ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಸದ್ಯ ಸಿನಿಮಾ ರಂಗದಿಂದ ದೂರ ಇದ್ದಾರೆ. ಆದರೆ ಹೀರೋ ಆಗಲು ಅಗತ್ಯವಿರುವ ಎಲ್ಲ ಲಕ್ಷಣಗಳೂ ಅವರಲ್ಲಿವೆಯಂತೆ. ಸಾಮಾಜಿಕ ಜಾಲತಾಣದಲ್ಲಿ ಆರ್ಯನ್ ತಮ್ಮ ಸಿಕ್ಸ್ಪ್ಯಾಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ ಎಂಟ್ರಿ ಕೊಡುವ ನಿರ್ಧಾರ ಸಂಪೂರ್ಣವಾಗಿ ಆರ್ಯನ್ಗೆ ಬಿಟ್ಟಿದ್ದು ಎನ್ನುತ್ತಾರೆ ಶಾರುಖ್.