡಿಕೆ ಇದೆ.
5/ 8
'ಧಡಕ್' ಚಿತ್ರದ ಮೂಲಕ ಬಾಲಿವುಡ್ ಬೆಳ್ಳಿಪರದೆ ಮೇಲೆ ಮಿನುಗಲು ಆರಂಭಿಸಿದ ಜಾಹ್ನವಿ ಕಪೂರ್ ಕೈಯಲ್ಲಿ ಸದ್ಯ ಮೂರ್ನಾಲ್ಕು ಪ್ರಾಜೆಕ್ಟ್ಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ಜಾಹ್ನವಿ.
6/ 8
24 ವರ್ಷ ವಯಸ್ಸಿನ ಜಾಹ್ನವಿ ಕಪೂರ್ ಯಾವಾಗ ಮದುವೆ ಆಗ್ತಾರೆ ಗೊತ್ತಿಲ್ಲ.. ಆದರೆ ತಮ್ಮ ಕನಸಿನ ಮದುವೆ ಬಗ್ಗೆ ಈಗಾಗಲೇ ಸಕಲ ಪ್ಲಾನ್ಗಳನ್ನು ಮಾಡಿಕೊಂಡಿದ್ದಾರೆ.
7/ 8
ಜಾಹ್ನವಿ ತಾಯಿ ಶ್ರೀದೇವಿ ಅವರು ಅಧ್ಬುತ ನೃತ್ಯಗಾರ್ತಿ ಎಂಬ ವಿಚಾರ ಎಲ್ಲರಿಗೂ ತಿಳೀದಿದೆ. ಇದೀಗ ಮಗಳು ಕೂಡ ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಜಾಹ್ನವಿ ನೃತ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ.
8/ 8
ಜಾಹ್ನವಿ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಂತರ ಅವರು ಟ್ರೋಲ್ ಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾರೆ. ಆದರೆ ತನ್ನ ಮೇಲಾಗುತ್ತಿರುವ ಟ್ರೋಲ್ ಗಳಿಗೆ ಇದೂವರೆಗೂ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.