Box Office Collection: ವರ್ಷದ ಆರಂಭದಲ್ಲೇ ಸೌತ್ ಸಿನಿಮಾಗಳ ಭರ್ಜರಿ ಕಲೆಕ್ಷನ್! ಸೂಪರ್ ಸ್ಟಾರ್ಗಳ ಚಿತ್ರಗಳು ಗಳಿಸಿದ್ದೆಷ್ಟು ಕೋಟಿ?
2023ರ ಆರಂಭದಲ್ಲೇ ಅನೇಕ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದೆ. ಸೌತ್ ಸಿನಿಮಾ ಗ್ರ್ಯಾಂಡ್ ಓಪನಿಂಗ್ ಪಡೆದಿದ್ದು, ಈ ತಿಂಗಳಲ್ಲಿ ರಿಲೀಸ್ ಆದ ಸೌತ್ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಹಣದ ಸುರಿಮಳೆಯಾಗಿದೆ. ಒಂದು ತಿಂಗಳಲ್ಲೇ ಸೌತ್ 700 ಕೋಟಿ ಕಲೆಕ್ಷನ್ ಮಾಡಿದೆ.
ಕಳೆದ ವರ್ಷ ಕೂಡ ಸೌತ್ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿತ್ತು. ಇದೀಗ 2023ರ ಆರಂಭದಲ್ಲೇ ದಳಪತಿ ವಿಜಯ್, ನಟ ಅಜಿತ್ ಸಿನಿಮಾಗಳು ಕೂಡ ಸಖತ್ ಸದ್ದು ಮಾಡಿದೆ. ಸಂಕ್ರಾಂತಿ ಧಮಾಕದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಅಜಿತ್ ಕುಮಾರ್, ದಳಪತಿ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದೆ.
2/ 7
ಜನವರಿಯಲ್ಲಿ ರಿಲೀಸ್ ಆದ ಸೌತ್ ಸಿನಿಮಾಗಳು 700 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಬ್ಯಾಕ್ ಟು ಬ್ಯಾಕ್ 4 ಸಿನಿಮಾಗಳು ರಿಲೀಸ್ ಆಗಿದೆ. ತೆರೆ ಮೇಲೆ ಅಜಿತ್ ಹಾಗೂ ವಿಜಯ್ ಮುಖಾಮುಖಿ ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿಯಾಗಿಯೇ ತುಂಬಿಸಿದೆ.
3/ 7
ದಳಪತಿ ವಿಜಯ್ ಸಿನಿಮಾ ವಾರಿಸು ಹಾಗೂ ಅಜಿತ್ ಅವರ ತುಣಿವು ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಿದ್ದಂತೆ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು. ವಾರಿಸು ಚಿತ್ರ ಸುಮಾರು 230 ಕೋಟಿ ಕಲೆಕ್ಷನ್ ಮಾಡಿದ್ದು, ತುಣಿವು 170 ಕೋಟಿ ಬ್ಯುಸಿನೆಸ್ ಮಾಡಿದೆ.
4/ 7
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಾಲ್ಟರ್ ವೀರಯ್ಯ ಮತ್ತು ಬಾಲಕೃಷ್ಣ ಅಭಿನಯದ ವೀರಸಿಂಹ ರೆಡ್ಡಿ ಚಿತ್ರಗಳು ಕೂಡ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಚಿರಂಜೀವಿ ಸಿನಿಮಾ ಸುಮಾರು 170 ಕೋಟಿ ಕಲೆಕ್ಷನ್ ಮಾಡಿದ್ರೆ ನಂದಮೂರಿ ಸಿನಿಮಾ 125 ಕೋಟಿ ಕಲೆಕ್ಷನ್ ಮಾಡಿದೆ.
5/ 7
ಸಿನಿಮಾಗಳ ಕಲೆಕ್ಷನ್ ಒಟ್ಟು 700 ಕೋಟಿ ತಲುಪಿದೆ. ಈ ನಾಲ್ಕು ಚಿತ್ರಗಳಿಂದ ಸೌತ್ ಇಂಡಸ್ಟ್ರಿ 700 ಕೋಟಿ ಕಲೆಕ್ಷನ್ ಮಾಡಿದೆ. ಈಗಲೂ ಈ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುತ್ತಿದ್ದು, ಶೋ ಹೌಸ್ ಫುಲ್ ಆಗಿದೆ.
6/ 7
ಹಬ್ಬದ ಟೈಮ್ ನಲ್ಲಿ ಸೌತ್ ಫಿಲ್ಮ್ ಇಂಡಸ್ಟ್ರಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಾಲು ಸಾಲು ರಜೆ ಹಿನ್ನೆಲೆ ಚಿತ್ರ ಮಂದಿರ ಫುಲ್ ಆಗಿತ್ತು. ವರ್ಷದ ಆರಂಭದಲ್ಲಿಯೇ 700 ಕೋಟಿ ಕಲೆಕ್ಷನ್ ಮಾಡಿದ್ದು, ಬಾಲಿವುಡ್ನನ್ನು ಬೆರಗುಗೊಳಿಸಿದೆ.
7/ 7
ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆ ರೆಡಿಯಾಗಿದೆ. ಇದು ಜನವರಿ 25 ರಂದು ಬಿಡುಗಡೆಯಾಗಲಿದೆ. ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ವಿವಾದಗಳು ಎದ್ದಿವೆ. ಈಗ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಯಾವ ರೀತಿ ಕಲೆಕ್ಷನ್ ಮಾಡುತ್ತದೆ ಕಾದು ನೋಡಬೇಕಿದೆ.