Kriti Sanon: ರೆಡ್ ಡ್ರೆಸ್ನಲ್ಲಿ ನಟಿ ಕೃತಿ ಸನೋನ್ ಸಖತ್ ಲುಕ್, ಈ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!
ಬಾಲಿವುಡ್ ಸಿನಿಮಾ ಹಾಗೂ ಸೌತ್ ಸಿನಿಮಾಗಳಲ್ಲಿ ಮಿಂಚಿತ್ತಿರುವ ನಟಿ ಕೃತಿ ಸನೋನ್ ಶೆಹಜಾದಾ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಕ್ಯಾಂಪೇನ್ ಗಾಗಿ ಅನೇಕ ಮಾಧ್ಯಮಗಳಿಗೆ ಸಂದರ್ಶನ ಕೂಡ ನೀಡುತ್ತಿದ್ದಾರೆ.
ನಟಿ ಕೃತಿ ಸನೋನ್ ನಟಿಸಿರುವ ಶೆಹಜಾದಾ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿತ್ತು.
2/ 8
ತೆಲುಗಿನಲ್ಲಿ ಅಲ್ಲು ಅರ್ಜುನ್ ನಟಿಸಿದ್ದ ‘ಅಲಾ ವೈಕುಂಟ ಪುರಮುಲೋ’ ಚಿತ್ರದ ರಿಮೇಕ್ ಚಿತ್ರ ಇದಾಗಿದೆ. ಆ ಚಿತ್ರದಲ್ಲಿ ಪೂಜಾ ಹೆಗ್ಡೆ ಮಾಡಿದ್ದ ಪಾತ್ರವನ್ನೇ ಹಿಂದಿಯಲ್ಲಿ ಕೃತಿ ಸನೋನ್ ಮಾಡ್ತಿದ್ದಾರೆ.
3/ 8
ಶೆಹಜಾದಾ’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಗೆ ಜೋಡಿಯಾಗಿ ನಟಿ ಕೃತಿ ಸನೋನ್ ನಟಿಸಿದ್ದಾರೆ.
4/ 8
‘ಶೆಹಜಾದಾ’ ಚಿತ್ರದ ಪ್ರಚಾರಕ್ಕಾಗಿ ತೆರೆಳಿದ್ದ ವೇಳೆ ಕೃತಿ ಸನೋನ್ ತೊಟ್ಟಿದ್ದ ಬಟ್ಟೆ ಎಲ್ಲರ ಗಮನ ಸೆಳೆದಿದೆ. ಈ ಬಟ್ಟೆಯ ಬೆಲೆ ಕೇಳಿದ್ರೆ ನೀವೂ ನಿಜಕ್ಕೂ ಶಾಕ್ ಆಗ್ತೀರಾ?
5/ 8
ಕೃತಿ ಸನೋನ್ ಹಾಕಿದ್ದ ಈ ಬಟ್ಟೆಯ ಬೆಲೆ ಬರೋಬ್ಬರಿ 37 ಸಾವಿರ ರೂಪಾಯಿ ಅಂತೆ. ಇದೇ ಬಟ್ಟೆ ತೊಟ್ಟು ನಟಿ ಕೃತಿ ಸನೋನ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.
6/ 8
ರೆಡ್ ಡ್ರೆಸ್ ನಲ್ಲಿ ನಟಿ ಮಾದಕ ನೋಟ ಬೀರಿದ್ದು, ಈ ಫೋಟೋಗಳನ್ನು ಕೃತಿ ಇನ್ಸ್ಟಾ ಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
7/ 8
ಕೃತಿ ಸನೋನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, 2021ರ ‘ಮಿಮಿ’ ಚಿತ್ರ ಸೂಪರ್ ಹಿಟ್ ಆಗಿತ್ತು. ‘ಶೆಹಜಾದಾ’ ಚಿತ್ರ ಫೆಬ್ರವರಿ 10ರಂದು ರಿಲೀಸ್ ಆಗುತ್ತಿದೆ.
8/ 8
ದೆಹಲಿಯಲ್ಲಿ ಜನಿಸಿದ ಈ ನಟಿ ಬಾಲಿವುಡ್ ಬದಲಿಗೆ ಟಾಲಿವುಡ್ ಮೂಲಕ ಇಂಡಸ್ಟ್ರಿಗೆ ಪ್ರವೇಶಿಸಿದ್ದಾರೆ. ಈಗ ನಟಿಗೆ ಬಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ ಬರುತ್ತಿದೆ. ಟಾಲಿವುಡ್ ಸಿನಿಮಾ ಆದಿಪುರುಷಲು ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿಯಾಗಿದ್ದಾರೆ.