Taapsee Pannu: ಮಕ್ಕಳು ಬೇಕೆನಿಸಿದಾಗ ಮದುವೆಯಾಗ್ತಾರಂತೆ ನಟಿ ತಾಪ್ಸಿ ಪನ್ನು..!
Taapsee Pannu Boyfriend: ತಾಪ್ಸಿ ಪನ್ನು (Taapsee Pannu) ಆಗಾಗ ನೀಡುವ ಹೇಳಿಕೆಗಳಿಂದಾಗಿ ಸದ್ದು ಮಾಡುತ್ತಿರುತ್ತಾರೆ. ಇನ್ನು ನಟಿ ಕಂಗನಾ ರನೋತ್ ಜತೆ ಸಾಮಾಜಿಕ ಜಾಲತಾಣದಲ್ಲಿ ವಾರ್ ನಡೆಯುತ್ತಲೇ ಇರುತ್ತದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಾಪ್ಸಿ ಮದುವೆ ಹಾಗೂ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ. (ಚಿತ್ರಗಳು ಕೃಪೆ: ತಾಪ್ಸಿ ಪನ್ನು ಇನ್ಸ್ಟಾಗ್ರಾಂ ಖಾತೆ)
ಹಿಂದಿ ಹಾಗೂ ತೆಲುಗು ಸಿನಿರಂಗದಲ್ಲಿ ತಮ್ಮ ಅಭಿನಯದ ಮೂಲಕ ತಮ್ಮದೇ ಆದ ಸ್ಥಾನ ಪಡೆದುಕೊಂಡಿರುವ ತಾಪ್ಸಿ ಪನ್ನು ಸದ್ಯ ಬಾಲಿವುಡ್ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ.
2/ 8
ಸಿನಿ ಕೆರಿಯರ್ನಲ್ಲಿ ಉತ್ತುಂಗದಲ್ಲಿರುವಾಗಲೇ ತಮ್ಮ ಲವ್ ಲೈಫ್ ಹಾಗೂ ಬಾಯ್ ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.
3/ 8
ತಾಪ್ಸಿ ಅವರಿಗೆ ಬಾಯ್ ಫ್ರೆಂಡ್ ಇದ್ದಾರೆ ಎಂದು ಬಹಳ ಸಮಯದಿಂದ ಸುದ್ದಿ ಹರಿದಾಡುತ್ತಿತ್ತು. ಆದರೆ ಅವರು ಯಾರು ಅನ್ನೋದು ಮಾತ್ರ ಎಲ್ಲೂ ತಾಪ್ಸಿ ಹೇಳಿಕೊಂಡಿರಲಿಲ್ಲ. ಬಾಯ್ಫ್ರೆಂಡ್ ಜತೆ ಮಾಲ್ಡೀವ್ಸ್ಗೂ ಹೋಗಿ ಎಂಜಾಯ್ ಮಾಡಿದ್ದರು.
4/ 8
ತನ್ನ ಪ್ರಿಯತಮನ ಬಗ್ಗೆ ಮಾತನಾಡಲು ತನಗೆ ಯಾವುದೇ ಅಂಜಿಕೆ ಇಲ್ಲ ಎಂದಿರುವ ತಾಪ್ಸಿ, ತನ್ನ ರಿಲೇಶನ್ ಶಿಪ್ ಸ್ಟೇಟಸ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
5/ 8
ತಾನು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ನೋಡುತ್ತೇನೆ. ಎರಡನ್ನೂ ಮಿಕ್ಸ್ ಮಾಡುವುದಿಲ್ಲ ಎಂದಿದ್ದಾರೆ. ಬೇರೆಯವರ ಹುಟ್ಟುಹಬ್ಬದಲ್ಲಿ ಭಾಗಿಯಾದರೆ ಒಂದೇ ಒಂದು ಫೋಟೋ ಹಂಚಿಕೊಳ್ಳುವ ನಾನು, ಬಾಯ್ಫ್ರೆಂಡ್ ವಿಷಯದಲ್ಲೂ ಹಾಗೆ ಇರುತ್ತೇನೆ ಎಂದಿದ್ದಾರೆ.
6/ 8
ಬಾಯ್ಫ್ರೆಂಡ್ ಮಥಿಯಾಸ್ ಜತೆ ಲವ್ ರಿಲೇಶನ್ ಶಿಪ್ನಲ್ಲಿದ್ದೇನೆ. ಆದರೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎನ್ನುತ್ತಾರೆ ತಾಪ್ಸಿ.
7/ 8
ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ, ಸದ್ಯಕ್ಕೆ ಆ ಆಲೋಚನೆ ಇಲ್ಲ. ಸದ್ಯಕ್ಕೆ ಏನಿದ್ದರೂ ತನ್ನ ಗಮನವೆಲ್ಲ ಸಿನಿಮಾದತ್ತ ಎಂದು ಹೇಳಿದ್ದಾರೆ ತಾಪ್ಸಿ.