Urfi Javed-Honey Singh: ದೇಶದ ಹೆಣ್ಮಕ್ಕಳು ಉರ್ಫಿ ನೋಡಿ ಕಲಿಬೇಕು! ಶಾಕಿಂಗ್ ಹೇಳಿಕೆ ಕೊಟ್ಟ ಗಾಯಕ ಹನಿ ಸಿಂಗ್!
ಉರ್ಫಿ ಚಾವೇದ್ (Urfi Javed) ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಾಗುತ್ತೆ. ಒಂದೆಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ಉರ್ಫಿ, ತನ್ನ ಫ್ಯಾಷನ್ ನಿಂದಲೇ ಹೆಚ್ಚು ಜನಪ್ರಿಯರಾಗಿದ್ದಾರೆ.
ವಿಚಿತ್ರ, ವಿಚಿತ್ರ ಬಟ್ಟೆಗಳು ತೊಟ್ಟು ಯಾವಾಗಲೂ ಟ್ರೋಲ್ ಆಗುತ್ತಾರೆ. ಉರ್ಫಿ ಮೈ ತುಂಬಾ ಬಟ್ಟೆ ಹಾಕೋದೇ ಕಮ್ಮಿ ಅದರಲ್ಲೂ ತುಂಡು ಉಡುಗೆಯನ್ನೇ ಹೆಚ್ಚಾಗಿ ಹಾಕ್ತಾರೆ. ಗಾಯಕ ಹನಿ ಸಿಂಗ್ ಉರ್ಫಿ ಜಾವೇದ್ ಅವರನ್ನು ಕೊಂಡಾಡಿದ್ದಾರೆ.
2/ 8
ದೇಶದ ಹೆಣ್ಣುಮಕ್ಕಳು ಉರ್ಫಿ ಜಾವೇದ್ ರೀತಿ ಇರಬೇಕು ಎಂದು ಯೋ ಯೋ ಹನಿ ಸಿಂಗ್ (Yo Yo Honey Singh) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
3/ 8
ಯೋ ಯೋ ಹನಿ ಸಿಂಗ್ ನೀಡಿರುವ ಈ ಹೇಳಿಕೆ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ಹನಿ ಸಿಂಗ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
4/ 8
ವಿವಾದದಲ್ಲಿ ಸಿಲುಕಿಕೊಂಡಿದ್ದ ಯೋ ಯೋ ಹನಿ ಸಿಂಗ್ ಅವರು ಮತ್ತೆ ಈಗ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಹೊಸ ಆಲ್ಬಂ ‘ಹನಿ ಸಿಂಗ್ 3.0′ ಪ್ರಚಾರದ ವೇಳೆ ವಿವಿಧ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಉರ್ಫಿ ಜಾವೇದ್ ಬಗ್ಗೆ ಮೆಚ್ಚುಗೆ ಮಾತಾಡಿದ್ದಾರೆ.
5/ 8
‘ಉರ್ಫಿ ಜಾವೇದ್ ನನಗೆ ತುಂಬ ಇಷ್ಟ ಎಂದು ಹನಿ ಸಿಂಗ್ ಹೇಳಿದ್ದಾರೆ. ಆಕೆ ಬಹಳ ಧೈರ್ಯವಂತೆ. ತನ್ನದೇ ರೀತಿಯಲ್ಲಿ ಆಕೆ ಬದುಕಲು ಬಯಸುತ್ತಾಳೆ. ನಮ್ಮ ದೇಶದ ಎಲ್ಲ ಹುಡುಗಿಯರು ಉರ್ಫಿಯನ್ನು ನೋಡಿ ಕಲಿಯಬೇಕು ಎಂದಿದ್ದಾರೆ.
6/ 8
ಯಾರ ಭಯವೂ ಇಲ್ಲದೇ, ಯಾವ ಹಿಂಜರಿಕೆಯೂ ಇಲ್ಲದೇ ನಿಮಗೆ ಅನಿಸಿದ್ದನ್ನು ಮಾಡಬೇಕು’ ಎಂದು ಹನಿ ಸಿಂಗ್ ಹೇಳಿದ್ದಾರೆ.
7/ 8
ಹನಿ ಸಿಂಗ್ ಹೇಳಿಕೆ ಇದೀಗ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಗಾಯಕ ವಿರುದ್ಧ ಗರಂ ಆಗಿದ್ದು, ಮತ್ತೆ ಹನಿ ಸಿಂಗ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
8/ 8
ಹಿಂದಿ ಬಿಗ್ ಬಾಸ್ ಓಟಿಟಿಯಲ್ಲಿ ಜನಪ್ರಿಯರಾಗಿರುವ ಉರ್ಫಿ ತನ್ನ ವಿಚಿತ್ರ ಫ್ಯಾಷನ್ ನಿಂದ ಅನೇಕರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದಾರೆ.