Deepika Padukone: ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ..!
2017ರಲ್ಲಿ ತೆರೆ ಕಂಡಿದ್ದ ಹಾಲಿವುಡ್ ಸಿನಿಮಾ (Hollywood Movie) XXX ರಿಟರ್ನ್ ಆಫ್ ಸ್ಯಾಂಡರ ಕೇಜ್ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ನಟಿಸಿದ್ದರು. ಈ ಸಿನಿಮಾದ ಮೂಲಕ ದೀಪಿಕಾ ಹಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಈಗ ಇದೇ ನಟಿ ಮತ್ತೊಂದು ಹಾಲಿವುಡ್ ಚಿತ್ರದಲ್ಲಿ ನಟಿಸುವ ತಯಾರಿಯಲ್ಲಿದ್ದಾರೆ. ಈ ಸಲ ಅಭಿನಯದ ಜೊತೆಗೆ ಸಹ ನಿರ್ಮಾಪಕಿ ಸಹ ಆಗಲಿದ್ದಾರೆ. (ಚಿತ್ರಗಳು ಕೃಪೆ: ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಂ ಖಾತೆ)
XXX-ದ ರಿಟರ್ನ್ ಆಫ್ ಸ್ಯಾಂಡರ ಕೇಜ್' ಚಿತ್ರದ ಮೂಲಕ ಹಾಲಿವುಡ್ಗೆ ಎಂಟ್ರಿ ಕೊಟ್ಟ ದೀಪಿಕಾ ಅವರಿಗೆ ಆ ಚಿತ್ರದಿಂದಲೇ ಯಶಸ್ಸು ಕೈ ಹಿಡಿದಿತ್ತು. ಮೊದಲ ಪ್ರಯತ್ನದಲ್ಲಿಯೇ ದೀಪಿಕಾ ಗೆದ್ದಿದ್ದರು.
2/ 13
ವಿನ್ ಡೀಸೆಲ್ ಜತೆ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಅವರಿಗೆ ಹೆಸರನ್ನೂ ತಂದು ಕೊಟ್ಟಿತ್ತು. ಅಲ್ಲದೆ ಆ ಸಿನಿಮಾದಲ್ಲಿ ದೀಪಿಕಾ ಒಂದೂವರೆ ಗಂಟೆ ಕಾಲ ತೆರೆ ಮೇಲೆ ಕಾಣಿಸಿಕೊಂಡಿದ್ದರು.
3/ 13
ಆ ಸಿನಿಮಾದ ನಂತರ ಮತ್ತೆ ದೀಪಿಕಾ ಪಡುಕೋಣೆ ಅವರು ಮತ್ತೊಂದು ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಸಖತ್ ಗುಲ್ಲಾಗಿತ್ತು.
4/ 13
ಹಾಲಿವುಡ್ ಸಿನಿಮಾ ತ್ರಿಬಲ್ ಎಕ್ಸ್ ಚಿತ್ರದ ನಿರ್ದೇಶಕ ಡಿ.ಜೆ.ಕರುಸೊ ಅವರ ಮುಂದಿನ ಚಿತ್ರ XXX4 ನಲ್ಲಿ ದೀಪಿಕಾ ಇರಲಿದ್ದಾರೆ ಎಂದೂ ಹೇಳಲಾಗಿತ್ತು.
5/ 13
XXX-ದ ರಿಟರ್ನ್ ಆಫ್ ಸ್ಯಾಂಡರ ಕೇಜ್' ಚಿತ್ರದ ಬಳಿಕ ದೀಪಿಕಾರ ಎರಡನೇ ಚಿತ್ರ ಯಾವುದೆಂದು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದರು.
6/ 13
ಆಗ ದೀಪಿಕಾ ತಮ್ಮ ಪದ್ಮಾವತ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಈ ಕಾರಣದಿಂದಾಗಿ ತಮ್ಮ ಮುಂದಿನ ಹಾಲಿವುಡ್ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
7/ 13
ಆದರೆ ಈಗ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಖುಷಿಯಾದ ಸುದ್ದಿ ಸಿಕ್ಕಿದೆ. ದೀಪಿಕಾರ ಮುಂದಿನ ಹಾಲಿವುಡ್ ಸಿನಿಮಾ ಕುರಿತಾಗಿ ಸುದ್ದಿ ಬಹಿರಂಗವಾಗಿದೆ.
8/ 13
ಎಸ್ಟಿಎಕ್ಸ್ ಫಿಲಂಸ್ ಜೊತೆ ದೀಪಿಕಾ ಕೈ ಜೋಡಿಸಿದ್ದಾರೆ. ಕ್ರಾಸ್ ಕಲ್ಚರ್ ರೊಮ್ಯಾಂಟಿಕ್ ಕಾಮಿಡಿಯಲ್ಲಿ ದೀಪಿಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಧು ಡೆಡ್ಲೈನ್ ವರದಿ ಮಾಡಿದೆ.
9/ 13
ಕ್ರಾಸ್ ಕಲ್ಚರ್ ರೊಮ್ಯಾಂಟಿಕ್ ಕಾಮಿಡಿ ಪ್ರಾಜೆಕ್ಟ್ ಅನ್ನು ದೀಪಿಕಾ ತಮ್ಮ ಹೋಂ ಪ್ರೊಡಕ್ಷನ್ಸ್ ಕಾ ದಲ್ಲೇ ನಿರ್ಮಿಸಲಿದ್ದಾರಂತೆ.
10/ 13
ಇನ್ನು ದೀಪಿಕಾ ಪಡುಕೋಣೆ ತಮ್ಮ ಹೋಂ ಬ್ಯಾನರ್ನಲ್ಲೇ ಮತ್ತೊಂದು ಹಿಂದಿ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ.
11/ 13
ಹಾಲಿವುಡ್ ಸಿನಿಮಾ ದ ಇಂಟರ್ನ್ ಅನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜತೆ ಅಮಿತಾಭ್ ಬಚ್ಚನ್ ಅವರು ನಟಿಸಲಿದ್ದಾರೆ.
12/ 13
ಈ ಚಿತ್ರದಲ್ಲಿ ಈ ಹಿಂದೆ ರಿಷಿ ಕಪೂರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು,. ಅವರ ಅಗಲಿಕೆಯ ನಂತರ ಈ ಪಾತ್ರಕ್ಕೆ ದೀಪಿಕಾ ಅವರು ಅಮಿತಾಭ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
13/ 13
ಇನ್ನು ರಣವೀರ್ ಸಿಂಗ್ ಜತೆ ನಟಿಸಿರುವ 83 ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಆದರೆ, ಕೊರೋನಾ ಕಾರಣದಿಂದಾಗಿ ಇನ್ನೂ ಚಿತ್ರ ತೆರೆ ಕಂಡಿಲ್ಲ.