ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿನಯದ, ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಬ್ಲಾಕ್ಬಸ್ಟರ್ ಆಗಿತ್ತು. ಭಾರತದಲ್ಲಿ ಮಾತ್ರವಲ್ಲ, ಜಪಾನ್ ಬಾಕ್ಸ್ ಆಫೀಸ್ನಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ತ್ರಿಬಲ್ ಆರ್ ಮೊದಲ ಸ್ಥಾನದಲ್ಲಿದೆ.
2/ 10
ಭಾರತದಾದ್ಯಂತ ಹೊಸ ಸಂಚಲನವನ್ನೇ ಮೂಡಿಸಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರ. ಹಲವಾರು ವಿವಾದಗಳನ್ನು ಹುಟ್ಟಿ ಹಾಕಿದ್ದ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಬಿಡುಗಡೆಯಾದ ಒಂದೇ ವಾರಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ದಿ ಕಾಶ್ಮೀರ್ ಫೈಲ್ಸ್ 2ನೇ ಸ್ಥಾನದಲ್ಲಿದೆ.
3/ 10
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ದೇಶ, ವಿದೇಶಗಳಲ್ಲೂ ಸದ್ದು ಮಾಡ್ತು. ಯಶ್ ಗೆ ದೊಡ್ಡ ಮಟ್ಟದ ಸಕ್ಸಸ್ ನೀಡ್ತು. ಕೋಟಿ ಕೋಟಿ ಕಲೆಕ್ಷನ್ ಗಳಿಸಿತ್ತು. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಕೆಜಿಎಫ್ 3ನೇ ಸ್ಥಾನದಲ್ಲಿದೆ.
4/ 10
ಕಮಲ್ ಹಾಸನ್ ಅವರ ಬ್ಲಾಕ್ಬಸ್ಟರ್ ಚಿತ್ರ ವಿಕ್ರಮ್ ಸಹ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 442 ಕೋಟಿ ರೂ.ಗಳನ್ನು ಗಳಿಸಿತ್ತು. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ವಿಕ್ರಮ್ 4ನೇ ಸ್ಥಾನದಲ್ಲಿದೆ
5/ 10
ಕನ್ನಡದ ಕಾಂತಾರ ಸಿನಿಮಾ ಇತಿಹಾಸ ಬರೆದಿದೆ. ಸದ್ಯಕ್ಕೆ ಯಾರೂ ಈಗ ಒಂದು ಇತಿಹಾಸದ ಹತ್ತಿರ ಹೋಗೋಕೆ ಆಗೋದಿಲ್ಲ. ಅಂತಹ ಒಂದು ಸಾಧನೆಯನ್ನೇ ಕಾಂತಾರ ಮಾಡಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿದ್ದಾರೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಕಾಂತಾರ 5ನೇ ಸ್ಥಾನದಲ್ಲಿದೆ.
6/ 10
ಬಹುಭಾಷಾ ನಟ ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಸಿನಿಮಾವು ಜುಲೈ 1ರಂದು ವಿಶ್ವಾದ್ಯಂತ ಬಹುಭಾಷೆಗಳಲ್ಲಿ ತೆರೆಕಂಡಿತ್ತು. ಖ್ಯಾತ ರಾಕೆಟ್ ವಿಜ್ಞಾನಿ ನಂಬಿ ನಾರಾಯಣ್ ಅವರ ಜೀವನ ಚರಿತ್ರೆಯನ್ನು ಆಧರಿತ ಕಥೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ರಾಕೆಟ್ರಿ: ದಿ ನಂಬಿ ಎಫೆಕ್ಟ್ 6ನೇ ಸ್ಥಾನದಲ್ಲಿದೆ.
7/ 10
ಶಶಿ ಕಿರಣ್ ನಿರ್ದೇಶನದ ಮೇಜರ್ ಸಿನಿಮಾದಲ್ಲಿ ಅಡಿವಿ ಶೇಷ್ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ 26/11 ಮುಂಬೈ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನವನ್ನು ತೋರಿಸಲಾಗಿದೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಮೇಜರ್ 7ನೇ ಸ್ಥಾನದಲ್ಲಿದೆ
8/ 10
ಹನು ರಾಘವಪುಡಿ ಬರೆದು ನಿರ್ದೇಶಿಸಿದ ತೆಲುಗು ಭಾಷೆಯ ರೊಮ್ಯಾಂಟಿಕ್ ಸಿನಿಮಾ ಸೀತಾ ರಾಮಂ. ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನಾ ಅಧಿಕಾರಿಯಾದ ಲೆಫ್ಟಿನೆಂಟ್ ರಾಮ್ ಆಗಿ ದುಲ್ಕರ್ ಕಾಣಿಸಿಕೊಂಡಿದ್ದಾರೆ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಸೀತಾ ರಾಮಂ 8ನೇ ಸ್ಥಾನದಲ್ಲಿದೆ
9/ 10
ಮಣಿರತ್ನಂ ಅವರ ಅದ್ಭುತ ಸಿನಿಮಾ ಪೊನ್ನಿಯಿನ್ ಸೆಲ್ವನ್ 50 ನೇ ದಿನಕ್ಕೆ ವಿಶ್ವಾದ್ಯಂತ 500 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ ಪೊನ್ನಿಯಿನ್ ಸೆಲ್ವನ್ 9ನೇ ಸ್ಥಾನದಲ್ಲಿದೆ.
10/ 10
ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ 777 ಚಾರ್ಲಿ. ಕಿರಣ್ ರಾಜ್ ನಿರ್ದೇಶನದ ಮನಮಿಡಿಯುವ ಸಿನಿಮಾ 777 ಚಾರ್ಲಿ ಶ್ವಾನ ಹಾಗೂ ಮಾನವನ ಭಾವನಾತ್ಮಕ ಬಾಂಧವ್ಯದ ಕಥಾಹಂದರ ಹೊಂದಿರುವ ಸಿನಿಮಾ. ಐಎಂಡಿಬಿ ಟಾಪ್ 10 ಸಿನಿಮಾದಲ್ಲಿ 777 ಚಾಲಿ 10ನೇ ಸ್ಥಾನದಲ್ಲಿದೆ.