Ranbir Kapoor & Hrithik Roshan: ರಾಮಾಯಣ ವೆಬ್ ಸಿರೀಸ್ಗೆ ರಣಬೀರ್-ಹೃತಿಕ್ ಸಂಭಾವನೆ ಎಷ್ಟು ಗೊತ್ತಾ?
ಬಾಲಿವುಡ್ ನಟರಾದ ಹೃತಿಕ್ ರೋಷನ್ (Hrithik Roshan) ಮತ್ತು ರಣಬೀರ್ ಕಪೂರ್ (Ranbir Kapoor) ಜೋಡಿ ರಾಮಾಯಣ(Ramayana)ದ ವೆಬ್ ಸಿರೀಸ್ಗೆ 150 ಕೋಟಿ ಪಡೆದುಕೊಂಡಿದೆ. ಇದುವರೆಗೂ ಮಾಡಲಾದ ವಿಶೇಷ ಪಾತ್ರದಲ್ಲಿ ಇಬ್ಬರು ಹ್ಯಾಂಡ್ ಸಮ್ ಸ್ಟಾರ್ ಗಳು ಕಾಣಿಸಿಕೊಳ್ಳಲಿದ್ದಾರೆ. ಇದೀಗ ಇಬ್ಬರು ತೆಗೆದುಕೊಳ್ಳುತ್ತಿರುವ ಸಂಭಾವನೆ ಬಗ್ಗೆ ಬಿಟೌನ್ ನೊಳಗೆ ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ನಿತೇಶ್ ತಿವಾರಿ ನಿರ್ಮಾಣದ 'ರಾಮಾಯಣ' ಚಿತ್ರ ಒಟ್ಟು ಮೂರು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರದ ಬಜೆಟ್ 750 ಕೋಟಿ ಎಂದು ಚಿತ್ರತಂಡ ಅಂದಾಜಿಸಿದೆ.
2/ 6
ಈ ಹಿಂದೆ ಹಲವು ಬಾರಿ ತಮ್ಮದೇ ಶೈಲಿಯಲ್ಲಿ ರಾಮಾಯಣವನ್ನು ನಿರ್ಮಿಸಿದ್ದಾರೆ. ಆದ್ರೆ ರಮಾನಂದ ಸಾಗರ್ (Ramanad Sagar) ಅವರ ರೀತಿಯಲ್ಲಿ 'ರಾಮಾಯಣ'ವನ್ನು ನಿರ್ಮಿಸಲು ಆಗಿಲ್ಲ. ರಮಾನಂದ ಸಾಗರ್ ಅವರ ರಾಮಾಯಣ ಡಿಡಿ ನ್ಯಾಷನಲ್ ನಲ್ಲಿ ಪ್ರಸಾರವಾಗುತ್ತಿತ್ತು. ಕಳೆದ ವರ್ಷ 2020ರ ಲಾಕ್ ಡೌನ್ ವೇಳೆ ಡಿಡಿಯಲ್ಲಿ ರಾಮಾಯಣ ಮರುಪ್ರಸಾರಗೊಂಡು ಜನಮನ ಗಳಿಸಿತ್ತು.
3/ 6
ಇದೀಗ ನಿತೇಶ್ ತಿವಾರಿ ಹೊಸ ತಂತ್ರಜ್ಞಾನ ಮತ್ತು ಕಲಾವಿದರ ಜೊತೆ ರಾಮಾಯಣವನ್ನು ತೆರೆ ಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ. ಬಾಲಿವುಡ್ ಹಂಗಾಮದ ವರದಿ ಪ್ರಕಾರ, ಹೃತಿಕ್ ರೋಷನ್ ರಾವಣನ ಪಾತ್ರದಲ್ಲಿ ಮತ್ತು ರಣಬೀರ್ ಕಪೂರ್ 'ರಾಮ'ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
4/ 6
ನಿತೇಶ್ ತಿವಾರಿ ಮತ್ತು ತಂಡ ಸೀತೆ (Sita) ಪಾತ್ರಕ್ಕೆ ತೀವ್ರ ಶೋಧ ನಡೆಸುತ್ತಿದೆ. ಆರಂಭದಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ (Kareena Kapoor Khan) ಹೆಸರು ಕೇಳಿ ಬಂದಿತ್ತು. ಆದ್ರೆ ಕರೀನಾ ಸಂಭಾವನೆ ಒಪ್ಪಿಗೆಯಾಗದ ಹಿನ್ನೆಲೆ ಚಿತ್ರ ಒಪ್ಪಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.
5/ 6
ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಅಭಿನಯಿಸುತ್ತಿರುವ ಪಾತ್ರಗಳು ಪ್ರಮುಖವಾದದ್ದು. ಹಾಗಾಗಿ ಸಂಭಾವನೆಯನ್ನೂ ಸಮವಾಗಿ ನೀಡಿದೆಯಂತೆ.
6/ 6
ರಾಮಾಯಣದ ವೆಬ್ ಸಿರೀಸ್ (Ramanaya Web Series) ನಲ್ಲಿ ನಟಿಸಲು ಇಬ್ಬರು ನಟರೂ ತಲಾ 75 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. (ವರದಿ: ಮೊಹ್ಮದ್ ರಫೀಕ್ ಕೆ )