ಮತ್ತೆ ಸುದ್ದಿಯಲ್ಲಿದ್ದಾರೆ ಸ್ಯಾಂಡಲ್ವುಡ್ ನಟಿ Sruthi Hariharan
ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಮಾಡಿದ್ದ ಶ್ರುತಿ ಹರಿಹರನ್ ಅವರು ಸಿನಿರಂಗದಿಂದ ದೂರ ಉಳಿದಿದ್ದರು. ಈಗ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿರುವ ಶ್ರುತಿ ಹರಿಹರನ್ ಇತ್ತೀಚೆಗಷ್ಟೆ ಹೆಡ್ ಬುಷ್ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಬಹಿರಂಗವಾಯಿತು. ಈಗ ಈ ನಟಿಯ ಫೋಟೋಶೂಟ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ಶ್ರುತಿ ಹರಿಹರನ್ ಇನ್ಸ್ಟಾಗ್ರಾಂ ಖಾತೆ)
ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶ್ರುತಿ ಹರಿಹರನ್ ಈ ಹಿಂದೆ ಮೀಟೂ ಅಭಿಯಾನ ಆರಂಭವಾದಾಗ ಅವರೂ ಸಹ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
2/ 8
ಆ ಆರೋಪ ಮಾಡಿದ ನಂತರ ಶ್ರುತಿ ಅವರು ಸ್ಯಾಂಡಲ್ವುಡ್ ಸಿನಿಮಾಗಳಿಂದ ಕೊಂಚ ದೂರ ಇದ್ದರು. ಈಗ ಈ ನಟಿ ಮೆಲ್ಲನೆ ಸಿನಿರಂಗದತ್ತ ಮುಖ ಮಾಡಿದ್ದಾರೆ. ಮೊದಲಿಗೆ ಫೋಟೋಶೂಟ್ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು.
3/ 8
ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ವುಡ್ ಕಡೆ ಮುಖ ಮಾಡಿದ್ದಾರೆ. ಹೌದು, ಹೆಡ್ ಬುಷ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ಶ್ರುತಿ ಹರಿಹರನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
4/ 8
ಇತ್ತೀಚೆಗಷ್ಟೆ ಶ್ರುತಿ ಹರಿಹರನ್ ಅವರನ್ನು ಹೆಡ್ ಬುಷ್ ಚಿತ್ರತಂಡಕ್ಕೆ ಸ್ವಾಗತಿಸಿ ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಹಾಗೂ ಹೆಡ್ ಬುಷ್ ಚಿತ್ರತಂಡ ಪೋಸ್ಟ್ ಹಂಚಿಕೊಂಡಿದ್ದರು.
5/ 8
ಈಗ ಇದೇ ನಟಿ ತಮ್ಮ ಫೋಟೋಶೂಟ್ನ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿದ್ದಾರೆ. ಒಂದರ ಹಿಂದೆ ಒಂದರಂತೆ ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಿದ್ದಾರೆ ಶ್ರುತಿ.
6/ 8
ಹೆಡ್ ಬುಷ್ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಶೂನ್ಯ ಅವರು ಈ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೆಡ್ ಬುಷ್ ಸಿನಿಮಾ ಧನಂಜಯ್ ಅವರ ಹೋಮ್ ಬ್ಯಾನರ್ ಡಾಲಿ ಪ್ರೊಡಕ್ಷನ್ನಲ್ಲಿ ನಿರ್ಮಾಣವಾಗುತ್ತಿದೆ.
7/ 8
ಬೆಂಗಳೂರಿನ ಮೊದಲ ಭೂಗತ ಲೋಕದ ಡಾನ್ ಆಗಿದ್ದ ಎಂ. ಪಿ. ಜಯರಾಜ್ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಹೀಗಾಗಿಯೇ ಈ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
8/ 8
ಮದುವೆ ಹಾಗೂ ಮಗು ಅಂತ ಕುಟುಂಬದ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದ ಶ್ರುತಿ ಈಗ ಮತ್ತೆ ಸ್ಯಾಂಡಲ್ವುಡ್ ಸಿನಿಮಾದತ್ತ ಗಮನ ಹರಿಸಿದ್ದಾರೆ. ಹೆಡ್ ಬುಷ್ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.