Rocking Star Yash: ಹೋರಾಡುತ್ತಲೇ ಸತ್ತರೂ ಬೇಸರವಿಲ್ಲ! ಟೀಕೆಗಳಿಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ
ಧಾರಾವಾಹಿ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗೋದು ಅಂದ್ರೆ ಸುಮ್ನೆ ಅಲ್ಲ. ಅಲ್ಲಿ ಬರುವ ಸವಾಲುಗಳನ್ನು ಎದುರಿಸಬೇಕು. ಅದನ್ನೆಲ್ಲ ಎದುರಿಸಿ, ಗೆದ್ದು ಬೀಗಿದವರು ನಟ ಯಶ್! ಇದೀಗ ತಮ್ಮ ಕಾಲೆಳೆದವರಿಗೆ ಖಡಕ್ ಉತ್ತರ ನೀಡಿದ್ದಾರೆ ರಾಕಿಂಗ್ ಸ್ಟಾರ್.
ಸ್ಯಾಂಡಲ್ವುಡ್ ನಟ ಯಶ್ ಬೆಳೆದು ಬಂದ ಹಾದಿ ಸುಲಭದ್ದಾಗಿಲ್ಲ. ಕಷ್ಟ ಪಟ್ಟು ಹೀರೋ ಆಗಿ ಈಗ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚ್ತಾ ಇದ್ದಾರೆ.
2/ 8
KGF ಮಾಡಿದ ಮೇಲೆ ಆ ರೀತಿಯ ಸಿನಿಮಾಗಳನ್ನೇ ಮಾಡಬೇಕು. ನಿಮಗೆ ಬೇರೆ ವಿಧಿ ಇಲ್ಲ. ಬೇರೆ ಸಿನಿಮಾ ಮಾಡಿದ್ರೆ ಹಿಟ್ ಆಗಲ್ಲ ಎಂದು ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರಂತೆ.
3/ 8
ತಮ್ಮ ವಿರುದ್ಧ ಇಲ್ಲ ಸಲ್ಲದ್ದನ್ನು ಮಾತನಾಡುವವರಿಗೆ ನಟ ಯಶ್ ಸರಿಯಾಗಿ ಉತ್ತರ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಕೆಲವರಿಗೆ ಖಡಕ್ ವಾರ್ನಿಂಗ್ ಅನ್ನೋ ರೀತಿ ಹೇಳಿದ್ದಾರೆ.
4/ 8
'ಗೆಲುವನ್ನು ನಿಭಾಯಿಸುವುದಕ್ಕಿಂತ, ಹೊಸ ಗೆಲುವು ನನಗೆ ಮುಖ್ಯ. ಹೋರಾಡುತ್ತಾ ಮೃತಪಟ್ಟರೆ ನನಗೇನೂ ಬೇಸರವಿಲ್ಲ, ನಾನು ಹೋರಾಟದಲ್ಲೇ ಇದ್ದೀನಲ್ಲ ಅದು ಮುಖ್ಯವಾಗಬೇಕು' ಎಂದು ಯಶ್ ಹೇಳಿದ್ದಾರೆ.
5/ 8
ನಾನು ಸದಾ ಹೊಸದನ್ನು ಹುಡುಕಲು ಫೈಟ್ ಮಾಡುವ ವ್ಯಕ್ತಿ. ಅದರಲ್ಲಿ ನಾನು ನಂಬಿಕೆ ಇಡುತ್ತೇನೆ. ಅದರಲ್ಲೇ ಗೆಲುವು ಸಾಧಿಸುತ್ತೇನೆ ಎಂದು ಯಶ್ ಹೇಳಿದ್ದಾರೆ.
6/ 8
ಯಶ್ ಇತ್ತಿಚೇಗೆ ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಗ್ರ್ಯಾಂಡ್ ಆಗಿ ಆಚರಣೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಹುಟ್ಟುಹಬ್ಬದಂದು ಒಳ್ಳೆ ಸುದ್ದಿ ಹೇಳುವುದಾಗಿ ಹೇಳಿದ್ದರು.
7/ 8
ಆದ್ರೆ ಕಾರಣಾಂತರಗಳಿಂದ ಒಳ್ಳೆ ಸುದ್ದಿ ಹೇಳುವುದನ್ನು ಮುಂದೂಡಿದ್ದರು. ನಾನು ಖಂಡಿತವಾಗಿಯೂ ನಿಮ್ಮ ಕಾಯುವಿಕೆಯನ್ನು ನಿರಾಸೆ ಮಾಡುವುದಿಲ್ಲ ಎಂದು ಹೇಳಿದ್ರು.
8/ 8
ಈಗ ಯಶ್ ಗೆ KGF ಬಿಟ್ರೆ ಬೇರೆ ದಾರಿ ಇಲ್ಲ ಎನ್ನುವ ರೀತಿ ಕೆಲವರು ಮಾತನಾಡಿಕೊಳ್ತಾ ಇದ್ದಾರೆ. ಅದಕ್ಕೆ ಯಶ್ ಈ ರೀತಿ ತಕ್ಕ ಉತ್ತರ ನೀಡಿದ್ದಾರೆ.