Ileana: ಅಂಥ ಪಾತ್ರದಲ್ಲಿ ಮಾತ್ರ ನಟಿಸಲ್ಲ ಅಂದ್ರು 'ಪೊಕಿರಿ' ಬೆಡಗಿ
Ileana D'Cruz: ಒಂದು ಕಾಲದಲ್ಲಿ ಮಹೇಶ್ ಬಾಬು, ಜೂ.ಎನ್ಟಿಆರ್, ರವಿ ತೇಜ, ವಿಜಯ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದಂತೆ ಸೌತ್ ಸ್ಟಾರ್ಗಳ ಲಕ್ಕಿ ನಾಯಕಿಯಾಗಿ ಮಿಂಚಿದ್ದರು.
ಟಾಲಿವುಡ್ನ ಬಳುಕುವ ಬಳ್ಳಿ ಇಲಿಯಾನಾ ಬಾಲಿವುಡ್ನತ್ತ ಮುಖ ಮಾಡಿದ ಬಳಿಕ ತೆಲುಗು ಚಿತ್ರರಂಗದಿಂದ ದೂರವೇ ಉಳಿದಿದ್ದರು. ಬಿಟೌನ್ನಲ್ಲಿ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಪೊಕಿರಿ ಬೆಡಗಿ ಸುದ್ದಿಯಾಗಿದ್ದು ಮಾತ್ರ ಬಾಯ್ ಫ್ರೆಂಡ್ ವಿಷಯದಿಂದ.
2/ 19
ಟಾಲಿವುಡ್ನ ಬಳುಕುವ ಬಳ್ಳಿ ಇಲಿಯಾನಾ ಬಾಲಿವುಡ್ನತ್ತ ಮುಖ ಮಾಡಿದ ಬಳಿಕ ತೆಲುಗು ಚಿತ್ರರಂಗದಿಂದ ದೂರವೇ ಉಳಿದಿದ್ದರು. ಬಿಟೌನ್ನಲ್ಲಿ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಪೊಕಿರಿ ಬೆಡಗಿ ಸುದ್ದಿಯಾಗಿದ್ದು ಮಾತ್ರ ಬಾಯ್ ಫ್ರೆಂಡ್ ವಿಷಯದಿಂದ.
3/ 19
ಏಕೆಂದರೆ ಮಾದಕ ಮೈಮಾಟದ ಬೆಡಗಿ ಕೆರಿಯರ್ ಕಟ್ಟಿಕೊಂಡಿದ್ದು ಟಾಲಿವುಡ್ ಚಿತ್ರರಂಗದಿಂದ, ಅದರಲ್ಲೂ ಒಂದು ಕಾಲದಲ್ಲಿ ಮಹೇಶ್ ಬಾಬು, ಜೂ.ಎನ್ಟಿಆರ್, ರವಿ ತೇಜ, ವಿಜಯ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದಂತೆ ಸೌತ್ ಸ್ಟಾರ್ಗಳ ಲಕ್ಕಿ ನಾಯಕಿಯಾಗಿ ಮಿಂಚಿದ್ದರು.
4/ 19
ಹೀಗಾಗಿಯೇ ಮತ್ತೆ ಸಕ್ಸಸ್ ಸಿಹಿಗಾಗಿ ಟಾಲಿವುಡ್ ಚಿತ್ರದಲ್ಲಿ ಇಲಿಯಾನಾ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು ತೆಲುಗು ನಿರ್ದೇಶಕರು. ಅದರಂತೆ ಇತ್ತೀಚೆಗೆ ಚಿತ್ರವೊಂದು ನಟಿಗಾಗಿ ವಿಶೇಷ ಪಾತ್ರವೊಂದರ ಆಫರ್ ನೀಡಿದೆ. ಅದಕ್ಕಿಂತಲೂ ಹೆಚ್ಚಾಗಿ ಸೂಪರ್ ಸಂಭಾವನೆ ನೀಡುವುದಾಗಿ ಹೇಳಿಕೊಂಡಿದೆ.
5/ 19
ಅದು ಬಾಲಿವುಡ್ನ ಸೂಪರ್ ಡೂಪರ್ ಹಿಟ್ ಚಿತ್ರ ಅಂಧಾದುನ್ನಲ್ಲಿ ನಟಿ ಟಬು ನಿರ್ವಹಿಸಿದ ಪಾತ್ರ. ಅಂಧಾದುನ್ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದ್ದು ಚಿತ್ರದಲ್ಲಿ ನಿತಿನ್ ನಾಯಕನಾಗಿ ನಟಿಸಲಿದ್ದಾರೆ. ಲಾಕ್ಡೌನ್ ಮುನ್ನವೇ ಚಿತ್ರ ಸೆಟ್ಟೇರಿದರೂ ಪಾತ್ರಗಳ ಆಯ್ಕೆಗಳು ಈಗ ನಡೆಯುತ್ತಿದೆ.
