ನೀವು ತುಂಬ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ. ಆದರಿಂದ ನಿಮ್ಮ ವೀಸಾ ಯಾಕೆ ರದ್ದು ಮಾಡಬಾರದು ಅಂತ 10 ತಿಂಗಳ ಹಿಂದೆ(ಜೂನ್ 8 22) ಶೋಕಾಸ್ ನೋಟೀಸ್ ನೀಡಿದ್ದರು ಎಂದಿದ್ದಾರೆ. ಆಗ ಗೃಹ ಇಲಾಖೆಗೆ ಹೋಗಿ ಎಲ್ಲ ದಾಖಲೆ ಸಲ್ಲಿಸಿ ಬಂದಿದ್ದೆ. ನಿನ್ನೆ ಮತ್ತೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ ಅಂತ ವೀಸಾ ರದ್ದು ನೋಟೀಸ್ ನೀಡಿದ್ದಾರೆ ಎಂದು ನಟ ಹೇಳಿದ್ದರು.
ಜೈಲಿಗೆ ಹಾಕುವುದಲ್ಲದೇ ನನ್ನನ್ನು ದೇಶದಲ್ಲೂ ಇರಬಾರದು ಅಂತ ವೀಸಾ ರದ್ದು ಮಾಡಿದ್ದಾರೆ ಎಂದಿದ್ದಾರೆ. ನಾನು ಲಾಯರ್ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ದವಾಗಿ ಸ್ಟೇ ತರುತ್ತೇನೆ, ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಟೈಂ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ಸ್ಟೇ ತರುತ್ತೇನೆ ಎಂದಿದ್ದರು. ಅದರಂತೆಯೇ ಈಗ ಸದ್ಯ ನಟನಿಗೆ ರಿಲೀಫ್ ಸಿಕ್ಕಿದೆ.