ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಸೂಪರ್ ಸ್ಟಾರ್ ಆಗಿದ್ದ ವಿಚಾರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರು ಖ್ಯಾತ ಇಡೀ ಭಾರತಾದ್ಯಂತ ಹಬ್ಬಿದೆ.
2/ 10
ದಕ್ಷಿಣ ಭಾರತದಲ್ಲಿ ತಲೈವಾ ಎಂದೇ ಖ್ಯಾತಿ ಹೊಂದಿದ್ದಾರೆ ನಟ ರಜನಿಕಾಂತ್. ಇನ್ನು, ಬಾಲಿವುಡ್ ಗೂ ಅವರ ಖ್ಯಾತಿ ಹಬ್ಬಿದೆ. ಅವರ ಸಾಕಷ್ಟು ಚಿತ್ರಗಳು ಬಾಲಿವುಡ್ ಗೆ ಡಬ್ ಆಗಿವೆ.
3/ 10
ಅವರ ನಟನೆಯ ರೋಬಾಟ್ ಸಿನಿಮಾ ಬಾಲಿವುಡ್ನಲ್ಲಿ ಒಳ್ಳೆಯ ಸದ್ದು ಮಾಡಿತ್ತು,
4/ 10
ಆದರೆ, ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿ ಖಾನ್ ರಜನಿಕಾಂತ್ ಯಾರೂ ಅಂತಾನೇ ಗೊತ್ತಿಲ್ಲ ಎಂದಿದ್ದಾರೆ!
5/ 10
ಅರೇ ಸೈಫ್ ಅಲಿ ಖಾನ್ ಗೆ ನಿಜಕ್ಕೂ ರಜನಿ ಬಗ್ಗೆ ಗೊತ್ತಿಲ್ಲವಾ? ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಯೇ. ಅದಕ್ಕೆ ಇಲ್ಲಿದೆ ಉತ್ತರ.
6/ 10
ಅಂದಹಾಗೆ, ನಾವು ಹೇಳುತ್ತಿರುವದು ತೆರೆಯಮೇಲಿನ ವಿಚಾರ! ಹೌದು, ಶುಕ್ರವಾರ ತೆರೆಕಂಡ ದಿಲ್ ಬೇಚಾರ ಸಿನಿಮಾದಲ್ಲಿ ಹೀಗೊಂದು ದೃಶ್ಯ ಬರುತ್ತದೆ!
7/ 10
ದಿಲ್ ಬೇಚಾರ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಫ್ಯಾನ್. ಹೀಗಾಗಿ, ಸಿನಿಮಾ ಉದ್ದಕ್ಕೂ ರಜನಿಯ ಹೆಸರು ಆಗಾಗ ಬಂದು ಹೋಗುತ್ತಿರುತ್ತದೆ.
8/ 10
ಒಮ್ಮೆ ಸೈಫ್ ಅಲಿ ಖಾನ್ ಅವರನ್ನು ಭೇಟಿ ಮಾಡಿದ ವೇಳೆ ಸುಶಾಂತ್ ಸಿಂಗ್, ನಿಮಗೆ ರಜನಿ ಗೊತ್ತೇ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಉತ್ತರಿಸುವ ಸೈಫ್, ರಜನಿಕಾಂತ್? ಅವರು ಯಾರು ನನಗೆ ಗೊತ್ತೇ ಇಲ್ಲ ಎನ್ನುತ್ತಾರೆ.
9/ 10
ನಂತರ ನಕ್ಕು, ನಾನು ಜೋಕ್ ಮಾಡಿದೆ. ರಜನಿಕಾಂತ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರ ಖ್ಯಾತಿ ಎಲ್ಲ ಕಡೆ ಹಬ್ಬಿದೆ. ಹೀಗಾಗಿ, ನಂಗೆ ರಜನಿ ಬಗ್ಗೆ ಗೊತ್ತು ಎನ್ನುತ್ತಾರೆ ಸೈಫ್.