ಸ್ಯಾಂಡಲ್ವುಡ್ನಲ್ಲೂ ಕಾಣಿಸಿಕೊಂಡಿದ್ದ ಪೊಕಿರಿ ಬೆಡಗಿ ತಮ್ಮ ಬಳುಕುವ ಮೈಮಾಟದಿಂದಲೇ ಸಿನಿಪ್ರಿಯರನ್ನು ಮೋಡಿ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಬಣ್ಣದ ಲೋಕದಿಂದ ದೂರ ಉಳಿದಿದ್ದ ನಟಿ, ಬಾಯ್ ಫ್ರೆಂಡ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.
ಬಾಲಿವುಡ್ನ ಬಳುಕುವ ವೈಯ್ಯಾರಿ ನಟಿ ಇಲಿಯಾನಾ ಡಿಕ್ರೂಜ್ ಬಹುಕಾಲದ ಬಾಯ್ ಫ್ರೆಂಡ್ ನಡುವೆ ಎಲ್ಲವೂ ಸರಿಯಿಲ್ಲವಂತೆ. ಇಬ್ಬರ ಪ್ರೇಮ್ ಕಹಾನಿಯಲ್ಲಿ ಬಿರುಕುಂಟಾಗಿದೆ ಎಂದು ವರದಿಯಾಗಿದೆ.
2/ 13
ಇಲಿಯಾನಾ ಡಿಕ್ರೂಜ್ ಮತ್ತು ಅವಳ ಗೆಳೆಯ ಆಂಡ್ರ್ಯೂ ನೀಬೊನ್ ನಡುವೆ ವೈಮನಸ್ಸು ಮೂಡಿದೆ ಎಂದು ಮಾಧ್ಯಮ ವರದಿಗಳು ಹೇಳಿಕೊಂಡಿವೆ. ಇಬ್ಬರ ನಡುವಿನ ಮನಸ್ತಾಪ ಇದೀಗ ಸಂಬಂಧ ಮುರಿದುಬೀಳುವ ಅಂಚಿಗೆ ತಲುಪಿದೆ.
3/ 13
ಕಳೆದ ಕೆಲವು ವರ್ಷಗಳಿಂದ ಇಲಿಯಾನಾ ಡಿಕ್ರೂಜ್ ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆಂಡ್ರ್ಯೂ ನೀಬೊನ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ.
4/ 13
ಈ ಸೆಲೆಬ್ರಿಟಿ ಜೋಡಿ ಕಳೆದೆರೆಡು ವರ್ಷಗಳಿಂದ ಪಾರ್ಟಿ ಪಬ್ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.
5/ 13
ಹೀಗಾಗಿ ಶೀಘ್ರದಲ್ಲೇ ಇಲಿಯಾನಾ ವಿದೇಶಿ ಬಾಯ್ ಫ್ರೆಂಡ್ನ್ನು ವರಿಸಲಿದ್ದಾರೆ ಎಂದು ಸುದ್ದಿಯಾಗಿತ್ತು.
6/ 13
ಅಷ್ಟೇ ಅಲ್ಲದೆ ವಿವಾಹಕ್ಕೂ ಮುನ್ನವೇ ಇಲಿಯಾನಾ ಗರ್ಭಧರಿಸಿದ್ದಾರೆಂಬ ಗಾಸಿಪ್ಗಳು ಸಹ ಹರಿದಾಡಿದ್ದವು.
7/ 13
ಆದರೆ ಈ ವಿಚಾರಗಳನ್ನು ಅಲ್ಲೆಗೆಳೆದಿದ್ದ ಇಲಿಯಾನಾ, ಮದುವೆ ವಿಚಾರವನ್ನು ಮುಂದಿನ ಬಾರಿ ತಿಳಿಸುವುದಾಗಿ ಹೇಳಿದ್ದರು.
8/ 13
ಇದೀಗ ಬಾಲಿವುಡ್ ಕಡಲ ಕಿನಾರೆಯಿಂದ ಇಲಿಯಾನಾ ಬ್ರೇಕ್ ಸುದ್ದಿಯೊಂದು ಅಪ್ಪಳಿಸಿದೆ. ಇಬ್ಬರು ತಮ್ಮ ಸಾಮಾಜಿಕ ಜಾಲತಾಣಗಳಿಂದ ಫೋಟೋಗಳು ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
9/ 13
ಟಾಲಿವುಡ್ನಲ್ಲಿ ಮಿರ ಮಿರ ಮಿಂಚಿದ್ದ ಇಲಿಯಾನಾ ಬಳಿಕ ಬಾಲಿವುಡ್ನತ್ತ ಮುಖ ಮಾಡಿದ್ದರು.
10/ 13
ತೆಲುಗಿನ ಪೊಕಿರಿ, ಕಿಕ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
11/ 13
ಹಾಗೆಯೇ ಹುಡುಗ-ಹುಡುಗಿ ಚಿತ್ರದ ಮೂಲಕ ಕನ್ನಡದಲ್ಲೂ ಇಲಿಯಾನಾ ಡಿಕ್ರೂಜ್ ಬಿಂಕದ ಸಿಂಗಾರಿಯಾಗಿ ಬಣ್ಣ ಹಚ್ಚಿದ್ದರು.
12/ 13
ಇತ್ತೀಚಿನ ದಿನಗಳಲ್ಲಿ ವೈಯುಕ್ತಿಕ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಸೌತ್ ಸುಂದರಿ ಹಿಂದಿಯ ಪಾಗಲ್ಪಂತಿ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.