6/ 19
ಈ ಮೊದಲು ನಿರ್ದೇಶಕ ಮೆರ್ಲಪಕ ಗಾಂಧಿ ತೆಲುಗಿನಲ್ಲೂ ಟಬು ಅವರಿಂದಲೇ ಅದೇ ಪಾತ್ರವನ್ನು ನಿರ್ವಹಿಸಲು ಕೇಳಿಕೊಂಡಿದ್ರಂತೆ. ಮೊದಲು ಒಪ್ಪಿದ ಬಾಲಿವುಡ್ ನಟಿ ಬಳಿಕ ಹೆಚ್ಚಿನ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ. ಹೀಗಾಗಿ ಅವರ ಪಾತ್ರಕ್ಕೆ ಇಲಿಯಾನಾ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
7/ 19
ಈ ಬಗ್ಗೆ ಇಲಿಯಾನಾ ಅವರೊಂದಿಗೆ ಮಾತುಕತೆ ನಡೆಸಿದಾಗ ಮುಲಾಜಿಲ್ಲದೆ ಆಫರ್ ನಿರಾಕರಿಸಿದ್ದಾರೆ. ಇದಕ್ಕೆ ಕಾರಣ ಅದು ನೆಗೆಟಿವ್ ಪಾತ್ರ ಎಂಬುದು. ಆದರೆ ಅಂಧಾದುನ್ ಚಿತ್ರಕಥೆಯಲ್ಲಿ ಅದೇ ಪಾತ್ರ ಜೀವಾಳ. ಹೀಗಾಗಿ ನಟಿ ಒಪ್ಪಿಕೊಳ್ಳಲಿದ್ದಾರೆ ಎಂದೇ ಚಿತ್ರತಂಡ ನಿರೀಕ್ಷಿಸಿತ್ತು.
8/ 19
ಆದರೆ ಅನೈತಿಕ ಸಂಬಂಧ ಹೊಂದಿರುವ ನೆಗೆಟಿವ್ ಪಾತ್ರದಲ್ಲಿ ನಾನು ನಟಿಸುವುದಿಲ್ಲ ಎಂದು ಇಲಿಯಾನಾ ಹೇಳಿದ್ದಾರೆ. ಇನ್ನು ಅದು ವಿವಾಹಿತ ಮಹಿಳೆಯ ಪಾತ್ರ. ಒಂದು ವೇಳೆ ಆ ಪಾತ್ರ ಒಪ್ಪಿಕೊಂಡರೆ ಮತ್ತೆ ನಾಯಕಿಯಾಗಿ ಮಿಂಚಲು ಸಾಧ್ಯವಾಗುವುದಿಲ್ಲ ಎಂಬ ಭಯ ಕೂಡ ನಟಿಯಲ್ಲಿದೆ ಎಂದು ಹೇಳಲಾಗುತ್ತಿದೆ.
9/ 19
ಹೀಗಾಗಿ ಯಾವುದೇ ಕಾರಣಕ್ಕೂ ಅನೈತಿಕ ಸಂಬಂಧದ ರೋಲ್ನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಇಲಿಯಾನಾ. ಇನ್ನು ಚಿತ್ರತಂಡ ಶಿಲ್ಪಾ ಶೆಟ್ಟಿ ಅವರನ್ನು ಇದೇ ಪಾತ್ರಕ್ಕಾಗಿ ಸಂಪರ್ಕಿಸಿದೆ ಎಂಬ ಮಾತಿದೆ.
10/ 19
ಇತ್ತ ಇಲಿಯಾನಾ ಕೂಡ ನಾರ್ಗಾಜುನ ಜೊತೆಗಿನ ಹೊಸ ಚಿತ್ರದ ಮೂಲಕ ಟಾಲಿವುಡ್ಗೆ ಮರಳಲಿದ್ದಾರೆ ಎಂಬ ಸುದ್ದಿಯೊಂದು ಕೆಲ ತಿಂಗಳಿಂದ ಹರಿದಾಡುತ್ತಿದೆ. ಆದರೆ ಯಾವುದಕ್ಕೂ ಇನ್ನೂ ಕೂಡ ಸ್ಪಷ್ಟನೆ ಮಾತ್ರ ಸಿಕ್ಕಿಲ್ಲ.
11/ 19
ಒಟ್ಟಿನಲ್ಲಿ ಒಂದು ಕಾಲದಲ್ಲಿ ತೆಲುಗಿನ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದ ಇಲಿಯಾನಾ ಬಾಲಿವುಡ್ನತ್ತ ಮುಖ ಮಾಡಿ ಇದೀಗ ಅವಕಾಶಗಳಿಲ್ಲದೇ ಒಂದು ಉತ್ತಮ ರೋಲ್ಗಾಗಿ ಕಾಯಬೇಕಾಗಿ ಬಂದಿರುವುದು ಮಾತ್ರ ವಿಪರ್ಯಾಸ.
12/ 19
ಹಾಗೆಯೇ ಹುಡುಗ-ಹುಡುಗಿ ಚಿತ್ರದ ಮೂಲಕ ಕನ್ನಡದಲ್ಲೂ ಇಲಿಯಾನಾ ಡಿಕ್ರೂಜ್ ಬಿಂಕದ ಸಿಂಗಾರಿಯಾಗಿ ಬಣ್ಣ ಹಚ್ಚಿದ್ದರು.