Shruti Haasan: ಖರ್ಚಿಗೂ ಹಣ ಇಲ್ಲದಂತಾಗಿದೆ; ಶಾಕಿಂಗ್ ಸುದ್ದಿ ಬಿಚ್ಚಿಟ್ಟ ನಟಿ ಶ್ರುತಿ ಹಾಸನ್
Shruti Haasan: ನಟಿ ಶ್ರುತಿ ಹಾಸನ್ ಆರ್ಥಿಕ ಸಂಕಷ್ಟ ಎದುರಾಗಿದೆಯಂತೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
News18 Kannada | May 18, 2020, 12:28 PM IST
1/ 8
ಸಿನಿಮಾ ಸ್ಟಾರ್ಗಳು ಎಂದರೆ ಅವರು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ಓಡಾಡಲು ಒಂದು ಕಾರು, ಉಳಿಯಲು ಒಂದು ಬಂಗಲೆ ಇರುತ್ತದೆ ಎಂಬುದು ಅನೇಕರ ನಂಬಿಕೆ.
2/ 8
ಆದರೆ, ಅನೇಕ ಸ್ಟಾರ್ ಕಲಾವಿದರು ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಾರೆ ಎಂಬುದು ಅನೇಕರಿಗೆ ಗೊತ್ತಿಲ್ಲದ ವಿಚಾರ.
3/ 8
ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಕೂಡ ಈಗ ಅಂಥದ್ದೇ ಶಾಂಕಿಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು ಎನ್ನುವುದಕ್ಕೆ ಇಲ್ಲಿದೆ ಉತ್ತರ.
4/ 8
ಶ್ರುತಿ ಹಾಸನ್ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾಗಾಗಿ ಸಾಕಷ್ಟು ಸಂಭಾವನೆ ಕೂಡ ಪಡೆಯುತ್ತಾರೆ. ಆದರೆ, ಅವರು ಇತ್ತೀಚೆಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.
5/ 8
ಈ ಮಧ್ಯೆ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆಯಂತೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
6/ 8
ಈ ಬಗ್ಗೆ ಮಾತನಾಡಿರುವ ಅವರು, ನಾನು ಆರ್ಥಿಕವಾಗಿ ಕುಗ್ಗಿದ್ದೇನೆ. ಮಾಡಿರುವ ಸಾಲ ತೀರಿಸಬೇಕಿದೆ. ಇದಕ್ಕೆಲ್ಲ ನನ್ನ ತಂದೆ ಬಳಿ ಕೇಳಿದರೆ ಅವರು ಹಣ ನೀಡುವುದಿಲ್ಲ ಎಂದು ಹೇಳುವುದಿಲ್ಲ. ಆದರೆ, ನನಗೆ ಸ್ವಾವಲಂಬಿ ಆಗಿ ಬದುಕಬೇಕು. ನಾನೇ ಸಾಲವನ್ನು ತೀರಿಸಬೇಕು ಎನ್ನುತ್ತಾರೆ ಶ್ರುತಿ.
7/ 8
ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ನಿತ್ಯ ಸಿನಿಮಾ ಕೆಲಸಗಳು ಇರುವುದಿಲ್ಲ. ಅಲ್ಲಿ ತಿಂಗಳಿಗೆ ಇಂತಿಷ್ಟು ಎಂದು ಯಾರೂ ಸಂಭಾವನೆ ಕೊಡುವುದಿಲ್ಲ. ಹೀಗಾಗಿ, ಚಿತ್ರರಂಗದಲ್ಲಿ ಕೆಲಸ ಮಾಡುವುದು ತುಂಬಾನೆ ರಿಸ್ಕ್ ಎಂದಿದ್ದಾರೆ ಶ್ರುತಿ ಹಾಸನ್.
8/ 8
ಇನ್ನು, ಲಾಕ್ಡೌನ್ ಇರುವುದರಿಂದ ತುಂಬಾ ಜನರಿಗೆ ಸಮಸ್ಯೆ ಎದುರಾಗಿದೆ. ಈ ಬಗ್ಗೆಯೂ ಶ್ರುತಿ ಹಾಸನ್ ಬೇಸರ ವ್ಯಕ್ತಪಡಿಸಿದ್ದಾರೆ.