ತೆಲುಗು ಮತ್ತು ತಮಿಳಿನಲ್ಲಿ ತನ್ನ ಗ್ಲಾಮರ್‌ನಿಂದ ಕಿಕ್ ಕೊಟ್ಟ ಈ ನಟಿ ಕಾಲಕ್ರಮೇಣ ಸೌತ್ ಸಿನಿಮಾಗಳನ್ನು ಮಾಡುತ್ತಾ ಬಾಲಿವುಡ್‌ನಲ್ಲೂ ಹಿಟ್ ಆದರು. ಇಲ್ಲಿ ಇಲಿಯಾನಾ ಗ್ಲಾಮರ್ ನಂಬಿದ್ದರು. ಆದರೆ ಹಿಂದಿಯಲ್ಲಿ 'ಬರ್ಫಿ', 'ಮೈ ತೇರಾ ಹೀರೋ', 'ಹ್ಯಾಪಿ ಎಂಡಿಂಗ್' 'ರುಸ್ತುಂ', 'ಬಾದ್‌ಶಾಹೋ' 'ರೈಡ್', 'ಮುಬಾರಕನ್' ಚಿತ್ರಗಳಲ್ಲಿ ನಟಿಸಿದ್ದರೂ ಬಾಲಿವುಡ್ನಲ್ಲಿ ಇಲಿಯಾನಾಗೆ ಬ್ರೇಕ್ ಸಿಕ್ಕಿರಲಿಲ್ಲ.
ಆ ಫೋಟೋಗಳಲ್ಲಿ, ಇಲಿಯಾನಾ ಕಪ್ಪು ಡ್ರೆಸ್‌ನಲ್ಲಿದ್ದಾರೆ. ಅವರ ಗರ್ಭಧಾರಣೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ತಂದೆ ಯಾರೆಂದು ಹೇಳದೆ ಈ ಗರ್ಭಧಾರಣೆಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಇಲಿಯಾನಾ ಯಾವುದೇ ಸಿನಿಮಾ ಮಾಡುತ್ತಿಲ್ಲ. ಈ ಗೋವಾದ ಸುಂದರಿ ಮನೆಯಲ್ಲೇ ಇದ್ದುಕೊಂಡು ಪ್ರೆಗ್ನೆನ್ಸಿ ಎಂಜಾಯ್ ಮಾಡುತ್ತಿದ್ದಾರೆ.