Serial Actor: 'ಹಿಟ್ಲರ್ ಕಲ್ಯಾಣ' ನಟ ದಿಲೀಪ್ ರಾಜ್ ಹೊಸ ಮನೆ ಗೃಹ ಪ್ರವೇಶ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಪತ್ನಿ ಶ್ರೀವಿದ್ಯಾ ಜೊತೆಗೆ ಹೊಸ ಮನೆಗೆ ಕಾಲಿಟ್ಟ 'ಹಿಟ್ಲರ್ ಕಲ್ಯಾಣ' ನಟ ದಿಲೀಪ್ ರಾಜ್
'ಹಿಟ್ಲರ್ ಕಲ್ಯಾಣ' ಧಾರಾವಾಹಿ (Serial) ನಟಿ ದಿಲೀಪ್ ರಾಜ್ (Dileep Raj) ಹಾಗೂ ಶ್ರೀವಿದ್ಯಾ (Sri vidya) ದಂಪತಿಯ ನೂತನ ಮನೆಯ ಪ್ರವೇಶದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ಹಿಟ್ಲರ್ ಕಲ್ಯಾಣ' ಧಾರಾವಾಹಿ ನಟಿ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ದಂಪತಿಯ ನೂತನ ಮನೆಯ ಗೃಹ ಪ್ರವೇಶ ಅದ್ಧೂರಿಯಾಗಿ ನಡೆದಿದೆ. ಹೊಸ ಮನೆಗೆ ಕಾಲಿಟ್ಟ ದಂಪತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
2/ 8
ಸದ್ಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಪಾತ್ರದಲ್ಲಿ ದಿಲೀಪ್ ರಾಜ್ ಮಿಂಚುತ್ತಿದ್ದಾರೆ ಧಾರಾವಾಹಿ ಸಹ ಸಖತ್ ಹಿಟ್ ಆಗಿದೆ.
3/ 8
ಈ ಹಿಂದೆ ಸಹ ಹಲವು ಸೀರಿಯಲ್, ಚಲನಚಿತ್ರಗಳಲ್ಲಿ ನಟಿಸಿದ್ದಾರೆ. `ಕಂಬದ ಮನೆ' ಧಾರಾವಾಹಿಯಲ್ಲಿ ಅವಕಾಶ ಪಡೆದ ಇವರು ನಂತರ `ಜನನಿ',`ಅರ್ಧ ಸತ್ಯ',`ರಂಗೋಲಿ',`ಕುಂಕುಮ ಭಾಗ್ಯ',`ಮಾಂಗಲ್ಯ',`ಪ್ರೀತಿಗಾಗಿ' ಮುಂತಾದ ಸೀರಿಯಲ್ ಗಳಲ್ಲಿ ಅಭಿನಯಿಸಿದರು.
4/ 8
2005 ರಲ್ಲಿ ತೆರೆಕಂಡ `ಬಾಯ್ ಫ್ರೆಂಡ್' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಇವರು ನಂತರ `ಮಿಲನ' ಚಿತ್ರದ ಖಳನಾಯಕನ ಪಾತ್ರದಲ್ಲಿ ಮಿಂಚಿದರು.
5/ 8
`7 ಓ ಕ್ಲಾಕ್',`ಕ್ಷಣ ಕ್ಷಣ' ಚಿತ್ರಗಳಲ್ಲಿ ನಟಿಸಿದ 24ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ದಿಲೀಪ್, ಮತ್ತೆ ರಥಸಪ್ತಮಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ರು
6/ 8
ಹಲವು ಚಿತ್ರಗಳಲ್ಲಿ ಅಭಿನಯಿಸಿರೋ ದಿಲೀಪ್ ರಾಜ್ ಅವರು ಕೆಲ ಚಿತ್ರಗಳಿಗೆ ಧ್ವನಿ ಕೂಡ ನೀಡಿದ್ದಾರೆ
7/ 8
ಸಿನಿಮಾ, ಧಾರಾವಾಹಿಗಳಲ್ಲಿ ನಟನೆಯ ಜೊತೆ ದಿಲೀಪ್ ರಾಜ್ ಕೆಲವು ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ.
8/ 8
ಶ್ರೀವಿದ್ಯಾರನ್ನು ವಿವಾಹವಾಗಿರೋ ದಿಲೀಪ್ ರಾಜ್ಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.