ಮಾಜಿ ಪತ್ನಿಯೊಂದಿಗೆ ಗಣಪತಿ ಹಬ್ಬ ಆಚರಿಸಿದ ಹೃತಿಕ್ ರೋಷನ್: ಇಲ್ಲಿವೆ ಚಿತ್ರಗಳು..!
Hrithik Roshan And Suzanne Khan: ಲಾಕ್ಡೌನ್ ಹಾಗೂ ಗಣಪತಿ ಹಬ್ಬ ನಿಜಕ್ಕೂ ನಟ ಹೃತಿಕ್ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದರೆ ತಪ್ಪಾಗದು. ವಿಚ್ಛೇದಿತ ಪತ್ನಿ ಲಾಕ್ಡೌನ್ನಿಂದಾಗಿ ತಮ್ಮ ಮಕ್ಕಳೊಂದಿಗೆ ಹೃತಿಕ್ ಮನೆಗೆ ಬಂದಿದ್ದು ಹಾಗೂ ಈಗ ಎಲ್ಲರೂ ಒಟ್ಟಿಗೆ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಕೊರೋನಾ ಲಾಕ್ಡೌನ್ನಿಂದಾಗಿ ಈ ಸಲ ಗಣಪತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವಂತಿಲ್ಲ. ಇದೇ ಕಾರಣದಿಂದಾಗಿ ಸೆಲೆಬ್ರಿಟಿಗಳು ಈ ಸಲ ತಮ್ಮ ಮನೆ ಮಟ್ಟಿಗೆ ಹಬ್ಬ ಮಾಡಿದ್ದಾರೆ.
2/ 9
ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಗಣಪತಿ ಹಬ್ಬವನ್ನು ಜೋರಾಗಿಯೇ ಸಂಭ್ರಮಿಸಲಾಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳು ದೊಡ್ಡದಾಗಿ ಸ್ನೇಹಿತರನ್ನೆಲ್ಲ ಕರೆದು ಅದ್ಧೂರಿಯಾಗಿ ಗಣಪನ ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದರೆ ಈ ಸಲ ಲಾಕ್ಡೌನ್ನಿಂದಾಗಿ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
3/ 9
ನಟ ಹೃತಿಕ್ ರೋಷನ್ ಸಹ ತಮ್ಮ ಮನೆ ಮಟ್ಟಿಗೆ ಗಣಪತಿ ಹಬ್ಬ ಮಾಡಿದ್ದಾರೆ.
4/ 9
ಪುಟ್ಟದಾಗಿ ಗಣಪನ ಪ್ರತಿಷ್ಠಾಪನೆ ಮಾಡಿ, ಕುಟುಂಬದವರೊಂದಿಗೆ ಸೇರಿ ಪೂಜಿಸಿದ್ದಾರೆ.
5/ 9
ಈ ಸಲದ ಗಣಪತಿ ಹಬ್ಬದಲ್ಲಿ ವಿಶೇಷ ಅಂದರೆ ಹೃತಿಕ್ ಕುಟುಂಬದ ಜೊತೆ ಅವರ ಮಾಜಿ ಪತ್ನಿ ಹಾಗೂ ಮಕ್ಕಳೂ ಸಹ ಭಾಗಿಯಾಗಿದ್ದರು.
6/ 9
ಲಾಕ್ಡೌನ್ ಆರಂಭವಾದಾಗ ಅಪ್ಪನೊಂದಿಗೆ ಮಕ್ಕಳು ಕಾಲ ಕಳೆಯಲಿ ಎಂದು ಸುಸೈನ್ ಹೃತಿಕ್ ಮನೆಗೆ ಶಿಫ್ಟ್ ಆಗಿದ್ದರು. ಅದು ಇನ್ನೂ ಮುಂದುವರೆಯುತ್ತಲೇ ಇದೆ.
7/ 9
ಹೃತಿಕ್ ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನೆ ಸರಳವಾಗಿ ಮನೆಯ ಟೆರೇಸ್ ಮೇಲೆ ನಡೆದಿದೆ.