ಪೋಷಕ ನಟನಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟು, ನಂತರದಲ್ಲಿ ಹಾಸ್ಯ ಪಾತ್ರಗಳಲ್ಲಿ ಸಿನಿಪ್ರಿಯರನ್ನು ನಗೆಗಡಲಿನಲ್ಲಿ ತೇಲಿಸಿದ ನಟ ಶರಣ್ (Actor Sharan) ಈಗ ಸ್ಯಾಂಡಲ್ವುಡ್ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಸ್ಯಾಂಡಲ್ವುಡ್ ಅಧ್ಯಕ್ಷ ಎಂದೇ ಖ್ಯಾತರಾಗಿರುವ ಶರಣ್ ಅವರ ಮುದ್ದಿನ ಮಗಳು ಪುಣ್ಯ (Punya) ಎಷ್ಟು ಕ್ಯೂಟ್ ಆಗಿದ್ದಾಳೆ ಗೊತ್ತಾ..? (ಚಿತ್ರಗಳು ಕೃಪೆ: ಶರಣ್ ಇನ್ಸ್ಟಾಗ್ರಾಂ ಖಾತೆ)
ಸ್ಯಾಂಡಲ್ವುಡ್ ಅಧ್ಯಕ್ಷ ಎಂದೇ ಖ್ಯಾತರಾಗಿರುವ ನಟ ಶರಣ್. ಅಧ್ಯಕ್ಷ ಸಿನಿಮಾ ಮಾಡಿದಾಗಿನಿಂದ ಅವರ ಹೆಸರಿನ ಜೊತೆ ಅಧ್ಯಕ್ಷ ಅನ್ನೋ ಪದ ಸಹ ಸೇರಿಕೊಂಡು ಬಿಟ್ಟಿತ್ತು. ತಮ್ಮ ಶ್ರಮದಿಂದಲೇ ಈ ಮಟ್ಟಕ್ಕೆ ಬೆಳೆದಿರುವ ಶರಣ್ ಅವರು ಈಗ ಸಾಲು ಸಾಲು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
2/ 7
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ಶರಣ್ ಅವರು ಆಗೊಂದು ಈಗೊಂದು ಅಂತ ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಕುಟುಂಬಕ್ಕಿಂತ ಹೆಚ್ಚಾಗಿ ಮುದ್ದಿನ ಮಗಳ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
3/ 7
ಹಬ್ಬವಿರಲಿ, ಯಾವುದೇ ವಿಶೇಷ ಸಂದರ್ಭವಿರಲಿ... ಎಲ್ಲದರಲ್ಲೂ ಮಗಳ ಚಿತ್ರವನ್ನು ಹಂಚಿಕೊಳ್ಳುತ್ತಾ ಖುಷಿ ಪಡುತ್ತಾರೆ ನಟ ಶರಣ್. ಸಮಯ ಸಿಕ್ಕಾಗಲೆಲ್ಲ ಮಗಳ ಫೋಟೋಗಳನ್ನು ತೆಗೆಯುತ್ತಾ ಖುಷಿ ಪಡುವ ನಟ ಮಗಳ ದಿನದಂದು ಪುಣ್ಯ ಜೊತೆಗಿನ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದರು.
4/ 7
ಮಗಳು ಪುಣ್ಯಾಳ ಮುದ್ದಾದ ನಗುವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ದಿನ ಕಳೆಯುವೆ ಎನ್ನುವ ಶರಣ್ ಅವರ ಮಗಳ ಕೆಲವು ಮುದ್ದಾದ ಫೋಟೋಗಳು ಇಲ್ಲಿವೆ. ನಕ್ಕರೆ ಅಪ್ಪನಂತೆಯೇ ಕಾಣುತ್ತಾಳೆ ಈ ಸ್ಟಾರ್ ಕಿಡ್.
5/ 7
ಶರಣ್ ಅವರ ಮಗಳು ಪುಣ್ಯ ಅಪ್ಪನ ಅಭಿನಯದ ಅವತಾರ ಪುರುಷ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ ಪುರುಷ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ.
6/ 7
ಎರಡು ಭಾಗಗಳಲ್ಲಿ ತೆರೆಗೆ ಬರಲಿರುವ ಅವತಾರ ಪುರುಷ ಸಿನಿಮಾದ ಚಿತ್ರೀಕರಣದ ವೇಳೆ ನಡೆದಿದ್ದ ಅವಘಡದಿಂದ ಶರಣ್ ಆಸ್ಪತ್ರೆ ಸೇರಿದ್ದರು.
7/ 7
ಪುಣ್ಯ ಅಭಿನಯದ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಪುಣ್ಯಾಳ ಹುಟ್ಟುಹಬ್ಬದಂದು ರಿಲೀಸ್ ಆಗಿತ್ತು.ಈ ಸಿನಿಮಾದಲ್ಲಿ ಶರಣ್ ಅವರಿಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಕಳೆದ ಮೇ ತಿಂಗಳಿನಲ್ಲೇ ಇದು ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ ರಿಲೀಸ್ ದಿನಾಂಕವನ್ನು ಮುಂದೂಡಲಾಯಿತು.