ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗದಲ್ಲಿ ಮುಂದೆ ಬಂದ ಸೆಲೆಬ್ರಿಟಿ. ಸರ್ಫರೋಶ್, ಮುನ್ನಾ ಭಾಯ್ ಎಂಬಿಬಿಎಸ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ನಟ ಈಗ ಸಿನಿಮಾದಲ್ಲಿ ಲೀಡ್ ರೋಲ್ ಮಾಡುತ್ತಾರೆ. ಸೇಕ್ರೆಡ್ ಗೇಮ್ಸ್, ಗಾಂಗ್ಸ್ ಆಫ್ ವಾಸೇಪುರ್ನಂತಹ ಪ್ರಾಜೆಕ್ಟ್ಗಳಲ್ಲಿ ಲೀಡ್ ರೋಲ್ನಲ್ಲಿ ನಟಿಸಿದ್ದಾರೆ.