Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೊನೆಗೂ ಮದುವೆಯಾಗಿದ್ದಾರೆ. ಇದರಿಂದ ನಯನತಾರಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾನ್ಯವಾಗಿ ನಮ್ಮಲ್ಲಿ ವಿವಾಹವಾಗುವಾಗ ಪುರುಷರಿಗಿಂತ ವಯಸ್ಸಿನಲ್ಲಿ ಮಹಿಳೆಯರು ಚಿಕ್ಕವರಾಗಿರುತ್ತಾರೆ. ಆದರೆ ಅನೇಕ ಸೆಲೆಬ್ರಿಟಿಗಳ ಲೈಫ್ ನಲ್ಲಿ ಇದು ಉಲ್ಟಾ ಆಗಿದೆ. ಹೌದು, ಇಲ್ಲಿ ಪತಿಗಿಂತ ಪತ್ನಿಯರೇ ದೊಡ್ಡವರಾಗಿದ್ದಾರೆ. ಅಂತಹ ತಾರೆಯರು ಯಾರೆಂದು ನೋಡೋಣ ಬನ್ನಿ.

First published:

  • 18

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು, ಈ ಜೋಡಿಯ ಬಗ್ಗೆ ಹೇಳುವುದಾದರೆ, ವಿಘ್ನೇಶ್ ಶಿವನ್ ನಯನತಾರಾಗಿಂತ ಚಿಕ್ಕವರು. ನಯನತಾರಾ ಅವರು ನವೆಂಬರ್ 18, 1984ರಲ್ಲಿ ಜನಿಸಿದ್ದಾರೆ. ಆದರೆ ವಿಘ್ನೇಶ್ ಶಿವನ್ ಅವರ 18 ಸೆಪ್ಟೆಂಬರ್ 1985ರಂದು ಜನಿಸಿದ್ದಾರೆ. ಅಂದರೆ ನಯನತಾರಾ ಅವರಿಗಿಂತ 11 ತಿಂಗಳು ಚಿಕ್ಕವರು.

    MORE
    GALLERIES

  • 28

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ನಮ್ರತಾ ಅವರು ಮಹೇಶ್ ಬಾಬುಗಿಂತ ಎರಡೂವರೆ ವರ್ಷ ದೊಡ್ಡವರು. ಹೌದು, ತೆಲುಗಿನ ‘ವಂಶಿ’ ಸಿನಿಮಾದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಐದು ವರ್ಷಗಳ ಪ್ರೀತಿಯ ನಂತರ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಳಿಟ್ಟರು. ನಮ್ರತಾ 1972ರ ಜನವರಿ 22ರಂದು ಜನಿಸಿದರೆ ಮಹೇಶ್ ಬಾಬು 9 ಆಗಸ್ಟ್ 1975ರಂದು ಜನಿಸಿದ್ದಾರೆ.

    MORE
    GALLERIES

  • 38

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ಪ್ರಿಯಾಂಕಾ ಚೋಪ್ರಾ ತಮಗಿಂತ 11 ವರ್ಷ ಚಿಕ್ಕವರಾದ ನಿಕ್ ಜೋನಾಸ್ ಅವರನ್ನು ಪ್ರೇಮ ವಿವಾಹವಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಈ ದಂಪತಿ ಇತ್ತೀಚೆಗೆ ಗಂಡು ಮಗುವನ್ನು ಪಡೆದುಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಜುಲೈ 18,1982 ರಂದು ಜನಿಸಿದರೆ, ನಿಕ್ ಜೋನಾಸ್ ಸೆಪ್ಟೆಂಬರ್ 16, 1992 ರಂದು ಜನಿಸಿದ್ದಾರೆ.

    MORE
    GALLERIES

  • 48

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ಅನುಷ್ಕಾ ಶರ್ಮಾ ತನಗಿಂತ 6 ತಿಂಗಳು ಚಿಕ್ಕವರಾಗಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ವಿವಾಹವಾಗಿದ್ದಾರೆ. ಅನುಷ್ಕಾ ಶರ್ಮಾ ಮೇ 1, 1988ರಂದು ಜನಿಸಿದರೆ, ವಿರಾಟ್ ಕೊಹ್ಲಿ 5 ನವೆಂಬರ್ 1988 ರಂದು ಜನಿಸಿದರು.

    MORE
    GALLERIES

  • 58

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ಅಭಿಷೇಕ್ ಬಚ್ಚನ್ ಗಿಂತ ಐಶ್ವರ್ಯಾ ರೈ ಎರಡು ವರ್ಷ ದೊಡ್ಡವಳು. ಐಶ್ವರ್ಯಾ ರೈ 1 ನವೆಂಬರ್ 1973ರಂದು ಹುಟ್ಟಿದರೆ, ಅಭಿಷೇಕ್ ಬಚ್ಚನ್ ಫೆಬ್ರವರಿ 5, 1976 ರಂದು ಜನಿಸಿದ್ದಾರೆ.

    MORE
    GALLERIES

  • 68

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ಸುಶ್ಮಿತಾ ಸೇನ್ ತನಗಿಂತ 15 ವರ್ಷ ಚಿಕ್ಕವನಾದ ತನ್ನ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಸುಶ್ಮಿತಾ ಸೇನ್ ನವೆಂಬರ್ 19, 1975ರಂದು ಜನಿಸಿದ್ದರೆ, ರೋಹ್ಮನ್ ಶಾಲ್ ಜನವರಿ 4, 1991 ರಂದು ಜನಿಸಿದರು.

    MORE
    GALLERIES

  • 78

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ಶಿಲ್ಪಾ ಶೆಟ್ಟಿ ಕೂಡ ತನ್ನ ವಯಸ್ಸಿಗಿಂತ ಚಿಕ್ಕವರಾಗಿದ್ದ ರಾಜ್ ಕುಂದ್ರಾನನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಶಿಲ್ಪಾ ಶೆಟ್ಟಿಯವರು 8 ಜೂನ್ 1975ರಂದು ಜನಿಸಿದರೆ, ಪತಿ ರಾಜ್ ಕುಂದ್ರಾ 9 ಸೆಪ್ಟೆಂಬರ್ 1975ರಂದು ಜನಿಸಿದ್ದಾರೆ. ಕುಂದ್ರಾ 3 ತಿಂಗಳು ಚಿಕ್ಕವರಾಗಿದ್ದಾರೆ.

    MORE
    GALLERIES

  • 88

    Nayanthara Wedding: ಸೀನಿಯರ್ಸ್​ಗಳಿಗೆ ಜೂನಿಯರ್ಸ್ ಮೇಲೆ ಲವ್! ಈ ತಾರಾ ಜೋಡಿಗಳಲ್ಲಿ ಹೆಂಡ್ತೀರೇ ದೊಡ್ಡವ್ರು ಗುರು

    ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತನಗಿಂತ ಐದು ವರ್ಷ ದೊಡ್ಡವರಾದ ಅಂಜಲಿ ಅವರನ್ನು ವಿವಾಹವಾಗಿದ್ದಾರೆ. ಅಂಜಲಿ ತೆಂಡೂಲ್ಕರ್ ಅವರು ನವೆಂಬರ್ 10, 1967ರಂದು ಜನಿಸಿದರೆ ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ 24, 1973ರಂದು ಜನಿಸಿದ್ದಾರೆ.

    MORE
    GALLERIES