ಆಲಿಯಾ ಭಟ್ ಅಭಿನಯದ 'ಡಾರ್ಲಿಂಗ್ಸ್' ಚಿತ್ರ ಭಾರೀ ಚರ್ಚೆಯಲ್ಲಿದೆ. ತನ್ನ ಸಖತ್ ನಟನೆಯಿಂದ ಜನಮನ ಗೆದ್ದಿರುವ ಆಲಿಯಾ ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹೊಸ ಪಯಣ ಆರಂಭಿಸುತ್ತಿದ್ದಾರೆ. 'ಡಾರ್ಲಿಂಗ್ಸ್' ಆಗಸ್ಟ್ 5 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುತ್ತಿದೆ. 'ಡಾರ್ಲಿಂಗ್ಸ್' ಒಂದು ಕಾಮಿಡಿ ಡ್ರಾಮಾ ಚಿತ್ರ. ಮುಂಬೈನಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಹೆಣಗಾಡುವ ತಾಯಿ-ಮಗಳ ಜೀವನವನ್ನು ಈ ಚಿತ್ರ ಬಿಂಬಿಸಲಿದೆ. ಚಿತ್ರದಲ್ಲಿ ಆಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರ ಇದೇ ಅಗಸ್ಟ್ ನಲ್ಲಿ ತೆರೆಕಾಣಲಿದೆ. ಅದ್ವೈತ್ ಚಂದನ್ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ನಿರ್ದೇಶಕರು. ಟ್ರೇಲರ್ನಲ್ಲಿನ ಅಮೀರ್ ಅವರ ಅದ್ಭುತ ರೂಪಾಂತರವು ಅಭಿಮಾನಿಗಳನ್ನು ಆಕರ್ಷಿಸಿದೆ ಮತ್ತು ಆಗಸ್ಟ್ 11 ರಂದು ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಗಸ್ಟ್ 11 ರವರೆಗೆ ಕಾಯಬೇಕು.
'ದೊಬಾರಾ' ವೈಜ್ಞಾನಿಕ ಕಾಲ್ಪನಿಕ ಥ್ರಿಲ್ಲರ್ ಚಿತ್ರವಾಗಿದ್ದು, ಇದು 2018 ರ ಸ್ಪ್ಯಾನಿಷ್ ಚಲನಚಿತ್ರ 'ಮಿರಾಜ್' ನ ಹಿಂದಿ ರಿಮೇಕ್ ಆಗಿದೆ. ಈ ಚಿತ್ರವನ್ನು ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ಮತ್ತು ಸುನೀರ್ ಖೇತರ್ಪಾಲ್ ಮತ್ತು ಗೌರವ್ ಬೋಸ್ (ಅಥೇನಾ) ಜಂಟಿಯಾಗಿ ನಿರ್ಮಿಸಿದ್ದಾರೆ. ಇದು ಆಗಸ್ಟ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸೌತ್ ಸೆನ್ಸೇಶನ್ ವಿಜಯ್ ದೇವರಕೊಂಡ ಕರಣ್ ಜೋಹರ್ ಅವರ ಲಿಗರ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಲಿಗರ್ MMA ಫೈಟರ್ನ ಕಥೆಯಾಗಿದೆ. ಈ ಚಿತ್ರದಲ್ಲಿ ವಿಜಯ್ ಜೊತೆ ಅನನ್ಯಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಆಗಸ್ಟ್ 25 ರಂದು 5 ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.