ಕನ್ನಡ ಚಿತ್ರರಂಗದ ಖ್ಯಾತ ನಟ ರಾಮಕೃಷ್ಣ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಇವರನ್ನು ನೀರ್ನಳ್ಳಿ ರಾಮಕೃಷ್ಣ ಎಂದೂ ಸಹ ಕರೆಯುತ್ತಾರೆ. ರಂಗನಾಯಕಿ, ಮಾನಸ ಸರೋವರ, ಪಡುವಾರಳ್ಳಿ ಪಾಂಡವರು, ಬೆಂಕಿಯಲ್ಲಿ ಅರಳಿದ ಹೂವು, ಬಬ್ರುವಾಹನ ಹೀಗೆ ಅವರ ನಟನೆಯ ಸಿನಿಮಾಗಳ ಪಟ್ಟಿ ನೋಡುತ್ತ ಹೋಗಬಹುದು.
2/ 10
ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಇವರು ಒಂದುಕಾಲದಲ್ಲಿ ಬಹುಬೇಡಿಕೆಯ ನಟ. 1951 ರಲ್ಲಿ ಜನಸಿದ ರಾಮಕೃಷ್ಣ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಆದ ಚಾಪು ಮೂಡಿಸಿದ್ದರು.
3/ 10
ರಾಮಕೃಷ್ಣ ಅವರು ಶಿರಸಿ ಬಳಿಯ ನೀರ್ನಳ್ಳಿಯಲ್ಲಿರುವ ಹವ್ಯಾಕ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು. ತಮ್ಮ 30 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
4/ 10
ಕನ್ನಡ ಚಿತ್ರರಂಗದ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು 1990ರ ದಶಕದಿಂದ, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
5/ 10
ಒಂದು ಕಾಲದಲ್ಲಿ ಖ್ಯಾತ ನಾಯಕ ನಟನಾಗಿ ಮಿಂಚಿದ್ದ ರಾಮಕೃಷ್ಣ 2013 ರಲ್ಲಿ ರಿಲೀಸ್ ಆದ ಕಿಚ್ಚ ಸುದೀಪ್ ಅಭಿನಯದ ಬಚ್ಚನ್, ಶರಣ್ ಅಭಿನಯದ ರಾಜ ರಾಜೇಂದ್ರ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯ ಮಾಡಿದ್ದರು.
6/ 10
ಇದಾದ ನಂತರ ರಾಮಕೃಷ್ಣ ಅವರು ಕನ್ನಡದ ಯಾವ ಚಿತ್ರಗಳಲ್ಲೂ ಅಷ್ಟಾಗಿ ಕಾಣಿಸಿಕೊಂಡಿಲ್ಲ. ರಾಮಕೃಷ್ಣ ಅವರಿಗೆ ಸಿನಿಮಾ ಅವಕಾಶಗಳು ತೀರಾ ಕಡಿಮೆ ಆಗಿಬಿಟ್ಟವು.
7/ 10
ರಾಮಕೃಷ್ಣ ಅವರು, ಚಂದನವನದ ಲೆಜೆಂಡ್ ನಟರಾದ ಡಾ. ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಅವರಿಗೆ ಮೋಸ ಮಾಡಿದಂತೆ ಆಗುತ್ತಿದೆ ಎಂದು ಇತ್ತೀಚೆಗಷ್ಟೆ ಹೇಳಿದ್ದರು. ಏಕೆಂದರೆ…
8/ 10
ಏಕೆಂದರೆ, ರಾಮಕೃಷ್ಣ ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಾಧನೆ ಮಾಡಬೇಕು ಅಂದುಕೊಂಡಿದ್ದರಂತೆ. ಆದರೆ ಅಂತಹ ಹೇಳಿಕೊಳ್ಳುವ ಸಾಧನೆ ಮಾಡದೇ ಇರುವುದು ಸ್ವತಃ ಅವರಿಗೆ ಬಾರಿ ಬೇಸರ ತಂದಿದೆಯಂತೆ.
9/ 10
ಇನ್ನೂ ಈಗಿನ ಕನ್ನಡ ಯುವ ನಿರ್ದೇಶಕರಂತು ರಾಮಕೃಷ್ಣ ಅವರಿಗೆ ಪಾತ್ರ ನೀಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬುದು ಬಹಳ ನೋವಿನ ಸಂಗತಿಯೇ ಸರಿ.
10/ 10
ಇವರಿಗೆ ಪಾತ್ರ ನೀಡಿದರೂ ಸಣ್ಣ ಪುಟ್ಟ ಪಾತ್ರ ಕೊಡುತ್ತಿದ್ದಾರೆ. ಈ ಕುರಿತು ಸ್ವತಃ ರಾಮಕೃಷ್ಣ ಅವರೇ ಮಾಧ್ಯಮಗಳಿಗೆ ತಮ್ಮ ನೋವಿನ ಮಾತುಗಳನ್ನು ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು.