ಬಾಲ ಶಿವನ ಅವತಾರದಲ್ಲಿ ಪವನ್​ ಒಡೆಯರ್​-ಅಪೇಕ್ಷಾ ಪುರೋಹಿತ್​ ಮಗ ಶೌರ್ಯ..!

ಯುವ ನಿರ್ದೇಶಕ ಪವನ್​ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿಗೆ ಕಳೆದ ಡಿ.10ರಂದು ಗುಂಡು ಮಗುವಾಯಿತು. ಅದರಲ್ಲೂ ಅಂದಿನ ವಿಶೇಷತೆ ಅಂದರೆ ಪವನ್​ ಒಡೆಯರ್​ ಹುಟ್ಟುಹಬ್ಬದಂದೇ ಅವರ ಮೊದಲ ಸಂತಾನ ಈ ಭೂಮಿಗೆ ಕಾಲಿಟ್ಟಿದ್ದು. ಈ ವಿಷಯವನ್ನು ಬಹಳ ಖುಷಿಯಿಂದ ಹಂಚಿಕೊಂಡಿದ್ದರು ಈ ಯುವ ನಿರ್ದೇಶಕ. ಈಗ ಈ ಜೋಡಿ ಮಗನ ಲಾಲನೆ-ಪಾಲನೆಯಲ್ಲಿ ಅಪ್ಪ-ಅಮ್ಮನಾಗಿರುವ ಖುಷಿಯನ್ನು ಎಂಜಾಯ್​ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಪವನ್​ ಹಾಗೂ ಅಪೇಕ್ಷಾ ಪುರೋಹಿತ್​ ಇನ್​ಸ್ಟಾಗ್ರಾಂ ಖಾತೆ)

First published: