Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

Nani Dasara: ನಾಯಕ ನಾನಿ ಇನ್ನೇನು ಕೆಲವೇ ದಿನಗಳಲ್ಲಿ ದಸರಾ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇತ್ತೀಚೆಗಷ್ಟೇ ನಾನಿ ಈ ಸಿನಿಮಾ ಪ್ರಚಾರಕ್ಕೆ ತೆರಳಿದ್ದ ವೇಳೆ ಶೂಟಿಂಗ್ ಟೈಮ್​ನಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

First published:

  • 18

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ನಾನಿ ತಮ್ಮ ನಟನಾ ಪ್ರತಿಭೆಯಿಂದ ನ್ಯಾಚುರಲ್ ಸ್ಟಾರ್ ಎನಿಸಿಕೊಂಡಿದ್ದಾರೆ. ಟಾಲಿವುಡ್​ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ದಸರಾ ಸಿನಿಮಾ ನಾನಿ ಅವರ ಕೆರಿಯರ್​ನಲ್ಲಿ ವಿಭಿನ್ನ ಸಿನಿಮಾವಾಗಿ ಮೂಡಿಬರುತ್ತಿದೆ.

    MORE
    GALLERIES

  • 28

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿರುವ ಈ ಚಿತ್ರದ ಮೂಲಕ ಶ್ರೀಕಾಂತ್ ಒಡೆಲಾ ಅವರು ತಮ್ಮ ಚೊಚ್ಚಲ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಮಾರ್ಚ್ 30 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

    MORE
    GALLERIES

  • 38

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ಸಿನಿಮಾ ರಿಲೀಸ್ ಆಗಲು ಕೆಲ ದಿನಗಳು ಬಾಕಿ ಇದ್ದು, ನಿರ್ಮಾಪಕರು ಚಿತ್ರದ ಪ್ರಚಾರದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ನಾನಿ ಹಲವು ಸಂದರ್ಶನಗಳಲ್ಲಿ ಸಿನಿಮಾ ಬಗ್ಗೆ ಮಾತಾಡಿದ್ರು. ಈ ಸಿನಿಮಾಗೆ ಸಂಬಂಧಿಸಿದ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಭಯಾನಕ ಘಟನೆಯೊಂದನ್ನು ನಾನಿ ಹಂಚಿಕೊಂಡಿದ್ದಾರೆ.

    MORE
    GALLERIES

  • 48

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ಸಿನಿಮಾ ಕಥೆ ಕಲ್ಲಿದ್ದಲು ಗಣಿಗಾರಿಕೆ ಹಿನ್ನೆಲೆಯನ್ನ ಒಳಗೊಂಡಿದೆ. ಈ ಸಿನಿಮಾದಲ್ಲಿ ನಾನಿ ಪ್ರಯೋಗಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಆದರೆ ಒಂದು ದೃಶ್ಯದಲ್ಲಿ ಡಂಪರ್ ಟ್ರಕ್ ಕಲ್ಲಿದ್ದಲು ಸಾಗಿಸಿ ಸುರಿಯುತ್ತಿದ್ದಾಗ ನಾನಿ ಡಂಪರ್ ಟ್ರಕ್ ನಿಂದ ಕೆಳಗೆ ಬಿದ್ದಾಗ ಕಲ್ಲಿದ್ದಲು ನಾನಿ ಮೇಲೆ ಬಿದ್ದಿತಂತೆ.

    MORE
    GALLERIES

  • 58

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ನಾನು ಡಂಪರ್​ನಿಂದ ಕೆಳಗೆ ಬಿದ್ದೆ. ಕಲ್ಲಿದ್ದಲಿನ ಕೆಳಗಿದ್ದ ನನ್ನನ್ನು ಎಳೆಯಲು ಸ್ವಲ್ಪ ಸಮಯ ಬೇಕಾಯ್ತು. ಆ ಸಮಯದಲ್ಲಿ ನನಗೆ ಉಸಿರು ಕಟ್ಟಿತ್ತು. ಉಸಿರಾಡುವುದು ತುಂಬಾ ಕಷ್ಟವಾಗಿ ನರಕದ ದರ್ಶನವಾಗಿದೆ ಎಂದು ನಾನಿ ಹೇಳಿದ್ದಾರೆ. ಆ ದೃಶ್ಯದ ಚಿತ್ರೀಕರಣದ ನಂತರವೂ ಆ ಘಟನೆ ನೆನಪಾದಾಗಲೆಲ್ಲಾ ನನಗೆ ನಿದ್ದೆ ಬರುತ್ತಿರಲಿಲ್ಲ ಎಂದು ನಾನಿ ಹೇಳಿದ್ದಾರೆ.

    MORE
    GALLERIES

  • 68

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ಈ ಅಘಾತದಿಂದ ಹೊರಬರಲು ಹಲವು ದಿನಗಳು ಬೇಕಾಯಿತು. ಜೊತೆಗೆ ದಸರಾ ಸಿನಿಮಾಗೆ ಸಂಬಂಧಿಸಿದ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದಸರಾ ಚಿತ್ರದ ಮೂಲಕ ಸೂಪರ್ ಸಕ್ಸಸ್ ನಿರೀಕ್ಷೆಯಲ್ಲಿರುವ ನಾನಿ ಈ ಚಿತ್ರಕ್ಕಾಗಿ ತುಂಬಾ ವರ್ಕೌಟ್ ಮಾಡ್ತಿದ್ದಾರೆ.

    MORE
    GALLERIES

  • 78

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ದಸರಾ ಸಿನಿಮಾದಲ್ಲಿ ನಾನಿ ಎದುರು ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ದಸರಾ ಫಸ್ಟ್ ಲುಕ್, ಗ್ಲಿಂಪ್ಸ್, ಟೀಸರ್ ಮತ್ತು ಟ್ರೇಲರ್ ಚಿತ್ರದ ಮೇಲೆ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈ ಚಿತ್ರದಲ್ಲಿ ನಾನಿ ಮಾಸ್ ಆ್ಯಕ್ಷನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

    MORE
    GALLERIES

  • 88

    Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು

    ತೆಲಂಗಾಣದ ಗೋದಾವರಿ ಸಮೀಪದ ಸಿಂಗರೇಣಿ ಪ್ರದೇಶದ ಹಳ್ಳಿಯ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ದಸರಾ ಚಿತ್ರ ಬಿಡುಗಡೆಯಾಗಲಿದೆ. ನಾನಿ ಅಭಿಮಾನಿಗಳು ಈ ಸಿನಿಮಾದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

    MORE
    GALLERIES