Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

Samantha Ruth Prabhu: ಸಮಂತಾ ಈಗ ಪ್ಯಾನ್​ ಇಂಡಿಯಾ ಸ್ಟಾರ್. ಭಾರತದ ಎಲ್ಲೆಡೆ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಈ ಮಧ್ಯೆ ಶಾಕುಂತಲಂ ಸಿನಿಮಾ ಪ್ರಚಾರದಲ್ಲಿದ್ದ ಸಮಂತಾ ಬಳಿ 'ನೀವೀಗಾ ಪ್ಯಾನ್​ ಇಂಡಿಯಾ ಸ್ಟಾರ್​​ ಆಗಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ?' ಎಂದು ಕೇಳಿದ್ದರು. ಇದಕ್ಕೆ ಸಮಂತ ಕೊಟ್ಟ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

First published:

  • 17

    Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

    ಸಮಂತಾ ರುತ್​ ಪ್ರಭು (Samantha Ruth Prabhu) ಸದ್ಯ ಭಾರತೀಯ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಭಾರೀ ಜನಪ್ರಿಯ ನಟಿ. ಸರೋಗಸಿ ಕಥೆಯುಳ್ಳ ಯಶೋಧ ಸಿನಿಮಾ ನಂತರ ಮತ್ತೊಂದು ನಾಯಕಿ ಪಾತ್ರದಲ್ಲಿ ಸಮಂತಾ ತೆರೆ ಮೇಲೆ ಮೋಡಿ ಮಾಡುವುದಕ್ಕೆ ಸಿದ್ಧರಿದ್ದಾರೆ. ಅದುವೇ ಶಾಕುಂತಲಂ. ಇಂಡಿಯಾ ಸಿನಿಮಾವಾಗಿ (Pan India Cinema) ತೆರೆ ಮೇಲೆ ಬರೋದಕ್ಕೆ ಸಿದ್ಧವಾಗಿರುವ ಬಹು ನಿರೀಕ್ಷಿತ ಚಿತ್ರ ಇದಾಗಿದೆ.

    MORE
    GALLERIES

  • 27

    Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

    ಸಮಂತಾ ಈಗ ಪ್ಯಾನ್​ ಇಂಡಿಯಾ ಸ್ಟಾರ್. ಭಾರತದ ಎಲ್ಲೆಡೆ ಸಮಂತಾ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಸೋಶಿಯಲ್​ ಮೀಡಿಯಾದ ಅವರ ಪೋಸ್ಟ್​ಗಳಿಗೆ ಎಲ್ಲಾ ಕಡೆಯಿಂದಲೂ ಪ್ರತಿಕ್ರಿಯೆಗಳು ಬರುತ್ತಿರುತ್ತವೆ. ಇದೇ ಕಾರಣಕ್ಕೆ ಶಾಕುಂತಲಂ ಸಿನಿಮಾ ಪ್ರಚಾರದಲ್ಲಿದ್ದ ಸಮಂತಾ ಅವರನ್ನು 'ನೀವೀಗಾ ಪ್ಯಾನ್​ ಇಂಡಿಯಾ ಸ್ಟಾರ್​​ ಆಗಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ?' ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಸಮಂತ ಕೊಟ್ಟ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

    MORE
    GALLERIES

  • 37

    Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

    ಪ್ಯಾನ್​ ಇಂಡಿಯಾ ನಟಿ ಎನ್ನುವುದರ ಬಗ್ಗೆ ಸಮಂತ ಅವರ ಪ್ರತಿಕ್ರಿಯೆ ಕೇಳಿದಾಗ ಅವರು ನೀಡಿದ ಉತ್ತರ ಎಲ್ಲರನ್ನು ಆಶ್ವರ್ಯಗೊಳಿಸಿತ್ತು. ನನ್ನನ್ನು ನೀವು ಪ್ಯಾನ್​ ಇಂಡಿಯಾ ಸ್ಟಾರ್​ ಎನ್ನುತ್ತೀದ್ದೀರಿ. ಆದರೆ ನಮ್ಮ ಮನೆಯಲ್ಲಿರುವ ಶ್ವಾನಗಳ ಕಕ್ಕವನ್ನು ಅಂದರೆ ಮಲ, ಮೂತ್ರವನ್ನು ನಾನೇ ತೆಗೆದು ಸ್ವಚ್ಛ ಮಾಡಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 47

    Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

    ಸಮಂತಾಗೆ ತಾನು ಪ್ಯಾನ್​ ಇಂಡಿಯಾ ಸ್ಟಾರ್​ ಎನ್ನುವ ಖುಷಿಗಿಂತಲೂ ನಮ್ಮ ಮನೆಯ ಶ್ವಾನಗಳಿಗೆ ಅದು ತಿಳಿದಿಲ್ಲ ಎನ್ನುವ ವಾಸ್ತವವೇ ಬಹಳ ಹತ್ತಿರವಾದಂತಿದೆ. ಪ್ಯಾನ್ ಇಂಡಿಯಾ ಎನ್ನುವ ಭ್ರಮೆಯಲ್ಲಿ ಸಮಂತಾ ತೇಲುವುದಕ್ಕಿಂತಲೂ ನಾನು ಅದನ್ನೆಲ್ಲಾ ಮೀರಿ ನಡೆದಿದ್ದೇನೆ. ನನಗೆ ನನ್ನ ಕೆಲಸ ಮುಖ್ಯವೇ ಹೊರತು ಪ್ಯಾನ್​​ ಕ್ರೇಜ್ ಅಲ್ಲ ಎಂದಿದ್ದಾರೆ. ಫ್ಯಾನ್​ಗಳಿಗೆ ಮೆಚ್ಚುಗೆಯಾಗುವ ಸಿನಿಮಾ ಕೊಟ್ಟರೆ ಅಷ್ಟೇ ಸಾಕು ಎನ್ನುವಂತೆ ಉತ್ತರಿಸಿದ್ದಾರೆ.

    MORE
    GALLERIES

  • 57

    Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

    ನನ್ನ ಮುದ್ದಿನ ನಾಯಿಮರಿಗಳಿಗೆ ನನ್ನನ್ನು ಪ್ರೀತಿಸುವುದಷ್ಟೇ ಗೊತ್ತು. ಅವುಗಳಿಗೆ ಪ್ಯಾನ್ ಇಂಡಿಯಾ ಸ್ಟಾರ್ ನಮ್ಮ ಪೂಪು ತೆಗೆಯುತ್ತಿದ್ದಾಳೆ ಎನ್ನುವ ಅರಿವು ಕೂಡ ಇಲ್ಲ. ಅದು ನನ್ನ ಜೀವನದ ಸತ್ಯ ಎನ್ನುವಂತಹ ವಾಸ್ತವದ ಉತ್ತರವನ್ನು ನೀಡಿದ್ದಾರೆ ಸಮಂತಾ.

    MORE
    GALLERIES

  • 67

    Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

    ಸಮಂತಾ ಬದಲಾಗಿದ್ದಾರೆ: ಹೌದು, ಸಮಂತಾ ಈಗ ಬದಲಾಗಿದ್ದಾರೆ. ವೈಯಕ್ತಿಕ ಜೀವನದ ಏರು-ಪೇರು, ಅನಾರೋಗ್ಯ ಅವರ ಬದುಕಿನ ದೃಷ್ಟಿಕೋನವನ್ನು ಬದಲಿಸಿದೆ. ಕೆಲಸವಷ್ಟೇ ಮುಖ್ಯ ಅದರ ಹಿಂದಿರುವ ಸ್ಟಾರ್​​ ಅಹಂ ಅಲ್ಲ ಎನ್ನುವ ಸಾರ್ವಕಾಲೀಕ ಸತ್ಯ ಅವರಿಗೆ ಮನದಟ್ಟಾಗಿದೆ. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ಸಮಂತಾ ರಾಷ್ಟ್ರಾದ್ಯಂತ ಫ್ಯಾನ್ ಫಾಲೋವರ್ಸ್​ ಹೊಂದಿದ್ದಾರೆ.

    MORE
    GALLERIES

  • 77

    Samantha: 'ನನ್ನ ನಾಯಿಗಳ ಮಲವನ್ನು ನಾನೇ ಕ್ಲೀನ್​ ಮಾಡ್ತೀನಿ'; ಹೀಗೆ ಹೇಳಿದ್ದೇಕೆ ಪ್ಯಾನ್​ ಇಂಡಿಯಾ ಸ್ಟಾರ್​ ಸಮಂತಾ

    ನನ್ನ ಜೀವನದಲ್ಲಿ ಬದಲಾವಣೆಗಳಾಗಿಲ್ಲ: ನಾನು ಸ್ಟಾರ್​ ಎನ್ನುವುದು ಸಂಜೆ 6 ಗಂಟೆಯ ತನಕವಷ್ಟೇ. ಆನಂತರ ನಾನು ಎಲ್ಲರಂತೆ ಸಹಜವಾದ ಜೀವನವನ್ನೇ ನಡೆಸುತ್ತೇನೆ ಎನ್ನುತ್ತಾರೆ ಸಮಂತಾ. ನಾನು ಮೊದಲಿನಿಂದಲೂ ಖುಷಿ ಆದಾಗ ಡಿಸ್ನಿ ಸಿನಿಮಾಗಳನ್ನೇ ನೋಡುತ್ತಿದ್ದೆ ಎಂದಿದ್ದಾರೆ. ಅಲ್ಲದೇ ಶಾಕುಂತಲಂ ಪಾತ್ರ ಮುಖ್ಯವಾದುದು. ಮೊದಲಿನಿಂದಲೂ ಈ ರೀತಿಯ ಪಾತ್ರಗಳು ಇಷ್ಟ ಮತ್ತು ಶಾಕುಂತಲಂ ಒಂದು ಪರಿಪೂರ್ಣ ಚಿತ್ರ ಎಂದಿದ್ದಾರೆ.

    MORE
    GALLERIES